________________
_40
ಅಂತಃಕರಣದ ಸ್ವರೂಪ ದಾದಾಶ್ರೀ: ಹೌದು, 'ನಾನು, ನನ್ನದು' ಇವೆಲ್ಲವೂ ನಾಶವಾಗಬೇಕಾಗಿದೆ. ನಮ್ಮಲ್ಲಿ ಅವೆಲ್ಲವೂ ನಶಿಸಿಹೋಗಿವೆ. ಈ 'ಪಟೇಲ'ನಿಗೆ ಯಾರು ನಿಂದನೆ ಮಾಡಿದರೂ 'ನಮಗೆ' ಸ್ಪರ್ಶಿಸುವುದಿಲ್ಲ. ಏಕೆಂದರೆ 'ನಾವು', 'ಪಟೇಲ'ನಲ್ಲ. ಎಲ್ಲಿಯವರೆಗೆ 'ನಾವು' 'ಪಟೇಲ' ಎಂದು ಭಾವಿಸಿಕೊಂಡಿರುತ್ತೇವೆ, ಅಲ್ಲಿಯವರೆಗೆ ಅಹಂಕಾರವಿರುತ್ತದೆ.
ಪ್ರಶ್ಯಕರ್ತ: ಅಹಂಕಾರವನ್ನು ಹೋಗಲಾಡಿಸುವುದು, ಅದು ಕೂಡ ಬಹಳ ಕಷ್ಟಕರವಾಗಿದೆ ಅಲ್ಲವೇ?
ದಾದಾಶ್ರೀ: ಅಹಂಕಾರವನ್ನು ವೃದ್ಧಿಗೊಳಿಸುವುದು ಬಹಳ ಕಷ್ಟಕರವಾಗಿದೆ ಹಾಗೂ ಅಹಂಕಾರವನ್ನು ಅಂತ್ಯಗೊಳಿಸುವುದು ಕೂಡಾ ಬಹಳ ಕಷ್ಟಕರವಾಗಿದೆ. ಸಾಮಾನ್ಯ ಬಡಪಾಯಿ ಜನರಿಗೆ ಅಹಂಕಾರವನ್ನು ಬೆಳೆಸಿಕೊಳ್ಳಬೇಕೆಂದಿದ್ದರೂ, ಅದನ್ನು ವೃದ್ಧಿಸಿಕೊಳ್ಳಲಾಗುವುದಿಲ್ಲ.
ಅಹಂಕಾರವನ್ನು ಅಂತ್ಯಗೊಳಿಸಲು ಏನು ಮಾಡಬೇಕೆಂದರೆ, ಅಹಂಕಾರದ ಶೇಷವೂ ಇಲ್ಲದಿರುವಂತಹ ವ್ಯಕ್ತಿ ಯಾರು ಇರುತ್ತಾರೆ, ಅವರ ಬಳಿಗೆ ಹೋಗುವುದರಿಂದ, ಅವರ ಸನಿಹದಲ್ಲಿ ಕುಳಿತುಕೊಳ್ಳುವುದರಿಂದ ನಿಮ್ಮ ಅಹಂಕಾರ ಅಂತ್ಯಗೊಳ್ಳುತ್ತದೆ. ಅದುಬಿಟ್ಟು ಬೇರೆ ದಾರಿಯೂ ಇಲ್ಲ. ಅಹಂಕಾರವು ಇಲ್ಲದೆ ಇರುವಂತಹ ವ್ಯಕ್ತಿಯು ಯಾವಾಗಲೋ ಬಹಳ ವಿರಳವಾಗಿ ಈ ಭೂಮಿಯ ಮೇಲೆ ಬರುತ್ತಾರೆ, ಆಗ ನಮ್ಮ ಕಾರ್ಯವನ್ನು ಸಾಧಿಸಿಕೊಳ್ಳಬೇಕು.
-ಜೈ ಸಚ್ಚಿದಾನಂದ್