Book Title: Antahskaran Ka Swroop Kannada Author(s): Dada Bhagwan Publisher: Dada Bhagwan Aradhana Trust View full book textPage 9
________________ ಅಂತಃಕರಣದ ಸ್ವರೂಪ ಜ್ಞಾನಿಪುರುಷರು, ವಿಶ್ವದ ಒಬ್ಬರ್ವೇಟರಿ 'ಜ್ಞಾನಿಪುರುಷರು' ಇಡೀ ವಿಶ್ವದ ಒಬ್ಬರ್ವೇಟರಿ' ಎಂದು ಕರೆಯಲ್ಪಡುತ್ತಾರೆ. ಬ್ರಹ್ಮಾಂಡದಲ್ಲಿ ಏನು ನಡೆಯುತ್ತಿದೆ, ಅದೆಲ್ಲವನ್ನು ಜ್ಞಾನಿಪುರುಷರು ತಿಳಿದಿರುತ್ತಾರೆ. ವೇದಕ್ಕಿಂತಲೂ ಮಿಗಿಲಾದ ವಿಚಾರಗಳನ್ನು ಜ್ಞಾನಿಪುರುಷರು ಹೇಳಬಲ್ಲರು. ನೀವು ಏನು ಬೇಕಾದರೂ ಕೇಳಿ, ಅದು ನಮಗೆ ತಪ್ಪೆಂದು ಅನ್ನಿಸುವುದಿಲ್ಲ. ಇಡೀ ವಿಶ್ವದ ವಿಜ್ಞಾನಿಗಳು ಏನು ಕೇಳುತ್ತಾರೋ ಆ ಎಲ್ಲಾ ಜ್ಞಾನವನ್ನು ಕೊಡಲು ಸಿದ್ಧರಿದ್ದೇವೆ; ಈ ಮನಸ್ಸು ಎಂದರೆ ಏನು? ಎಲ್ಲಿಂದ ಇದರ ಜನ್ಮ ಉಂಟಾಗಿದೆ, ಹೇಗೆ ಇದರ ಅಂತ್ಯವಾಗುತ್ತದೆ? ಹೀಗೆ. ಮನಸ್ಸಿನ, ಬುದ್ದಿಯ, ಚಿತ್ತದ, ಅಹಂಕಾರದ, ಪ್ರತಿಯೊಂದು ವಸ್ತುವಿನ ಎಲ್ಲಾ ವಿಜ್ಞಾನವನ್ನು ಜಗತ್ತಿಗೆ ಕೊಡಲು ನಾವು ಬಂದಿದ್ದೇವೆ. ಮನಸ್ಸು ಎಂದರೆ ಏನು, ಬುದ್ದಿ ಎಂದರೆ ಏನು, ಚಿತ್ತ ಎಂದರೆ ಏನು, ಅಹಂಕಾರ ಎಂದರೆ ಏನು? ಇವೆಲ್ಲವನ್ನು ತಿಳಿದುಕೊಳ್ಳಬೇಕು. ಪ್ರಶ್ಯಕರ್ತ: ಯಾರಿಗೆಲ್ಲ ಮನಸ್ಸು ಎಂಬುದು ಇದೆಯೋ, ಅವರನ್ನು ಮನುಷ್ಯರೆಂದು ಕರೆಯುತ್ತಾರೆ ಅಲ್ಲವೇ? ದಾದಾಶ್ರೀ: ಹೌದು, ಅದು ಸರಿ, ಈ ಪ್ರಾಣಿಗಳಿಗೂ ಮನಸ್ಸು ಇದೆ, ಆದರೆ ಅವುಗಳ ಮನಸ್ಸು Limited (ಸೀಮಿತವಾಗಿದೆ) ಹಾಗು ಮನುಷ್ಯನದ್ದು Unlimited (ಅಸೀಮಿತ) ಮನಸ್ಸು, ತಾನು ಸ್ವತಃ ಭಗವಂತನಾಗಬಹುದಾದ ಮನಸ್ಸು, ಅವನಲ್ಲಿದೆ. ಮನೋಗ್ರಂಥಿಗಳಿಂದ ಮುಕ್ತಿ ಹೇಗೆ? ಪ್ರಶ್ಯಕರ್ತ: ಮನಸ್ಸು ಇರುವುದರಿಂದವೇ ಬಹಳ ತೊಂದರೆ. ದಾದಾಶ್ರೀ: ಇಲ್ಲ, ಈ ಮನಸ್ಸು ಬಹಳ ಉಪಕಾರವನ್ನು ಮಾಡುತ್ತದೆ. ಅದು ಮೋಕ್ಷಕ್ಕೆ ಕರೆದುಕೊಂಡು ಹೋಗುತ್ತದೆ. ಪ್ರಶ್ನಕರ್ತ: ಮನಸ್ಸು ಎಂದರೆ ಏನು? ದಾದಾಶ್ರೀ: ಮನಸ್ಸು ಅನೇಕ ಗ್ರಂಥಿಗಳಿಂದ ಉಂಟಾಗಿದೆ.Page Navigation
1 ... 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54