________________
ಅಂತಃಕರಣದ ಸ್ವರೂಪ
ಪ್ರಶ್ನಕರ್ತ: ನಾನು ಮಾಡುತ್ತೇನೆ.
ದಾದಾಶ್ರೀ: ಎಂದಾದರೂ ನಿಮ್ಮಿಂದ ಧ್ಯಾನ ಮಾಡಲು ಆಗದೆ ಇದ್ದದ್ದು ಇದೆಯೇ?
ಪ್ರಶ್ನಕರ್ತ: ಹೌದು, ಹಾಗೆ ಆಗಿದೆ.
36
ದಾದಾಶ್ರೀ: ಅದಕ್ಕೆ ಕಾರಣವಿದೆ. ಎಲ್ಲಿಯವರೆಗೆ 'ನೀವು ಚಂದುಬಾಯ್' ಆಗಿರುವಿರೋ, ಅಲ್ಲಿಯವರೆಗೆ ಯಾವುದೇ ಕಾರ್ಯವು ಸರಿಯಾಗಿ ಆಗುವುದಿಲ್ಲ. ನೀವು ಚಂದುಭಾಯ್ ಎಂಬುದು ಎಷ್ಟು ಶೇಕಡಾ ನಿಜವಾಗಿದೆ?
ಪ್ರಶ್ನ ಕರ್ತ: ಶೇಕಡಾ ನೂರಕ್ಕೆ ನೂರು.
ದಾದಾಶ್ರೀ: ಎಲ್ಲಿಯವರೆಗೆ, 'ನಾನು ಚಂದುಬಾಯ್' ಎಂಬ Wrong belief ಇರುವುದೋ, ಅಲ್ಲಿಯವರೆಗೆ 'ನಾನು ಇದು ಮಾಡಿದೆ, ನಾನು ಅದು ಮಾಡಿದೆ' ಎಂಬ ಅಹಂಕಾರವಿರುತ್ತದೆ. ಯಾವುದೇ ಕಾರ್ಯವನ್ನು ಮಾಡಬೇಕಿದ್ದರೂ, ಅದರ ಕರ್ತನಾಗಿ ಅಹಂಕಾರವಿರುವುದು ಹಾಗೂ ಕರ್ತನಾಗಿ ಅಹಂಕಾರವು ಬೆಳೆದಷ್ಟು ಭಗವಂತ ದೂರ ಸರಿಯುವನು. ಒಂದು ವೇಳೆ ನಿಮಗೆ ಪರಮಾತ್ಮ ಪದವನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದಿದ್ದರೆ, ಆಗ 'ಜ್ಞಾನಿಗಳ ಬಳಿ ಜ್ಞಾನ ಪಡೆದುಕೊಳ್ಳಬೇಕು. ಇದರಿಂದ, ನಿಮ್ಮ ಅಹಂಕಾರವು ನಿರ್ಮೂಲನೆಯಾಗುತ್ತದೆ ಮತ್ತು ನಿಮ್ಮ ಕಾರ್ಯವು ನೆರವೇರುತ್ತದೆ.
ಧ್ಯಾನ ಮಾಡಲು ಯಾರಿಗೂ ಬರುವುದಿಲ್ಲ. ಯಾವ ಧ್ಯಾನವನ್ನು 'ಮಾಡಬೇಕಾಗಿ ಬರುವುದೋ, ಅದು ಅಹಂಕಾರದಿಂದಾಗಿದೆ. ಆದುದರಿಂದ ಅದನ್ನು ನಿಜವಾದ ಧ್ಯಾನವೆಂದು ಹೇಳಲು ಬರುವುದಿಲ್ಲ. ಅದನ್ನು ಏಕಾಗ್ರತೆಯೆಂದು ಕರೆಯಲಾಗುತ್ತದೆ. ಎಲ್ಲಿ ಅಹಂಕಾರ ಇಲ್ಲವೋ, ಅಲ್ಲಿ ಧ್ಯಾನವಿದೆ. ಧ್ಯಾನವನ್ನು ಅಹಂಕಾರದಿಂದ ಮಾಡಲು ಸಾಧ್ಯವಿಲ್ಲ. ಧ್ಯಾನವು ತಿಳಿದುಕೊಳ್ಳುವ ವಸ್ತುವಾಗಿದೆ, ಮಾಡಬೇಕಾದ ವಸ್ತುವಲ್ಲ. ಧ್ಯಾನ ಮತ್ತು ಏಕಾಗ್ರತೆಯಲ್ಲಿ ಬಹಳಷ್ಟು ಅಂತರವಿದೆ. ಏಕಾಗ್ರತೆಗೆ ಅಹಂಕಾರದ ಅವಶ್ಯಕತೆಯಿದೆ. ಆದರೆ ಧ್ಯಾನವು ಅಹಂಕಾರದಿಂದ ನಿರ್ಲಿಪ್ತವಾಗಿದೆ. ಅಹಂಕಾರದ ಏರಿಳಿತವು ನಿಮ್ಮ ಗಮನಕ್ಕೆ ಬರುತ್ತದೆಯೋ ಇಲ್ಲವೋ?
ಪ್ರಶ್ನಕರ್ತ: ಹೌದು ಬರುತ್ತದೆ.
ದಾದಾಶ್ರೀ: ಅಹಂಕಾರದ ಏರಿಳಿತವನ್ನು ಲಕ್ಷಯಲ್ಲಿ ಇಡುವುದರ ಹೆಸರೇ ಧ್ಯಾನವಾಗಿದೆ.