________________
364]
वीर ज्ञानोदय ग्रन्थमाला
ದಿನವಿಡೀ ಗಲಾಟ್-ಗಲಾಟೆ. ಆದರೆ ಇವೆಲ್ಲ ನೀರಿನ ಮೇಲೆ ಹೋಮ ಮಾಡಿದಂತೆ ಆಯಿತು. ಕೊನೆಗೂ ಮೈನಾಳು ತಾಯಿಯನ್ನು ಒಲಿಸಿದಳು. ತಾಯಿಗೆನೇ ವೈರಾಗ್ಯ ಬರುವಂತೆ ಮಾಡಿದಳು, ತಾಯಿ, ಮಗಳಿಗೆ ರಾತ್ರಿಯೆಲ್ಲಾ ಚರ್ಚೆಯೇ ಚರ್ಚೆ, ಮೈನಾ ತಾಯಿಗೆ ಹೀಗೆ ಹೇಳಿದಳು.
“ಅಮ್ಮಾ ನೀನು ನಿಜವಾದ ತಾಯಿಯಾದರೆ ನನಗೆ ಆತ್ಮಕಲ್ಯಾಣ ಮಾಡಿಕೊಳ್ಳಲು ಅನುಮತಿ ಕೊಡು. ನಿನ್ನ ಉಪಕಾರವನ್ನು ಜೀವವಿಡೀ ಮರೆಯುವುದಿಲ್ಲ''
ಮೈನಾ ಎಲ್ಲಾ ರೀತಿಯ ಆಹಾರವನ್ನು ಬಿಟ್ಟದ್ದನ್ನು ನೋಡಿ ತಾಯಿಗೆ ಬಹಳ ವ್ಯಥೆಯಾಯಿತು, ಮತ್ತು ಮಗಳ ಭವಿಷ್ಯ ಒಳ್ಳೆಯದು ಆಗಲಿ ಎಂದು ಆಶೀರ್ವದಿಸಿ ಮಗಳಿಗೆ ದೀಕ್ಷೆಗೆ ಅನುಮತಿ ಕೊಟ್ಟಳು. ತಂದೆಯಂತೂ ಮಗಳ ವಿಯೋಗವನ್ನು ಕಂಡು ದುಃಖದಿಂದ ಎಲ್ಲಿಗೋ ಹೋಗಿದ್ದರು.
ಮೈನಾಳು ತಾಯಿ ಕೈಗೆ ಒಂದು ಕಾಗದ ಮತ್ತು ಬೆನ್ನನ್ನು ಕೊಟ್ಟಳು ಮತ್ತು ಹೀಗೆ ಹೇಳಿದಳು. ಆಚಾರ್ಯ ಶ್ರೀಯವರು ಹೇಳಿದ್ದಾರೆ ಮನೆಯವರ “ಅನುಮತಿ ಇಲ್ಲದೆ ಯಾರಿಗೂ ದೀಕ್ಷೆ ಕೊಡಲು ಆಗುವುದಿಲ್ಲ ಅಂತ.
- ತಾಯಿ ಮೋಹಿನೀ ದೇವಿಯು ಮಗಳ ಹೇಳಿಕೆಯಂತೆ ಕಣ್ಣಲ್ಲಿ ನೀರು ಸುರಿಸುತ್ತಾ ಬರೆಯಲಾರಂಭಿಸಿದಳು ಹೀಗೆ-'ಪ.ಪೂ, ಮುನಿ ಮಹಾರಾಜರೇ! ನನ್ನ ಮಗಳು ಮೈನಾಳಿಗೆ, ಯಾವ ವ್ರತವನ್ನು ಇಚ್ಚಿಸುತ್ತಾಳೆ ಆ ವ್ರತವನ್ನು ತಾವು ಸಂತೋಷಪೂರ್ವಕವಾಗಿ ಕೊಡಿರಿ. ನನಗೆ ನಂಬಿಕೆಯಿದೆ ಇವಳು ತಾವು ಕೊಟ್ಟ ವ್ರತವನ್ನು ನಿರ್ದೋಷವಾಗಿ ಆಚರಿಸುತ್ತಾಳೆಂದು”.
ಪತ್ರವನ್ನು ಬರೆದು ಮಗಳಿಗೆ ಹೇಳುತ್ತಾಳೆ “ಪ್ರೀತಿಯ ಮಗಳೇ! ಮೈನಾ, ಹೇಗೆ ನಿನ್ನನ್ನು ನಾನು ಸಂಸಾರದಿಂದ ಬಿಡುಗಡೆ ಮಾಡಿದೆನೋ ಹಾಗೆಯೇ ನನ್ನನ್ನೂ ಕೂಡ ಸಂಸಾರ ಸಮುದ್ರದಿಂದ ನಿವೃತ್ತಿ ಮಾಡಿ ಮೋಕ್ಷದ ದಾರಿಯನ್ನು ತೋರಿಸು ಎಂದಳು.
ಯಾವ ತಾಯಿಯು ಈ ಕಾಲದಲ್ಲಿ ಮಗಳನ್ನು ಕಾಡಿಗೆ ಅಟ್ಟಿಯಾಳು?
ಯಾವ ತಾಯಿಯು ತನ್ನ ಮೊದಲನೇ ಮಗಳನ್ನು ಲೋಕೋದ್ಧಾರಕ್ಕಾಗಿ ಧಾರೆ ಎರೆದಿದ್ದಾಳೋ ಅದೇ ರೀತಿಯಲ್ಲಿ ಪ್ರತಿಯೋರ್ವ ತಾಯಂದಿರು ಒಬ್ಬೊಬ್ಬರನ್ನು ಮೋಹಿನಿಯ ಹಾಗೆ ಮಮತೆ ತೊರೆದು ಸಮಾಜದ ಉದ್ಧಾರಕ್ಕಾಗಿ ಯಾರು ಮಕ್ಕಳ ಧಾರೆ ಎರೆಯುತ್ತಾರೋ ಆ ತಾಯಿಯವರಿಗೆ ಅನೇಕ ಧನ್ಯವಾದಗಳು.
ಮೈನಾಳಿಗೆ ಆಗಷ್ಟೆ 16 ವರ್ಷ ತುಂಬಿದ್ದವು. ತಾಯಿ ಮೋಹಿನೀದೇವಿ ಹಾಗು ಮಗಳು ಮೈನಾದೇವಿ ಇಬ್ಬರು ಸ್ನಾನ ಮುಗಿಸಿ ದೇವರ ದರ್ಶನ ಮಾಡಿ ಆಚಾರ್ಯ ಶ್ರೀ ದೇಶಭೂಷಣ ಮುನಿಗಳ ಸನ್ನಿಧಿಗೆ ಹೋಗಿ ಭಕ್ತಿಯಿಂದ ಅವರಿಗೆ ನಮಸ್ಕರಿಸಿ, ಕೈ ನಡಗುತ್ತಾ ಈ ಕಾಗದವನ್ನು ಆಚಾರ್ಯರ ಕೈಗೆ ಕೊಟ್ಟರು, ಮತ್ತು ಹೀಗೆ ಹೇಳಿದರು. “ಗುರುವರ್ಯರೇ! ತಾವು ಈ ಕಾಗದವನ್ನು ಓದಿ ಗುಪ್ತರೀತಿಯಲ್ಲಿಟ್ಟುಕೊಳ್ಳಿರಿ”, ಆಚಾರ್ಯವರ್ಯರು ಈ ಕಾಗದವನ್ನು ಓದಿ ಆಶ್ಚರ್ಯದಿಂದ ಮೋಹಿನೀ ದೇವಿಯ ಕಡೆಗೆ ತಿರುಗಿ ನೋಡಿದರು. ಆಗ ಮೋಹಿನಿಯ ಕಣ್ಣಿನಿಂದ ಟಪಟಪ ನೀರು ಬೀಳುತಿತ್ತು.
ಈಗಂತೂ ಎಲ್ಲಾ ಕೆಲಸಗಳು ಒಂದು ಕ್ಷಣದಲ್ಲಿ ಆದವು. ಮೈನಾದೇವಿಯು ಆಚಾರ್ಯರಿಗೆ ಶ್ರೀ ಫಲವನೇರಿಸಿ ಆಜನ್ಮ ಬ್ರಹ್ಮಚರ್ಯ ವ್ರತವನ್ನು ಧರಿಸಿ, ಸಪ್ತಮ ಪ್ರತಿಮೆ ಧರಿಸಿ ಗೃಹ ತ್ಯಾಗಿಯಾದಳು, ಈ ಎಳೆ ವಯಸ್ಸಿನ ಕನ್ಯಯ ಧೈರ್ಯವನ್ನು ಕಂಡು ಬಾರಾಬಂಕಿಯ ಜನರು ಆಶ್ಚರ್ಯದಿಂದ ಬೆರಗಾದರು. ಇಡೀ ನಗರವೇ ಮೈನಾದೇವಿಗೆ ಧನ್ಯವಾದವನ್ನು ಅರ್ಪಿಸಿತು. ಅವಳಿಗಷ್ಟೆಯಲ್ಲ ಹೆತ್ತು ಹೊತ್ತು ಸಾಕಿದ ಮೋಹಿನಿದೇವಿಗೂ ಕೂಡ.
ಮೈನಾಳು ತಾನು ಈ ಭೂಲೋಕದಲ್ಲಿ ಹಾಗು ತನ್ನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಎಂದು ಮನಸ್ಸಿನಲ್ಲಿ ಅಂದುಕೊಂಡಳು. ತಂದೆ, ತಾಯಿ, ತಮ್ಮ ತಂಗಿ ಇತರ ಬಳಗದವರು ಈ ದೃಶ್ಯವನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕೊನೆಗೂ ಮೈನಾಳು ತನ್ನ ಅಭಿಪ್ಪ ಕಾರ್ಯವನ್ನು ಸಾಧಿಸಿಕೊಂಡಳು. ನೊಂದ ಪರಿವಾರದವರು ಮೈನಾಳಿಗೆ ಶುಭ ಹಾರೈಸಿ ಶ್ರೀ ಆಚಾರ್ಯ ದೇಶಭೂಷಣ ಮುನಿಗಳ ಪಾದಕಮಲದಲ್ಲಿ ಅರ್ಪಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.
ಈಗ ಮೈನಾಳು ಪೂರ್ವಾಶ್ರಮದ ಎಲ್ಲವನ್ನೂ ಬಿಟ್ಟು ಪುನರ್ಜನ್ಯವನ್ನು ತಾಳಿ ಈ ಜನ್ಮದಲ್ಲಿ ತನ್ನ ಆತನನ್ನು ಉದ್ದಾರ ಮಾಡುವುದು, ಜೊತೆಗೆ ಸಮಾಜದ ಉದ್ದಾರ ಎಂದು ತಿಳಿದು ಸದಾ ಕಾಲ ಗುರುಗಳ ಆಜ್ಞೆಯನ್ನು ಪಡೆದು ಶಾಂತ ಚಿತ್ತದಿಂದ ಧ್ಯಾನ ಮತ್ತು ಜ್ಞಾನದಲ್ಲಿಯೇ ತನ್ನ ಸಮಯವನ್ನು ಕಳೆಯುತ್ತಿದ್ದಳು. ಬ್ರಹ್ಮಚರ್ಯ ಅವಸ್ಥೆಯಲ್ಲಿ ಆರ್ಜಿಕಾದ, ನಿಯಮಗಳನ್ನು ಪಾಲಿಸುತ್ತಿದ್ದಳು. ಒಂದೇ ಶುದ್ಧ ಆಹಾರವನ್ನು ಸ್ವೀಕರಿಸಿ ಶಾಂತ ಚಿತ್ತದಿಂದ ಇರುತ್ತಿದ್ದಳು.
ದೀಕ್ಷೆಯ ಕಡೆ ಮನಸ್ಸು ಶ್ರೀ 108 ಆಚಾರ್ಯ'ರತ್ನ ದೇಶಭೂಷಣ ಮುನಿಮಹಾರಾಜರು ಬಾರಾಬಂಕಿಯಲ್ಲಿ ಚಾತುರ್ಮಾಸವನ್ನು ಮುಗಿಸಿ ಅಲ್ಲಿಂದ ಲಖನ, ಸೋನಾಗಿರಿ ಮೊದಲಾದ ಕ್ಷೇತ್ರಗಳನ್ನು ದರ್ಶನ ಮಾಡುತ್ತಾ “ಶ್ರೀ ಮಹಾವೀರ ಜೀ' ಕೇತ್ರಕ್ಕೆ ಬಂದರು. ಬ್ರ. ಮೈನಾದೇವಿಗೆ ಒಂದು ಶುಭ ಮುಹೂರ್ತವನ್ನು ನೋಡಿದರು. ಚೈತ್ರ, ಕೃಷ್ಣಪಾಡ್ಯ ದಿನದಂದು ಶುಭ ಮುಹೂರ್ತದಲ್ಲಿ ಆಚಾರ್ಯ ಶ್ರೀಯವರು ಬ್ರ. ಮೈನಾಗೆ ಕ್ಷುಲ್ಲಿಕಾ ದೀಕ್ಷಾವನ್ನು ಕೊಟ್ಟು ಅವರ ಪರಾಕ್ರಮವನ್ನು ನೋಡಿದ ಆಚಾರ್ಯರು “ವೀರಮತಿ' ಮಾತಾಜಿ ಎಂದು ನಾಮಕರಣ ಮಾಡಿದರು. ಇದು ಮೈನಾಳ ಎರಡನೇ ಪುರುಷಾರ್ಥವಾಗಿತ್ತು, ದೀಕ್ಷೆಯ ನಂತರ ಈ ಹೊಸ ಮಾತಾಜಿಗೆ ಕ್ಷು ಬ್ರಹ್ಮತೀ ಮಾತಾಜೀಯವರು ಜೊತೆಯಾದವರು. ಆಮೇಲೆ ಈ ಇಬ್ಬರು ಕ್ಷು ಮಾತಾಜೀಯವರು ಸಂಘದಲ್ಲಿ ಒಟ್ಟಿಗೆ ಇರುತ್ತಿದ್ದರು,
Jain Educationa international
For Personal and Private Use Only
www.jainelibrary.org