________________
27
ಅಂತಃಕರಣದ ಸ್ವರೂಪ
ಇಡೀ ಜಗತ್ತಿನಲ್ಲಿ ಯಾವ ಅಂಥ ವ್ಯಕ್ತಿಯು ಹುಟ್ಟಿಲ್ಲ, ತನ್ನದೇ ಆದ ಶಕ್ತಿಯಿಂದ ಸಂಡಾಸಿಗೆ ಹೋಗಬಲ್ಲವನು. ಎಂದಾದರೊಂದು ದಿನ ಸಂಡಾಸಿಗೆ ಹೋಗಲಾಗದೆ ಇರುವಾಗ ಅರ್ಥವಾಗುತ್ತದೆ, ಅದು ನಮ್ಮ ಶಕ್ತಿಯಿಂದಲ್ಲ ಎಂದು. ಇಡೀ ದಿನ ಏನು ಹೇಳುತ್ತಾರೆ “ಇದೆಲ್ಲವನ್ನು ನಾವು ಹೇಳಿದೆವು, ನಾವು ಹೀಗೆ ಹೇಳುತ್ತೇವೆ, ನಾವು ಹಾಗೆ ಹೇಳಿದ್ದೇವೆ' ಎಂದು. ನಂತರ ಹೊರಡುವ (ಅಂತಿಮ) ಸಮಯ ಬಂದಾಗ, 'ಹೇಳುತ್ತಿದ್ದವರು' ಎಲ್ಲಿಗೆ ಹೊರಟು ಹೋದರು? ಆಗ ಹೇಳುತ್ತಾರೆ, 'ಮಾತನಾಡಲು ಶಕ್ತಿಯಿಲ್ಲ, ಎಲ್ಲಾ ನಿಂತುಹೋಗಿದೆ' ಎಂದು.
ಇಲ್ಲಿ ಕೇವಲ ಅಹಂಕಾರ ಮಾಡಲಾಗುತ್ತಿದೆ ಏನೆಂದರೆ, 'ನಾವು ಅದು ಮಾಡಿದೆವು, ನಾವು ಇದು ಮಾಡಿದೆವು' ಎಂದು. ನಮ್ಮಲ್ಲಿ (ಜ್ಞಾನಿಗಳಲ್ಲಿ) ಅಹಂಕಾರ ಸುತರಾಂ ಇಲ್ಲ. ಎಂದೂ ಈ ದೇಹದ ಮಾಲೀಕರಾಗಲಿ, ಈ ವಾಣಿಯ ಮಾಲೀಕರಾಗಲಿ, ಈ ಮನಸ್ಸಿನ ಮಾಲೀಕರಾಗಲಿ, ನಾವಲ್ಲ. ಆದರೆ ನೀವುಗಳು ಎಲ್ಲದರ ಮಾಲೀಕರಾಗಿದ್ದೀರಿ, 'ಇದು ನಮ್ಮದು, ಅದು ನಮ್ಮದು' ಎಂದು. ಯಾವ ಮನುಷ್ಯನೂ ಮೃತ್ಯುವಿನ ನಂತರ ಎನ್ನನೂ ಜೊತೆಯಲ್ಲಿ ಕೊಂಡುಹೋಗುವುದಿಲ್ಲ. ನಿಮ್ಮದಾಗಿದ್ದರೆ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದಲ್ಲ? ಆದರೆ ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಅವರಿಗೆ ಇಷ್ಟವಿದ್ದರೂ ಸಹ ಜೊತೆಯಲ್ಲಿ ಕೊಂಡುಹೋಗಲು ಹೇಗೆ ತಾನೇ ಸಾಧ್ಯವಾಗುತ್ತದೆ? ಬಾಡಿಗೆಯ ಮನೆಯನ್ನು (ಈ ಶರೀರವನ್ನು) ಖಾಲಿ ಮಾಡಲು ಇಷ್ಟವಿಲ್ಲದಿದ್ದರೂ ಸಹ, ಮಾಡುವುದು ಏನು? ಹೊಡೆದು-ಬಡೆದು ಖಾಲಿ ಮಾಡಿಸಲಾಗುತ್ತದೆ.
ನೀವೇ ಸ್ವತಃ ಭಗವಂತನಾಗಿದ್ದೀರಾ, ಆದರೆ ನಿಮಗದು ತಿಳಿದಿಲ್ಲ. ನಾವಂತೂ ಅದನ್ನು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ, ಆದರೆ ನಿಮಗೆ ಭಗವಂತನ ಅನುಭವವಾಗಿಲ್ಲ. ನೀವೇ ಆತ್ಮ ಆದರೆ ನಿಮಗೆ ಅದರ ಅನುಭವವಿಲ್ಲ. ಆತ್ಮಸಾಕ್ಷಾತ್ಕಾರವನ್ನು (Self-Realisation) ಮಾಡಿಕೊಳ್ಳದೆ ಹಾಗೂ ಯಾವುದು ನಿಮ್ಮ ಸ್ವರೂಪವಲ್ಲವೋ ಅದನ್ನೇ 'ನನ್ನ ಸ್ವರೂಪ' ಎಂದು ಭಾವಿಸಿಕೊಂಡಿರುವುದಾಗಿದೆ.
ಪ್ರಶ್ಯಕರ್ತ: ಎಲ್ಲಾ ಜನರು ಹೇಳುತ್ತಾರೆ, 'ಅಹಂ' ಅನ್ನು ಮರೆಯಬೇಕು ಎಂದು. ಹಾಗು 'ಅಹಂ' ಅನ್ನು ಮರೆಯಲು ನಾವು ಸಿದ್ಧರಿದ್ದೇವೆ, ಆದರೆ ಅದನ್ನು ಮರೆಯಲಾಗದೆ ಇದ್ದಾಗ ಏನು ಮಾಡುವುದು?
ದಾದಾಶ್ರೀ: ಯಾವ ವ್ಯಕ್ತಿಯೂ 'ಅಹಂ' ಅನ್ನು ಮರೆಯಲು ಸಾಧ್ಯವಿಲ್ಲ.
ಪ್ರಶ್ಯಕರ್ತ: ಹಾಗಾದರೆ ಈ 'ಅಹಂ' ಅನ್ನು ಬಿಡುವುದು ಹೇಗೆ? ಇದಕ್ಕಾಗಿ ಏನು ಮಾಡಬೇಕು?