________________
ಅಂತಃಕರಣದ ಸ್ವರೂಪ
ಆರ್ತಧ್ಯಾನ ಹಾಗು ರೌದ್ರಧ್ಯಾನಗಳಲ್ಲಿ ಅಹಂಕಾರವು ಇರುವುದಿಲ್ಲ.
ಪ್ರಶ್ನಕರ್ತ: ಧರ್ಮಧ್ಯಾನದಲ್ಲಿ ಅಹಂಕಾರವು ಇರುತ್ತದೆಯೋ ಇಲ್ಲವೋ?
ದಾದಾಶ್ರೀ: ಅದರಲ್ಲಿ ಕೂಡ ಅಹಂಕಾರವು ಇರುವುದಿಲ್ಲ. ಧ್ಯಾನದಲ್ಲಿ ಅಹಂಕಾರವು ಇರುವುದಿಲ್ಲ, ಕ್ರಿಯೆಯಲ್ಲಿ ಅಹಂಕಾರವು ಇರುವುದು.
37
ಪ್ರಶ್ನಕರ್ತ: ರೌದ್ರಧ್ಯಾನ ಹಾಗು ಆರ್ತಧ್ಯಾನ ಆಗುವಲ್ಲಿ ಅಹಂಕಾರವು ನಿಮಿತ್ತವಾಗಿ ಇರುತ್ತದೆ ಅಲ್ಲವೇ?
ದಾದಾಶ್ರೀ: ಕೇವಲ ನಿಮಿತ್ತ ಮಾತ್ರವಲ್ಲ, ಅಲ್ಲಿ ಕ್ರಿಯೆ ಕೂಡ ಅಹಂಕಾರದಿಂದಾಗಿದೆ. ಕ್ರಿಯೆಯು ಇರುವಲ್ಲಿ ಧ್ಯಾನ ಇರುವುದಿಲ್ಲ. ಆದರೆ ಕ್ರಿಯೆಯಿಂದ ಯಾವ ಪರಿಣಾಮ ಉತ್ಪನ್ನವಾಗುವುದೋ ಅದು ಧ್ಯಾನವಾಗಿದೆ. ಹಾಗು ಯಾವ ಧ್ಯಾನ ಉತ್ಪನ್ನವಾಗುತ್ತದೆಯೋ, ಅದರಲ್ಲಿ ಅಹಂಕಾರವು ಇರುವುದಿಲ್ಲ. ಆರ್ತಧ್ಯಾನವಾದಾಗ, ಅದರಲ್ಲಿ 'ನಾನು ಆರ್ತಧ್ಯಾನ ಮಾಡುತ್ತೇನೆ' ಎನ್ನುವುದು ಇಲ್ಲದೆ ಹೋದರೆ, ಆಗ ಆ ಧ್ಯಾನದಲ್ಲಿ ಅಹಂಕಾರವು ಇರುವುದಿಲ್ಲ. ಅಹಂಕಾರವು ಮತ್ತೊಂದು ಕಡೆಯಲ್ಲಿ 'ಉಪಯೋಗ'ದಲ್ಲಿ ಇರುವಾಗಲೂ, ಧ್ಯಾನವು ತನ್ನಷ್ಟಕ್ಕೆ ಒಳಗೆ ನಡೆಯುತ್ತಲೇ ಇರುತ್ತದೆ.
ಪ್ರಶ್ನಕರ್ತ: ಧ್ಯಾನದಲ್ಲಿ ಅಹಂಕಾರವು ಇರುವುದಿಲ್ಲ, ಕರ್ತನೂ (ಮಾಡುವವನು) ಅಲ್ಲ, ಹೀಗಿರುವಾಗ ಯಾವ ರೀತಿಯಲ್ಲಿ ಕರ್ಮಬಂಧನವಾಗುತ್ತದೆ?
ದಾದಾಶ್ರೀ: ಈ ಆರ್ತಧ್ಯಾನವು ಆಗುವಾಗ 'ನನ್ನಿಂದ ಆರ್ತಧ್ಯಾನವಾಗಿದೆ' ಎಂದು ಅಂದುಕೊಂಡಾಗ, ಅಲ್ಲಿ ಕರ್ತನಾಗುತ್ತಾನೆ ಹಾಗೂ ಅದರ ಬಂಧನವಾಗುತ್ತದೆ.
ಪ್ರಶ್ನಕರ್ತ: ನೀವು ಹೇಳಿದ್ದಿರಿ, ಧೈಯವು ನಿರ್ಣಯವಾದ ಮೇಲೆ ತಾನು ಧ್ಯಾತನಾಗುತ್ತಾನೆ, ಆಗ ಧ್ಯಾನವು ಉತ್ಪನ್ನವಾಗುತ್ತದೆ. ಇದರಲ್ಲಿ ಅಹಂಕಾರದ ಅವಶ್ಯಕತೆ ಇರುವುದಿಲ್ಲವೇ?
ದಾದಾಶ್ರೀ: ಅದರಲ್ಲಿ ಅಹಂಕಾರವು ಇರಬಹುದು ಅಥವಾ ಇಲ್ಲದೆ ಇರಬಹುದು. ನಿರಹಂಕಾರವು ಧ್ಯಾತನಾದಾಗ ಶುಕ್ಲಧ್ಯಾನವು ಉತ್ಪನ್ನವಾಗುತ್ತದೆ. ಇಲ್ಲವಾದರೆ ಧರ್ಮಧ್ಯಾನ ಅಥವಾ ಆರ್ತಧ್ಯಾನ ಅಥವಾ ರೌದ್ರಧ್ಯಾನವು ಉತ್ಪನ್ನವಾಗುತ್ತದೆ.
ಪ್ರಶ್ನಕರ್ತ: ಧ್ಯಾತ ಪದದಲ್ಲಿ ಅಹಂಕಾರಿಯಾಗಿರಲಿ ಅಥವಾ ನಿರಹಂಕಾರಿಯಾಗಿರಲಿ, ಆದರೆ