________________
ಅಂತಃಕರಣದ ಪ್ರರೂಪ
ಆದರೆ, 'ಅದು ಹುಳಿ' ಎಂಬ ಅಭಿಪ್ರಾಯವನ್ನು ಇಟ್ಟುಕೊಂಡರೆ, ಮನಸ್ಸಿನ ಜನ್ಮವಾಗುತ್ತದೆ. ಮಾವು ಚೆನ್ನಾಗಿದ್ದರೆ ತಿಂದುಬಿಡಿ, ಅದರ ಬಗ್ಗೆ ಅಭಿಪ್ರಾಯವನ್ನು ನೀಡುವ ಅವಶ್ಯಕತೆಯಾದರೂ ಏನು? ಚಹಾವನ್ನು ಕುಡಿಯಲು ನೀವು ಹೋಟೆಲಿಗೆ ಹೋದಾಗ, ಚಹಾ ಚೆನ್ನಾಗಿಲ್ಲವಾದರೆ ಬಿಟ್ಟು, ಹಣ ಕೊಟ್ಟು ಬಂದು ಬಿಡಬೇಕು. ಅಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವ ಅವಶ್ಯಕತೆಯಾದರು
ಏನಿದೆ?
ಪ್ರಶ್ನಕರ್ತ: ಸಂಕಲ್ಪ ಹಾಗೂ ವಿಕಲ್ಪಗಳು ಮನಸ್ಸಿನ ಸ್ವಭಾವಗಳೇ?
ದಾದಾಶ್ರೀ: ಎಲ್ಲಿಯವರೆಗೆ ಭ್ರಾಂತಿ ಇದೆಯೋ, ಅಲ್ಲಿಯವರೆಗೆ ತನ್ನ (ಅಹಂಕಾರದ) ಸ್ವಭಾವದ್ದಾಗಿರುತ್ತದೆ. ಮನಸ್ಸು, ಅದರ ಧರ್ಮದಲ್ಲೇ ಇರುತ್ತದೆ, ನಿರಂತರ ವಿಚಾರ ಮಾಡುತ್ತಲೇ ಇರುತ್ತದೆ. ಆದರೆ ಭ್ರಾಂತಿಯಿಂದ ಮನುಷ್ಯ ಹೇಳುತ್ತಾನೆ, 'ನನಗೆ ಅಂತಹ ವಿಚಾರ ಬರುತ್ತಿದೆ' ಎಂದು. ವಿಚಾರವು ಮನಸ್ಸಿನ Item. ಅದು ಮನಸ್ಸಿನ ಸ್ವತಂತ್ರ ಧರ್ಮವಾಗಿದೆ. ಆದರೆ ನಾವು ಇನ್ನೊಬ್ಬರ ಧರ್ಮವನ್ನು ನಮ್ಮದೆಂದು ತೆಗೆದುಕೊಂಡು ಬಿಡುತ್ತೇವೆ. ಇದರಿಂದಾಗಿ ಸಂಕಲ್ಪ-ವಿಕಲ್ಪಗಳು ಉಂಟಾಗುತ್ತವೆ. ನಾವು (ಜ್ಞಾನಿಗಳು) ಸದಾ ನಿರ್ವಿಕಲ್ಪದಲ್ಲಿಯೇ ಇರುತ್ತೇವೆ. ಮನಸ್ಸಿನಲ್ಲಿ ಯಾವುದೇ ವಿಚಾರವು ಬಂದರೂ, ಅದರಲ್ಲಿ ನಾವು ತನ್ಮಯರಾಗುವುದಿಲ್ಲ. ಜಗತ್ತಿನ ಜನರು, ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಬಂದರೆ ತನ್ಮಯರಾಗಿ ಬಿಡುತ್ತಾರೆ ಮತ್ತು ಕೆಟ್ಟ ವಿಚಾರಗಳು ಬಂದಾಗ ಏನು ಹೇಳುತ್ತಾರೆ? ನಮಗೆ ಕೆಟ್ಟ ವಿಚಾರಗಳು ಬರುತ್ತವೆ ಎಂದು ಅವುಗಳಿಂದ ಹೊರಗುಳಿಯುತ್ತಾರೆ.
ಈ
ಪ್ರಶ್ನಕರ್ತ: ನಾನು ಮನಸ್ಸಿನ ಬಗ್ಗೆ ಏನು ತಿಳಿದಿದ್ದೇನೆಂದರೆ, ಈ ಮನಸ್ಸಿನಲ್ಲಿ ಇನ್ನು ಹಲವಾರು ವಿಭಾಗಗಳಿವೆ ಅವುಗಳು ಯಾವುದೆಂದರೆ, ಈ ಕಲ್ಪನೆ, ಸ್ವಪ್ನ, ಸಂಕಲ್ಪ-ವಿಕಲ್ಪಗಳು ಎಂದು.
ದಾದಾಶ್ರೀ: ಇಲ್ಲ, ಅವುಗಳು ಮನಸ್ಸಿನ ವಿಭಾಗಗಳಲ್ಲ. ಮನಸ್ಸು ಅಂದರೇನು, 'ವಿಚಾರಗಳ ಸ್ಥಿತಿಯಲ್ಲಿ ಇರುವುದೇ ಮನಸ್ಸು' ಅದುಬಿಟ್ಟರೆ ಇನ್ಯಾವುದೇ ಸ್ಥಿತಿಯಲ್ಲಿ ಮನಸ್ಸು ಇರುವುದಿಲ್ಲ.
ಪ್ರಶ್ನಕರ್ತ: ಮನಸ್ಸಿನಲ್ಲಿ ಸಂಕಲ್ಪ-ವಿಕಲ್ಪಗಳು ಬರುತ್ತವೆಯಲ್ಲ ಅವು ಏನು?
ದಾದಾಶ್ರೀ: ಅವು ಸಂಕಲ್ಪ-ವಿಕಲ್ಪಗಳಲ್ಲ. ಅದು ಮನಸ್ಸೇ ಆಗಿದೆ. ಮನಸ್ಸು ವಿಚಾರ ಮಾಡುತ್ತದೆ.
ನಮ್ಮ ಜನರು ಏನು ಹೇಳುತ್ತಾರೆ, 'ಕುಸ್ಸಂಗದಲ್ಲಿ ಬೀಳುವ ಬದಲು ಸತ್ಸಂಗದಲ್ಲಿ ಬೆಳೆಯಬೇಕು.' ಸತ್ಸಂಗದಲ್ಲಿ ಬೆರೆಯುವುದರಿಂದ ಏನಾಗುತ್ತದೆಂದರೆ, ಅಭಿಪ್ರಾಯಗಳು