________________
गणिनी आर्यिकारत्न श्री ज्ञानमती अभिवन्दन ग्रन्थ
[३६९
ಆಚಾರ್ಯ ಸಂಘವು ಹರಿಯುತ್ತಿರುವ ಗಂಗೆಯಂತೆ ಮಹಾವೀರಜೀಯಿಂದ ದಾರಿಯಲ್ಲಿ ಸಿಗುವ ಊರು-ಜನಗಳಿಗೆ ಧರ್ಮಾಮೃತದ ನೀರನ್ನು ಕುಡಿಸುತ್ತಾ ಪುನಃ ಉತ್ತರ ಪ್ರದೇಶಕ್ಕೆ ಮುಟ್ಟಿತ್ತು. ಆಗ ಚಾತುರ್ಮಾಸ ಹತ್ತಿರ ಇತ್ತು.
ಟಿಕೃತ ನಗರದಿಂದ 6 ಕಿ.ಮೀ. ದೂರದಲ್ಲಿ ದರಿಯಾಬಾದ್ ಇತ್ತು. ಅಲ್ಲಿಗೆ ಆಚಾರ್ಯರ ಸಂಘವು ಬಂದು ನಿಂತಿತ್ತು. ಅಲ್ಲಿಗೆ ಟಿಕೃತ ನಗರದ ಎಷ್ಟೋ ಜನ ಊರ ಪ್ರಮುಖರು ಆಚಾರ್ಯರನ್ನು ಚಾತುರ್ಮಾಸಕ್ಕೆ ಆಹ್ವಾನಿಸಲು ಬಂದರು. 105 ಕ್ಷು ವೀರಮತಿ ಮಾತಾಜೀ (ಮೈನಾದೇವಿ)ಯ ತಂದೆ ಛೋಟೆಲಾಲರೂ ಸಹ ಮಗಳ ಮೋಹದಿಂದ ಆಚಾರ್ಯರಿಗೆ ಆಹ್ವಾನಕೊಟ್ಟರು.
ಸಂಯೋಗ ವಶದಿಂದ ಕ್ಷು ವೀರಮತಿ ಮಾತಾಜೀಯವರ ಜನ್ಮಭೂಮಿಯಲ್ಲಿ ಆಚಾರ್ಯರ ಜೊತೆಗೆ ಚಾತುರ್ಮಾಸವು ನೆರವೇರಿತು. ಚಾತುರ್ಮಾಸದಲ್ಲಿ ಸತತವಾಗಿ ಧ್ಯಾನ, ಅಧ್ಯಯನಾದಿಗಳೇ ಮುಖ್ಯವಾಗಿದ್ದವು. ಮಾತಾಜೀಯವರ ತಂದೆ-ತಾಯಿಯವರು ಬಂದು ಮಗಳೊಡನೆ ಮಾತಾಡಲು ಇಚ್ಚಿಸುತ್ತಿದ್ದರು. ಆದರೆ ಮಾತಾಜೀಯವರು ಉಪೇಕ್ಷಿಸುತ್ತಿದ್ದರು.
ಸನ್ 1953 ರಲ್ಲಿ ಇವರಿಗೆ ಒಬ್ಬರು ಕೈು ವಿಶಾಲಮತಿ ಮಾತಾಜೀ ಸಿಕ್ಕಿದರು. ಅವರನ್ನೆ ದೊಡ್ಡವರು ಎಂದು ತಿಳಿದು ತಾಯಿಯ ಹಾಗೆ ಪ್ರೀತಿಸುತ್ತಿದ್ದರು.
ಒಂದು ಸಲ ಸಂಘಕ್ಕೆ ಒಂದು ಸಮಾಚಾರವು ಕುಂಥಲಗಿರಿಯಿಂದ ಬಂತು. ಅಲ್ಲಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಮಹಾರಾಜರು 'ಯಮ ಸಲ್ಲೇಖನ ವ್ರತವನ್ನು ಧಾರಣೆ ಮಾಡುವವರಿದ್ದಾರೆ ಎಂದು. ಆಗ ಕ್ಷು ವೀರಮತಿಜೀಯವರಿಗೆ ಅವರ ದರ್ಶನ ಮಾಡಬೇಕೆಂಬ ಆಶೆಯು ಜಾಗೃತವಾಯಿತು. ಗುರು ಶ್ರೀ ಆಚಾರ್ಯ ದೇಶಭೂಷಣರಿಂದ ಅನುಮತಿ ಪಡೆದು ಕ್ಷು ವಿಶಾಲಮತಿಯರೊಡನೆ ದಕ್ಷಿಣ ಭಾರತದ ಯಾತ್ರೆಯನ್ನು ಮಾಡುತ್ತಾ ಮಸವಾಡವನ್ನು ತಲುಪಿದರು. ಅಲ್ಲಿಯೆ ಇಬ್ಬರು ಕ್ಷು ಮಾತಾಜೀಯವರು ವರ್ಪಾಯೋಗವನ್ನು ಕೈಗೊಂಡರು. ಚಾತುರ್ಮಾಸದ ಮಧ್ಯ ಭಾದ್ರಪದದಲ್ಲಿ ಅಕಸ್ಮಾತ್ ಸಮಾಚಾರ ಸಿಕ್ಕಿತು. ಆಚಾರ್ಯರು ಯಮ ಸಲ್ಲೇಖನವನ್ನು ಸ್ವೀಕರಿಸಿದ್ದಾರೆಂದು. ಆಗ ಕ್ಷು ವಿಶಾಲಮತಿಜೀಯವರ ಜೊತೆಯಲ್ಲಿ ಕ್ಷು ಶ್ರೀ ವಿರಮತಿಜೀಯವರು ಕುಂಥಲಗಿರಿಗೆ ಬಂದರು. ಅವರ ಜೊತೆಯಲ್ಲಿ ಸೋನಾಬಾಯಿ ಎಂಬ ಮಹಿಳೆಯು ಇದ್ದಳು. ಇವರೆ ಮುಂದೆ ಜ್ಞಾನಮತಿ ಮಾತಾಜೀಯವರಿಂದ ದೀಕ್ಷೆ ಸ್ವೀಕರಿಸಿ ಮುಂದೆ ಪದ್ಮಾವತಿ ಮಾತಾಜಿ ಆದರು.
ಸಲ್ಲೇಖನಾ ವ್ರತದ ಮೊದಲು ಒಂದು ದಿನ ಕು, ವೀರಮತಿಜೀಯವರು ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರಲ್ಲಿ ಪ್ರಾರ್ಥಿಸಿಕೊಂಡು ಹೀಗೆ ಹೇಳಿದರು. “ಎಲೈ ಗುರುದೇವ! ನನಗೆ ಸಂಸಾರ ಸಮುದ್ರದಿಂದ ಪಾರುಮಾಡುವಂಥ “ಆರ್ಜಿಕಾ' ದೀಕ್ಷೆಯನ್ನು ದಯಪಾಲಿಸಿ.
ಗವನ್ನು ಕೈಗೊಂಡ
ಕುಂಥಲಗಿರಿಗೆ ಬಂದ ಸಲ್ಲೇಖನವನು
ಆಚಾರ್ಯ ಶ್ರೀಯವರು ಮೃದು ಶಬ್ದದಿಂದ ಹೀಗೆ ಹೇಳಿದರು. “ಈಗ ನಾನು ಯಾರಿಗೂ ದೀಕ್ಷೆ ಕೊಡುವುದಿಲ್ಲ ಅಂತ ನಿಯಮವನ್ನು ಮಾಡಿಕೊಂಡಿದ್ದೇನೆ. ನನ್ನ ಶಿಷ್ಯ ಮುನಿ ವೀರಸಾಗರ ಮಹಾರಾಜರು ಇದ್ದಾರೆ. ಅವರ ಸಂಘದಲ್ಲಿ ಜ್ಞಾನವೃದ್ದ ವಯೋವೃದ್ಧ ಆರ್ಯಿಕೆಯರು ಇದ್ದಾರೆ. ನೀನು ಅವರ ಸಂಘದಲ್ಲಿಯೇ ಇದ್ದು ದೀಕ್ಷೆಯನ್ನು ಸ್ವೀಕರಿಸು ಎಂದು ಹೇಳಿದರು.
ಸನ್ 1955, 18 ಸೆಪ್ಟೆಂಬರ್ ಭಾದ್ರಪದ ಶುದ್ದ ದೀತಿಯ ರವಿವಾರದ ದಿನ ಬೆಳಿಗ್ಗೆ 7.50 ಕ್ಕೆ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು ಶಾಂತಿಯಿಂದ “ಓಂ ಸಿದ್ಧಾಯ ನಮಃ'' ಎಂದು ಮಂತ್ರ ಉಚ್ಚಾರಣೆ ಮಾಡುತ್ತಾ ಈ ನಶ್ವರ ಶರೀರ ತ್ಯಾಗ ಮಾಡಿದರು.
ಆಚಾರ್ಯರು ಮಹಾ ತಪಸ್ವಿಗಳು, ತ್ಯಾಗಿಗಳು, ವಾಗ್ರಿಗಳು, ಚಾರಿತ್ರ ಚಕ್ರವರ್ತಿಗಳು ಆಗಿ ಎಲ್ಲರಿಗೂ ಆದರ್ಶ ಆಚಾರ್ಯರು, ಮುನಿಗಳೂ ಆಗಿದ್ದರು. ವರ್ತಮಾನದಲ್ಲಿ ನಶಿಸಿ ಹೋಗುತ್ತಿರುವ ಮುನಿಝರ್ಮವನ್ನು ಪುನಃ ಪ್ರಚಾರ, ಉದ್ದಾರ ಮಾಡಿದ ಕೀರ್ತಿಯು ಶ್ರೀ. ವಿ. ಆಚಾರ್ಯ ಶಾಂತಿಸಾಗರ ಮುನಿಮಹಾರಾಜರಿಗೆ ಸೇರುತ್ತದೆ.
ಸಲ್ಲೇಖನದ ನಂತರ ಇಬ್ಬರೂ ಕ್ಷುಲ್ಲಿಕೆಯರು ಗುರುವಿಯೋಗದ ದುಃಖದಿಂದ ತಪ್ತರಾಗಿ ಮಸವಡಕ್ಕೆ ಬಂದರು. ಮೊದಲಿನಂತೆ ಧ್ಯಾನ, ಅಧ್ಯಯನದಲ್ಲಿಯೆ ಸಮಯವನ್ನು ಕಳೆಯುತ್ತಿದ್ದರು. ಅವರ ಜೊತೆಯಲ್ಲಿ ಕುಂ. ಪ್ರಭಾವತಿ ಮತ್ತು ಸೋನುಬಾಯಿ ಇವರಿಬ್ಬರೂ ಸಹ ಮಾತಾಜೀಯವರ ಜೊತೆಯಲ್ಲಿಯೇ ಇದ್ದು ಜ್ಞಾನಾರ್ಜನೆಯನ್ನು ಮಾಡುತ್ತ ಕೊನೆಗೆ ವೈರಾಗ್ಯವನ್ನೆ ತಾಳಿದರು.
ವೈರಾಗಿಯ ಹತ್ತಿರವಿರುವ ರಾಗಿಗೂ ಕೂಡ ಒಂದು ಕ್ಷಣಕ್ಕಾದರೂ ವೈರಾಗ್ಯ ಉತ್ಪನ್ನವಾಗಿಯೇ ಆಗುತ್ತದೆ. ಇದೇ ರೀತಿಯಲ್ಲಿ ಶಿಷ್ಯ ಪ್ರಭಾವತಿಯ ವೈರಾಗ್ಯವನ್ನು ನೋಡಿ ಒಂದು ದಿನ ಕ್ಷು ವೀರಮತಿಜೀಯವರು ಕೇಳಿದರು “ನೀನು ಮನೆಯನ್ನು ಏಕೆ ಬಿಡಲು ಇಚ್ಚಿಸುತ್ತಿರುವೆ? ಪ್ರಭಾವತಿ-ಅಮ್ಮಾ ನನಗೆ ಸ್ವತಂತ್ರ ಜೀವನವೇ ಒಳ್ಳೆಯದಾಗಿ ಕಾಣುತ್ತದೆ. ನಾನು ಈಗ ತಮ್ಮ ಜೊತೆಯಲ್ಲಿ ಇರಲು ಇಚ್ಚಿಸುವೆನು,
ಈ ಪ್ರಕಾರವಾದ ಕ್ಷು ವೀರಮತಿಜೀಯವರಿಗೆ ಮೊದಲನೇ ಶಿಷ್ಯಳಾಗಿ ಕು. ಪ್ರಭಾವತಿಯು ಸಿಕ್ಕಳು. ಕ್ಷು ವಿಶಾಲಮತಿಜೀಯವರ ಅನುಮತಿಯಂತೆ ದೀಪಾವಳಿಯ ದಿನ ಬೆಳಿಗ್ಗೆ ಆಜೀವನ ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು.
ಚಾತುರ್ಮಾಸದನಂತರ ಕ್ಷು ವೀರಮತಿಜೀಯವರು ಆರ್ಜೀಕಾ ದೀಕ್ಷೆಯನ್ನು ಪಡೆಯಲು ತಮ್ಮ ಸಹೋದರರೊಂದಿಗೆ ಆಚಾರ್ಯ ವೀರಸಾಗರ ಮುನಿಮಹಾರಾಜರ ದರ್ಶನಕ್ಕೆ ಜಯಪುರಕ್ಕೆ ಹೋದರು.
ಜಯಪುರವನ್ನು ತಲುಪಿದ ಬಳಿಕ ಕ್ಷು ವೀರಮತಿ ಮಾತಾಜೀಯವರು ತಮ್ಮ ಶಿಷ್ಯರುಗಳೊಂದಿಗೆ ಆಚಾರ್ಯರ ದರ್ಶನ ಮಾಡಿ, ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಅಂತಿಮದ ಅನುಮತಿಯನ್ನು ತಿಳಿಸುತ್ತಾ ಆರ್ಜಿಕಾ ದೀಕ್ಷೆಯನ್ನು ಕೇಳಿದರು.
Jain Educationa international
For Personal and Private Use Only
www.jainelibrary.org