________________
गणिनी आर्यिकारत्न श्री ज्ञानमती अभिवन्दन ग्रन्थ
[३७३
ಎಲ್ಲಾ ಸಾಧನೆಗಳಲ್ಲಿ ಧ್ಯಾನದ ಸಾಧನೆಯು ಜೀವನದ ಒಂದು ಮುಖ್ಯ ಅಂಗವಾಗಿದೆ. ನಾವೆಲ್ಲರು ಸಂಸಾರದಲ್ಲಿದ್ದುಕೊಂಡು ಪ್ರತಿ ಕ್ಷಣದಲ್ಲಿಯೂ ಒಂದಲ್ಲಾ ಒಂದು ರೀತಿಯ ಧ್ಯಾನವನ್ನು ಮಾಡುತ್ತೇವೆ. ಧ್ಯಾನವು ನಾಲ್ಕು ರೀತಿ ಇದೆ. ಆರ್ತ, ರೌದ್ರ, ಧರ್ಮ ಮತ್ತು ಶುಕ್ಲ ಧ್ಯಾನ,
ಆರ್ತ ಮತ್ತು ರೌದ್ರ ಧ್ಯಾನಗಳ ಸರಪಳಿಯಲ್ಲಿ ಸಿಕ್ಕಿ ಈ ಜೀವವು ಅನಾದಿಕಾಲದಿಂದ ಈ ಸಂಸಾರ ಚಕ್ರದಲ್ಲಿ ತಿರುಗುತ್ತಾ ಬಂದಿದೆ. ಈ ಸಂಸಾರಕ್ಕೆ ಆರ್ತ, ರೌದ್ರ ಧ್ಯಾನಗಳೇ ಕಾರಣ. ಇದರಿಂದ ದೂರವಿದ್ದು ಪೂಜ್ಯ ಜ್ಞಾನಮತಿ ಮಾತಾಜೀಯವರು ಧರ್ಮಧ್ಯಾನದ ಸಾಧನೆಯಲ್ಲಿ ತೊಡಗಿದ್ದಾರೆ. ಏಕೆಂದರೆ ಶುಕ್ಲ ಧ್ಯಾನವಂತೂ ಶ್ರಾವಕರಿಗೆ ಬಿಟ್ಟು ಈಗಿನ ಮುನಿಗಳಿಗೂ ಆಗುವುದು ಅಸಂಭವವಾಗಿದೆ. ಆದ್ದರಿಂದ ಪ್ರತಿಯೊಂದು ಆತ್ಮವು ಸದಾ ಕಾಲ ಧರ್ಮ ಧ್ಯಾನದಿಂದ ಸಮಯವನ್ನು ಕಳೆಯಬೇಕು. ಈ ಚಾತುರ್ಮಾಸದ ಮಧ್ಯದಲ್ಲಿ ಜ್ಞಾನಮತಿ ಮಾತಾಜೀಯವರು 15 ದಿನ ಅಖಂಡ ಮೌನ ಆಚರಿಸಿ ವಿಂಧ್ಯಗಿರಿಯ ಪರ್ವತದಲ್ಲಿ ಭ. ಬಾಹುಬಲಿಯ ಸಮ್ಮುಖದಲ್ಲಿ ಧ್ಯಾನ ಮಾಡಲಾರಂಭಿಸಿದರು. ಅವರ ಶಿಷ್ಯರಾದ 'ಪದ್ಮಾವತೀ ಮಾತಾಜೀ' ಮಾತ್ರ ಅವರ ಜೊತೆಯಲ್ಲಿ ಇರುತ್ತಿದ್ದರು, ಬಾಕಿ ತ್ಯಾಗಿಗಳು ಕೆಳಗಿರುತ್ತಿದ್ದರು. ಮಾತಾಜಿ ಕೇವಲ ಆಹಾರಕ್ಕೆ ಮಾತ್ರ ಕೆಳಗೆ ಬರುತ್ತಿದ್ದರು. ಆಮೇಲೆ ಪುನಃ ಪರ್ವತದ ಮೇಲೆ ಹೋಗಿ ಧ್ಯಾನದಿಂದಲೇ ಸಮಯ ಕಳೆಯುತ್ತಿದ್ದರು. ರಾತ್ರಿಯಲ್ಲಿ ಸ್ವಲ್ಪ ಹೊತ್ತು ಮಲಗಿ ಬಾಕಿ ಸಮಯವನ್ನು ಧ್ಯಾನದಲ್ಲಿಯೇ ಕಳೆಯುತ್ತಿದ್ದರು.
ಒಂದು ದಿನ ರಾತ್ರಿಯಲ್ಲಿ ಮಾತಾಜೀಯವರು ಧ್ಯಾನದಲ್ಲಿರುವವರಿಗೆ ಪ್ರಕಾಶಮಾನವಾದ ಒಂದು ಜೋತಿ ಪುಂಜವು ಅಕೃತಿಮ ಜಿನ ಚೈತ್ಯಾಲಯದ ರಚನೆಯಂತೆ ಭಾಸವಾಗಿತ್ತು.” ಎತ್ತರವಾದ ಸುಮೇರು ಪರ್ವತ, ಗಂಗಾ, ಸಿಂಧು ಮೊದಲಾದ ನದಿಗಳು ವಿದೇಹ ಕೇತ್ರಗಳು, ಪ್ರಾಕೃತಿಕ ಸೌಂದರ್ಯಕ್ಕೆ ಸಂಬಂಧಪಟ್ಟ ಎಷೋ ಚಿತ್ರಗಳು ಅವರ ದೃಷ್ಟಿಗೆ ಬಂದಿವೆ. ಇದೇನೋ ಯಾವುದೋ ಸಿದ್ದಿಯಂತೆ ಈ ಅಪೂರ್ವವಾದ ದೃಶ್ಯವನ್ನು ನೋಡಿ ಜ್ಞಾನಮತಿ ಮಾತಾಜೀಯವರಿಗೆ ಎಲ್ಲಿಲ್ಲದ ಆನಂದವೇ ಆನಂದವಾಯಿತು. ಬೆಳಿಗ್ಗೆ ಅವರು ಬೆಟ್ಟದಿಂದ ಕೆಳಗೆ ಇಳಿದು ಬಂದು ಅವರಲ್ಲಿರುವಂತಹ ಎಲ್ಲಾ ಗ್ರಂಥಗಳನ್ನು ಬಿಚ್ಚಿ-ಬಿಚ್ಚಿ ದೃಷ್ಟಿ ಹರಿಸಿ ನೋಡಲಾರಂಭಿಸಿದರು. ತಿರೀಯಪಣ್ಣ ಮತ್ತು ತ್ರಿಲೋರೀಕಸಾರ ಈ ಗ್ರಂಥಗಳಲ್ಲಿ ಏನು ವರ್ಣನೆಯ ರಚನೆ ಇತ್ತೋ ಹಾಗೇನೆ ಅಂತದ್ದನ್ನೆ ಇವರು ತಮ್ಮ ಧ್ಯಾನದಲ್ಲಿ ಕಂಡದ್ದು ಅದನ್ನು ನೋಡಿ ಮಾತಾಜಿಗೆ ಆನಂದವೇ ಆನಂದವಾಗಿತ್ತು, ಈಗಂತೂ ಪ್ರತಿದಿನ ಆ ಚೈತ್ಯಾಲಯಗಳ ವಂದನೆಯೇ ಇವರ ಧ್ಯಾನದ ಧಾರೆ ಹರಿಯ ತೊಡಗಿತ್ತು.
ಈ ಸಂಸ್ಥಾನವಿಚಯ ಧರ್ಮ ಧ್ಯಾನವು ಮುಗಿದ ಮೇಲೆ ಶ್ರೀ ಮಾತಾಜೀಯವರು ತಮ್ಮ ಮೌನ ವ್ರತವನ್ನು ಬಿಟ್ಟರು ಮತ್ತು ತಮ್ಮ ಶಿಷ್ಯರುಗಳಿಗೆ ಈ ವಿಷಯವನ್ನು ತಿಳಿಸಿದರು.
ಆದರು ಈ ಜಂಬೂದೀಪ ಮೊದಲಾದ ಆಕೃತಿಮ ಚೈತ್ಯಾಲಯಗಳ ರಚನೆಯು ಕರಣಾನುಯೋಗದಲ್ಲಿ 2000 ಸಾವಿರ ವರ್ಷಗಳ ಹಿಂದೆಯೇ ಬರೆಯಲಾಗಿತ್ತು. ಹೀಗಿದ್ದರೂ ಕೂಡ ಇದನ್ನು ಯಾರು ತಮ್ಮ ಗಮನಕ್ಕೆ ತೆಗೆದುಕೊಂಡಿಲ್ಲ ಹಿಂದುಸ್ತಾನದಲ್ಲಿ ಅನೇಕ ಕಡೆಗಳಲ್ಲಿ ನಂದೀಶ್ವರದೀಪ, ಸಮವಸರಣ, ಮೊದಲಾದ ರಚನೆಗಳು ನಿರ್ಮಾಣವಾಗಿವೆ. ಆದರೆ ಜಂಬೂದ್ವೀಪದಂತೆ ಮಹಾನ್ ಕಾರ್ಯವು ಜನಸಾಮಾನ್ಯರಿಗೆ ತಿಳಿವಳಿಕೆ ಹಾಗೂ ರಚನಾತ್ಮಕ ರೀತಿಯಲ್ಲಿ ಮಾಡಿ ತೋರಿಸಿದ ಕೀರ್ತಿಯು ಪೂ. ಮಾತಾಜೀಯವರಿಗೇನೇ ಸಲ್ಲುತ್ತದೆ.
ಸಂಯೋಗವಶದಿಂದ ಪೂ, ಮಾತಾಜೀಯವರು ಜಂಬೂದ್ವೀಪದ ಚಿಂತನೆಯನ್ನು ತಮ್ಮ ಧ್ಯಾನದ ಮೂಲಕ ಮಾಡಿದ್ದು ದಕ್ಷಿಣ ಭಾರತದ ಮುಖ್ಯ ತೀರ್ಥಕ್ಷೇತ್ರವಾದ ಶ್ರೀ ಶ್ರವಣಬೆಳಗೊಳದಲ್ಲಿ ಅದರ ಸಾಕಾರ ಮಾಡಿದ್ದು ಉತ್ತರದಲ್ಲಿ - ಈ ಕಾರಣದಿಂದ ಹಸ್ತಿನಾಪುರದ ಸಂಬಂಧವು ದಕ್ಷಿಣಕ್ಕು ಸೇರಿಕೊಂಡಿದೆ. ಈ ರೀತಿಯಲ್ಲಿ ಹಿಂದುಸ್ತಾನದ ಜನರು ಹಿಂದಿನಕ್ಕಿಂತ ಈಗ ಬಾಹುಬಲಿ ಸ್ವಾಮಿಯ ದರ್ಶನಕ್ಕೆ ಶ್ರವಣಬೆಳಗೊಳಕ್ಕೆ ಬರುತ್ತಿದ್ದಾರೆ. ಹೀಗೆಯೆ ಭಾರತದ ಆದ್ಯಂತದಿಂದ ಜಂಬೂದ್ವೀಪವನ್ನು ನೋಡಲು ಹಸ್ತಿನಾಪುರಕ್ಕೆ ಬರುತ್ತಾರೆ.
ಇದು ಪೂ. ೫ ಜ್ಞಾನಮತಿ ಮಾತಾಜೀಯವರ ಸಾಧನೆ, ಹಾಗೂ ತಪಸ್ಸಿನ ಪ್ರಭಾವವೇ ಸರಿ. ಏಕೆಂದರೆ ಹಸ್ತಿನಾಪುರ ಒಂದು ಭಯಂಕರವಾದ ಕಾಡು, ಹಗಲಲ್ಲೂ ಜನರು ಓಡಾಡಲು ಭಯಪಡುತ್ತಿದ್ದರು. ಈಗ ಜನರು ಮಧ್ಯ ರಾತ್ರಿಯಲ್ಲೂ ನಿರ್ಭಯದಿಂದ ಓಡಾಡುತ್ತಾರೆ.
ಈ ಜಂಬೂದ್ವೀಪದ ರಚನೆಯನ್ನು ಮಾಡುವ ಸಮಯದಲ್ಲಿ ಎಷ್ಟೋ ಸಲ ಭಯಂಕರವಾದ ವಿಷಸರ್ಪ ಕಾಣಿಸಿಕೊಂಡವು. ಆದರೆ ಇವತ್ತಿನವರೆಗೆ ಒಂದು ಮಗುವಿಗೂ ಸಹ ಅವುಗಳಿಂದ ಆಘಾತವಾಗಲಿಲ್ಲ ಅಲ್ಲಿ ಕೆಲಸ ಮಾಡುವ ನೌಕರರಿಗೆ ಅಹಿಂಸಾ ಧರ್ಮದ ಪಾಲನೆಯ ಬಗ್ಗೆ ಉಪದೇಶ ಕೊಡುತ್ತಿತ್ತು. ಆದ್ದರಿಂದ ಅವರು ಯಾವಾಗಲೂ ಸರ್ಪ ಚೇಳುಗಳಿಗೆ ಹಾನಿ ಆಗದಂತೆ ಜಾಗ್ರತೆ ವಹಿಸುತ್ತಿದ್ದರು. - ಒಂದು ಸಲ ಪೂ. ಮಾತಾಜೀಯವರು ತಮ್ಮ ವಾಸಸ್ಥಳ ರತ್ನತ್ರಯ ನಿಲಯಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಕೃಷ್ಣ ಸರ್ಪವು ಮಾತಾಜೀಯ ಎದುರು ಕಾಲಡಿಗೆ ಸಿಕ್ಕಿತು. ಮಾತಾಜೀಯ ಜೊತೆಯಲ್ಲಿರುವವರು ಹೆದರಿ ಓಡಿಹೋದರು, ಆದರೆ ಮಾತಾಜೀಯ ವರನ್ನು ನೋಡಿ ಆ ಹಾವು ಹೆಡೆ ಎತ್ತಿ ನಿಂತಿತ್ತು. ಆಗ ಮಾತಾಜೀಯವರು ತಮ್ಮ ಜೊತೆಯಲ್ಲಿದ್ದವರಿಗೆ ಧೈರ್ಯ ಹೇಳುತ್ತಾ ನೀವು ಯಾರು ಹೆದರಬೇಡಿರಿ ನಮಗೇನು ಹಾನಿ ಮಾಡುವುದಿಲ್ಲ ಎಂದಾಗ ಅದರಷ್ಟಕ್ಕೆ ಅದು ತನ್ನ ದಾರಿ ಹಿಡಿದು ಹೋಯಿತು.
ಚೇಳಿನ ಪ್ರಭಾವ ಬೀರಲಿಲ್ಲ ಸನ್ 1972 ರಲ್ಲಿ ಶ್ರೀ ಮಾತಾಜೀಯವರ ಸಂಘವು ವಿಹಾರ ಮಾಡುತ್ತಾ ರಾಜಸ್ಥಾನದಿಂದ ಡಿಲ್ಲಿಯ ಕಡೆಗೆ ಹೋಗುತ್ತಿತ್ತು. ಒಂದು ದಿನ ಒಂದು ಹಳ್ಳಿಯಲ್ಲಿ ಸಂಘವು ತಂಗಲು ವ್ಯವಸ್ಥೆಯಾಯಿತು, ಪೂ. ಮಾತಾಜೀಯವರು ಸಾಮಾಹಿಕದಿಂದ ನಿವೃತ್ತಿಯಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಮೌನದಿಂದ ಇದ್ದರು. ಆಗ ಅವರ ಕಾಲಿಗೆ ಯಾವುದೋ ಒಂದು ಕೀಟ ಕಚ್ಚಿದ ಹಾಗೆ ಆಯಿತು. ನೋಡಿದಾಗ ಅದು ಕಪ್ಪು ಚೇಳು ಆಗಿತ್ತು. ಆ ಚೇಳು" ಕಚ್ಚಿದ ಗುರುತು ಸ್ಪಷ್ಟವಾಗಿ ಕಾಣಿಸುತ್ತಿತ್ತು.
Jain Educationa international
For Personal and Private Use Only
www.jainelibrary.org