________________
35.
ಅಂತಃಕರಣದ ಸ್ವರೂಪ ಹಾಗೆಯೇ ಹೇಳುತ್ತೇನೆ. ಯಾವುದು 'ಇಲ್ಲವೋ' ಅದನ್ನು ನಾವು 'ಇದೆ' ಎಂದು ಹೇಳುವುದಿಲ್ಲ. ನೀವು 'ಅಂಥದ್ದು ಏನಾದರು ಇರಬಹುದು' ಎಂದು ಹೇಳಿದರೂ, ಆಗ ಕೂಡ ನಾವು ಹೇಳುತ್ತವೆ 'ಅದು ಇಲ್ಲ' ಎಂದು. ಅದರಿಂದ ನಿಮಗೆ ಬೇಸರವು ಉಂಟಾದರೂ ಕೂಡಾ ನಾವು 'ಇಲ್ಲದೆ ಇರುವುದನ್ನು ಎಂದೂ 'ಇದೆ' ಎಂದು ಹೇಳುವುದಿಲ್ಲ. ಏಕೆಂದರೆ ಅದು ನಮ್ಮ ಜವಾಬ್ದಾರಿಯಾಗಿದೆ. ನಾವು ಯಾವ ವಿಚಾರಗಳನ್ನು ಹೇಳುತ್ತೇವೆ, ಅಲ್ಲದೆ ನಾವು ಈ ಇಪ್ಪತ್ತೆರಡು ವರ್ಷಗಳಲ್ಲಿ ಏನೆಲ್ಲಾ ಹೇಳಿದ್ದೇವೆ, ಅದರಿಂದ ಯಾವುದಾದರೂ ಒಂದು ವಿಚಾರದ ಬಗ್ಗೆ ನೀವು, 'ನಮಗೆ ಹಿಂದೆ ಹೀಗೆಂದು ಹೇಳಿರುವಿರಿ, ಈಗ ಅದರ ವಿವರಣೆಯನ್ನು ಕೊಡಿ' ಎಂದು ಕೇಳಿದರೆ, ನಾವು ವಿವರಿಸಿ ಹೇಳಲು ಶಕ್ಯರಿದ್ದೇವೆ. ನಾವು ಪ್ರತಿಯೊಂದು ವಸ್ತುವಿನ ಬಗ್ಗೆ ವಿಸ್ತಾರವಾಗಿ ತಿಳಿಸಲು ಸಿದ್ಧರಿದ್ದೇವೆ. ಈ ಜಗತ್ತು ಸ್ವಯಂ ಗೊಂದಲ (Puzzle) ಆಗಿಬಿಟ್ಟಿದೆ! ನಾವು ಸ್ವತಃ ನೋಡಿದ್ದೇವೆ ಹೇಗೆ ಗೊಂದಲಮಯವಾಗಿದೆ ಎಂದು.
ಪ್ರಶ್ಯಕರ್ತ: ಆಂಗ್ಲಭಾಷೆಯಲ್ಲಿ Soul ಎಂದು ಕರೆಯುತ್ತಾರಲ್ಲವೇ, ಅದು ಆತ್ಮವೇ?
ದಾದಾಶ್ರೀ: ಆ ಜನರು Soul ಎಂದು ಹೇಳುತ್ತಾರೆ, ಆದರೆ Soul (ಆತ್ಮ) ಎನ್ನುವುದು ಎಂತಹ ವಸ್ತುವೆಂದು ಅವರು ಅರಿತಿಲ್ಲ. ಆತ್ಮವು ಬೇರೆಯೇ ವಸ್ತುವಾಗಿದೆ. ಆತ್ಮವು ಪ್ರಕಾಶವಾಗಿದೆ. ಅದಕ್ಕೆ ಆತ್ಮ ಎಂದು ಕೇವಲ ಹೆಸರನ್ನು ಕೊಡಲಾಗಿದೆ. ಆತ್ಮವು ವಸ್ತುವಾಗಿದೆ. ನಾಲ್ಕು ವೇದಗಳನ್ನು ಓದಿದರೂ ಸಹ ಅದರಲ್ಲಿ ಆತ್ಮವು ಸಿಗುವುದಿಲ್ಲ. ಎಲ್ಲಾ ಜನರು ಆತ್ಮದ ಹುಡುಕಾಟದಲ್ಲಿದ್ದಾರೆ. ಆದರೆ ಆತ್ಮವು ಸ್ಥಲ ವಸ್ತುವೂ ಅಲ್ಲ, ಸೂಕ್ಷ್ಮ ವಸ್ತುವೂ ಅಲ್ಲ, ಸೂಕ್ಷ್ಮತರ ವಸ್ತು ಕೂಡಾ ಅದಲ್ಲ. ಆತ್ಮವು ಸೂಕ್ಷ್ಮತಮ್ ವಸ್ತುವಾಗಿದೆ. ಪುಸ್ತಕವು ಸ್ಕೂಲವಾಗಿದೆ, ಶಬ್ದವೂ ಸ್ಕೂಲವಾಗಿದೆ. ಪುಸ್ತಕದಲ್ಲಿ ಕೇವಲ ಸ್ಕೂಲ ವಿಚಾರಗಳಿವೆ. ಸೂಕ್ಷ್ಮ, ಸೂಕ್ಷ್ಮತರ, ಸೂಕ್ಷ್ಮತಮ್ ವಿಚಾರಗಳು ಎಲ್ಲಿಯೂ ಇಲ್ಲವೇ ಇಲ್ಲ. ಹೀಗಿರುವಾಗ, ಎಲ್ಲಿ ಆತ್ಮದ ಅನ್ವೇಷಣೆ ಮಾಡುವುದು? Go to 'ಜ್ಞಾನಿ.' 'ಜ್ಞಾನಿ ಪುರುಷರ' ಬಳಿಗೆ ಹೋದರೆ, ಎಲ್ಲವೂ ಪ್ರಾಪ್ತಿಯಾಗುವುದು.
ಅಹಂಕಾರವು, ಧ್ಯಾನದಲ್ಲಿ ಇಲ್ಲ ಆದರೆ ಕ್ರಿಯೆಯಲ್ಲಿ
ಪ್ರಶ್ಯಕರ್ತ: ನನ್ನಿಂದ ಸರಿಯಾಗಿ ಧ್ಯಾನ ಮಾಡಲು ಆಗುವುದಿಲ್ಲ. ಧ್ಯಾನವನ್ನು ಹೇಗೆ ಮಾಡಬೇಕು? ಅದನ್ನು ನನಗೆ ತಿಳಿಯಬೇಕಾಗಿದೆ.
ದಾದಾಶ್ರೀ: ಧ್ಯಾನವನ್ನು ನೀವು ಮಾಡುತ್ತಿರೋ ಅಥವಾ ಬೇರೆ ಯಾರೋ ಮಾಡುತ್ತಾರೋ?