________________
21
ಅಂತಃಕರಣದ ಸ್ವರೂಪ ಬಂದಾಗ, ನಮ್ಮನ್ನು ಕೇಳುತ್ತಾರೆ 'ನಿಮ್ಮ ದೃಷ್ಟಿಯಲ್ಲಿ ನಮ್ಮ ಬಂಗಲೆ ಹೇಗಿದೆ?' ಎಂದು. ಆಗ ನಾವು ಹೇಳುತ್ತೇವೆ, 'ನನಗೆ ನಿಮ್ಮ ಬಂಗಲೆ ಎಂದೂ ಚೆನ್ನಾಗಿದೆಯೆಂದು ಅನ್ನಿಸುವುದಿಲ್ಲ. ಏಕೆಂದರೆ, ಯಾವ ಬಂಗಲೆಯನ್ನು ಇಲ್ಲೇ ಬಿಟ್ಟು ಹೋಗಬೇಕಾಗಿದೆಯೋ, ಅದರ ಒಳಿತು-ಕೆಡಕುಗಳನ್ನು ಏನು ನೋಡುವುದು? ಈ ಬಂಗಲೆಯಿಂದಲೇ ಕೊನೆಗೆ, ಎಲ್ಲವನ್ನು ಬಿಟ್ಟು ಹೊರಡಬೇಕು.'
ಬುದ್ದಿಯು ಪರ-ಪ್ರಕಾಶವಾಗಿದೆ ಮತ್ತು ಆತ್ಮ ಸ್ವ-ಪರ ಪ್ರಕಾಶವಾಗಿದೆ. ಬುದ್ದಿ ಹಾಗು ಜ್ಞಾನ ಎರಡೂ ವಿಭಿನ್ನ ವಿಚಾರಗಳಾಗಿವೆ. ನಿಮ್ಮ ಬಳಿ ಜ್ಞಾನ ಇದೆಯೋ ಅಥವಾ ಬುದ್ದಿ ಇದೆಯೋ?
ಪ್ರಶ್ನಕರ್ತ: ಬುದ್ಧಿ ಅಂತೂ ಇದೇ, ಜ್ಞಾನದ ವಿಷಯದಲ್ಲಿ ಇನ್ನು ಅಲ್ಲಿಯವರೆಗೆ ತಲುಪಿಲ್ಲ. ದಾದಾಶ್ರೀ: ಬುದ್ಧಿ ಇರುವಲ್ಲಿ ಜ್ಞಾನ ಇರುವುದಿಲ್ಲ. ಪ್ರಶ್ನೆಕರ್ತ: ಆದುದರಿಂದಲೇ ಜ್ಞಾನದಲ್ಲಿ ಮುಂದೆ ಹೋಗಬೇಕೆಂದು ಪ್ರಯತ್ನಿಸುತ್ತಿದ್ದೇನೆ. ದಾದಾಶ್ರೀ: ಹಾಗಲ್ಲ, ಜ್ಞಾನದಲ್ಲಿ ಪ್ರಯತ್ನ ಮಾಡಬೇಕಾದ ಅವಶ್ಯಕತೆಯೇ ಇಲ್ಲ. ಅದು ಸಹಜವಾಗಿಯೇ ಉಂಟಾಗುತ್ತದೆ, ಪ್ರಯತ್ನಿಸಬೇಕೆಂಬುದು ಇಲ್ಲ. ಪ್ರಶ್ನೆಕರ್ತ: ಜ್ಞಾನದ ಮಾತುಗಳನ್ನು ಬುದ್ಧಿಯಿಂದ ಅರ್ಥ ಮಾಡಿಕೊಳ್ಳಲು ಹೋಗಬಾರದು, ಯಾಕೆ ಹಾಗೆ?
ದಾದಾಶ್ರೀ: ಹೌದು, ಈ ಮಾತುಗಳು ಬುದ್ದಿಗೆ ಎಟಕುವಂತಹದಲ್ಲ. ಬುದ್ದಿಯು ಯಾರ ಬಳಿಯೂ ಸಂಪೂರ್ಣವಾಗಿ ಇರುವುದಿಲ್ಲ, ಯಾರು ಅಬುದ್ಧರಾಗಿದ್ದಾರೆ, ಅವರಿಂದ ಮಾತ್ರ ಇದರ ಬಗ್ಗೆ ತಿಳಿಯಲು ಸಿಗುತ್ತದೆ. ಈ ಜಗತ್ತಿನಲ್ಲಿ ಎಲ್ಲಿಯಾದರು ಅಬುದ್ಧ ವ್ಯಕ್ತಿಯನ್ನು ಎಂದಾದರೂ ನೋಡಿದ್ದೀರಾ? ಎಲ್ಲಾ ಬುದ್ದಿವಂತರೇ ಕಾಣಸಿಗುತ್ತಾರೆ ಅಲ್ಲವೇ? ಈ ಜಗತ್ತಿನಲ್ಲಿ ನಾವು (ಜ್ಞಾನಿಗಳು) ಒಬ್ಬರೇ ಅಬುದ್ಧರು. ನಮ್ಮೊಳಗೆ ಬುದ್ದಿ ಸಂಪೂರ್ಣ ಇಲ್ಲವೇ ಇಲ್ಲ, ನಮ್ಮ ಬಳಿ ಜ್ಞಾನವಿದೆ. ಜ್ಞಾನ ಹಾಗು ಬುದ್ಧಿಯಲ್ಲಿ ಏನು ವ್ಯತ್ಯಾಸ (difference)? ಬುದ್ಧಿಯು ಪರೋಕ್ಷವಾದ (Indirect) ಪ್ರಕಾಶವಾಗಿದೆ ಮತ್ತು ಜ್ಞಾನವು ನೇರವಾದ (Direct) ಪ್ರಕಾಶವಾಗಿದೆ. ಈ ಎರಡು ಪ್ರಕಾಶಗಳು ವಸ್ತುಗಳಾಗಿವೆ, ಹಾಗಾಗಿ ಇವೆರಡರಲ್ಲಿ ಒಂದನ್ನು ಅಂದರೆ, ನೇರವಾದ ಪ್ರಕಾಶವನ್ನು ನಾವು ಇಟ್ಟುಕೊಂಡಿದ್ದೇವೆ ಮತ್ತು ಪರೋಕ್ಷವಾದ ಪ್ರಕಾಶವು ನಮಗೆ