________________
39
ಅಂತಃಕರಣದ ಸ್ವರೂಪ
ರಾಗ-ದ್ವೇಷಗಳಿಂದ ಮುಕ್ತರಾಗಲು ಧ್ಯಾನ ಮಾಡಬೇಕಾಗಿಲ್ಲ, ಕೇವಲ ವಿತರಾಗ ವಿಜ್ಞಾನವನ್ನು ತಿಳಿಯಬೇಕಾಗಿದೆ.
ಅಹಂಕಾರವು ವಿಲಯವಾಗುವುದು ಹೇಗೆ?
ನಿಮಗೆ ಅಶಾಶ್ವತ (Temporary) ಸಮಾಧಾನ ಬೇಕೋ ಅಥವಾ ಶಾಶ್ವತ (Permanent) ಸಮಾಧಾನ ಬೇಕೋ?
ಪ್ರಶ್ಯಕರ್ತ: ಶಾಶ್ವತವಾದ (Permanent) ಸಮಾಧಾನ ಬೇಕು.
ದಾದಾಶ್ರೀ: ಹಾಗಿದ್ದರೆ 'ನಾನು ಚಂದುಭಾಯ್' ಎಂದುಕೊಂಡು ಎಲ್ಲಿಯವರೆಗೆ ನಡೆಸುವಿರಿ? ಅದರ ವಿಶ್ವಾಸದ ಮೇಲೆ ಎಷ್ಟು ಸಮಯದವರೆಗೆ ನಡೆಸುವಿರಿ? ಈ ಹೆಸರನ್ನು ಹೇಗೆ ನಂಬುವುದು? ದೇಹವನ್ನು ಹೇಗೆ ನಂಬುವುದು? ನಾವು ಸ್ವತಃ ಯಾರು, ಎನ್ನುವುದರ ಶೋಧನೆಯನ್ನು ನಡೆಸಬೇಕಲ್ಲವೇ? ಅದನ್ನು ತಿಳಿದುಕೊಳ್ಳಬೇಕಲ್ಲವೇ? ಈ ಜ್ಞಾನವನ್ನು ಪಡೆದುಕೊಳ್ಳುವುದರಿಂದ ವ್ಯವಹಾರ ವೈವಾಟು ಈಗ ನಡೆಯುವುದಕ್ಕಿಂತಲೂ ಉತ್ತಮವಾಗಿ ನಡೆಯುತ್ತದೆ. ಅಲ್ಲದೆ, ಈಗ ನಡೆಸುತ್ತಿರುವ ವ್ಯವಹಾರದಲ್ಲಿ ಬಹಳಷ್ಟು ನಷ್ಟವು ಉಂಟಾಗುತ್ತಿದೆ, ಇದನ್ನು ಮಾಡುತ್ತಿರುವವರು ಯಾರು?
ಪ್ರಶ್ಯಕರ್ತ: ಈ ಅಹಂಕಾರವೇ (Egoism) ನಷ್ಟವನ್ನು ಉಂಟುಮಾಡುವುದಾಗಿದೆ ಎಂದು ಪ್ರತಿಯೊಂದು ಹಂತದಲ್ಲೂ ಅನುಭವಕ್ಕೆ ಬರುತ್ತದೆ.
ದಾದಾಶ್ರೀ: ಹೌದು, ಅದಕ್ಕಾಗಿಯೇ ನಾವು ಅಹಂಕಾರವನ್ನು ತೆಗೆದುಬಿಡುತ್ತೇವೆ. ನಂತರ ಈ ನಷ್ಟ ಪಡಿಸುವವನು ಹೊರಟುಹೋಗುತ್ತಾನೆ ಹಾಗೂ ಅವನೊಂದಿಗೆ ಎಲ್ಲಾ ನಿರ್ಬಲತೆಯು (weakness) ಕೂಡಾ ಹೊರಟುಹೋಗುತ್ತವೆ. ಎಲ್ಲಾ ನಿರ್ಬಲತೆಗಳು (weakness) ಅಹಂಕಾರದಿಂದಾಗಿದೆ. ಆದುದರಿಂದ ಈ ಅಹಂಕಾರವು ಹೊರಟುಹೋದರೆ ಮತ್ತೆ ನಿರ್ಬಲತೆಯೂ (weakness) ಹೊರಟುಹೋಗುತ್ತದೆ. ನಂತರ 'ಚಂದುಭಾಯ್ ಯಾರು? ಹಾಗೂ ನೀನು ಯಾರು?' ಎನ್ನುವುದರ ಭೇದವು ತಿಳಿಯಲ್ಪಡುತ್ತದೆ.
ಪ್ರಶ್ಯಕರ್ತ: ಆತ್ಮಸಾಕ್ಷಾತ್ಕಾರ (Self-Realisation) ಸಮೀಪಕ್ಕೆ ಹೋಗಬೇಕಾದರೆ 'ಅಹಂ' ನಷ್ಟವಾಗಬೇಕಲ್ಲವೇ?