________________
33
ಅಂತಃಕರಣದ ಸ್ವರೂಪ ಇದೆಯಲ್ಲ' ಎಂದು ಈ ಬುಗುರಿಯನ್ನು ಆಡಿಸುವುದು ಗೊತ್ತಿದೆಯಲ್ಲವೇ? ಅದನ್ನು ಹೇಗೆ ಬೀಸಿಬಿಟ್ಟಾಗ, ತಿರುಗುತ್ತಲೇ ಇರುತ್ತದೆ. ಹೇಗೆ ಅದು ತಿರುಗುತ್ತದೆ? ಅಲ್ಲದೆ, ಆ ಬೀಸಿದ ಬುಗುರಿಯು ನಿರ್ಜೀವವಾಗಿದೆ! ಅದೇ ರೀತಿ ಈ ನಮ್ಮ ಅಹಂಕಾರವು ಕೂಡ ನಿರ್ಜೀವ ಅಹಂಕಾರವಾಗಿದೆ. ನಿಮ್ಮಲ್ಲಿ, ಸಜೀವ ಅಹಂಕಾರವೂ ಇದೆ ಮತ್ತು ನಿರ್ಜೀವ ಅಹಂಕಾರವೂ ಇದೆ. ನಿರ್ಜೀವ ಅಹಂಕಾರದಿಂದ ಕರ್ಮಫಲವು ದೊರಕುತ್ತದೆ ಹಾಗು ಸಜೀವ ಅಹಂಕಾರದಿಂದ ಮುಂದಿನ ಜನ್ಮಕ್ಕಾಗಿ ಕರ್ಮಬಂಧನವಾಗುತ್ತದೆ.
ಸಜೀವ ಅಹಂಕಾರದಿಂದಾಗಿ ಮುಂದಿನ ಜನ್ಮದ ಮನಸ್ಸು-ವಚನ-ಕಾಯದ ಹೊಸ ಬ್ಯಾಟರಿ Charge ಮಾಡಿಕೊಳ್ಳಲಾಗುತ್ತದೆ ಹಾಗು ನಿರ್ಜೀವ ಅಹಂಕಾರದಿಂದ ಈಗಿನ ಮನಸ್ಸು-ವಚನ-ಕಾಯದ ಹಳೆಯ (ಹಿಂದಿನ ಜನ್ಮದಲ್ಲಿ Charge ಆಗಿರುವ) ಬ್ಯಾಟರಿ Discharge ಆಗುತ್ತದೆ. ಹೀಗೆ ನಿಮ್ಮಲ್ಲಿ Charge ಹಾಗು Discharge ಎರಡೂ ನಡೆಯುತಲಿದೆ. ನಾವು ನಿಮ್ಮ Charge ಅನ್ನು ನಿಲ್ಲಿಸಿ ಬಿಡುತ್ತೇವೆ. ಆಮೇಲೆ ಬರೀ Discharge ಮಾತ್ರ ಉಳಿದಿರುತ್ತದೆ. ಕೇವಲ ಸಂಸಾರವನ್ನು ನಡೆಸಲು ಎಷ್ಟು ಅಹಂಕಾರದ ಅವಶ್ಯಕತೆ ಇದೆಯೋ, ಅಷ್ಟು Discharge ರೂಪದ ಅಹಂಕಾರ ಮಾತ್ರ ಉಳಿದಿರುತ್ತದೆ. ಅಲ್ಲಿ Charge ರೂಪದ ಅಹಂಕಾರವು ಇರುವುದಿಲ್ಲ.
ಆತ್ಮವು ಪ್ರಾಪ್ತಿಯಾದ ಬಳಿಕ, ಯಾರೇ ಅವಹೇಳನ ಮಾಡಿದರೂ, ಏನೇ ಮಾಡಿದರೂ, ಅದ್ಯಾವುದೂ ಸ್ಪರ್ಶವಾಗುವುದಿಲ್ಲ. ಆತ್ಮ ಪ್ರಾಪ್ತಿಯಾದ ಬಳಿಕ ಅಹಂಕಾರವು ಹೊರಟುಹೋಗುತ್ತದೆ. ಅನಂತರದಲ್ಲಿ ಇರುವ ಅಹಂಕಾರವು ಸಂಸಾರದ ಕೆಲಸವನ್ನು ಮಾಡುವಂತಹ ನಿರ್ಜೀವವಾದ ಅಹಂಕಾರ ಮಾತ್ರ ಇರುತ್ತದೆ. ಸಜೀವ ಅಹಂಕಾರವು ಇರುವುದಿಲ್ಲ.
- ಅಹಂಕಾರವನ್ನು ಮುಕ್ತವಾಗಿಸಬೇಕಾಗಿದೆ. ಅಹಂಕಾರವು ಸಂಪೂರ್ಣವಾಗಿ ಮುಕ್ತವಾದರೆ, ಮುಕ್ತಿ ದೊರೆತಂತೆ.
ಜ್ಞಾನಿಗಳ ಭಾಷೆಯಲ್ಲಿ ಜನನ-ಮರಣವು ಯಾರಿಗೆ?
ಪ್ರಶ್ಯಕರ್ತ: ಆತ್ಮ ಅಮರವಾಗಿದೆ ಇದರ ಅರ್ಥವೇನು?