________________
34
ಅಂತಃಕರಣದ ಸ್ವರೂಪ ದಾದಾಶ್ರೀ: ಅಮರ ಅಂದರೆ ಸನಾತನವಾಗಿದೆ. ಯಾವ ವಸ್ತು Real ಆಗಿದೆ, ಅದು ಸನಾತನವಾಗಿದೆ. ಸನಾತನವೇ ಅಮರವೆಂದು. ಸನಾತನವೆಂದರೆ ಶಾಶ್ವತ, Permanent! ಆತ್ಮವು Permanent ಆಗಿದೆ. ನೀವು ಪಂಚೇಂದ್ರಿಯಗಳಿಂದ ಏನೆಲ್ಲಾ ಅನುಭವಿಸುವಿರೋ, ಅವೆಲ್ಲವೂ Relative ಆಗಿದೆ. ಅವುಗಳು ಅವಸ್ಥೆಗಳಾಗಿವೆ ಹಾಗೂ ಅವಸ್ಥೆಯು (ಸ್ಥಿತಿಯು) Temporary Adjustment ಆಗಿದೆ, ವಿನಾಶಿಯಾಗಿದೆ.
ಪ್ರಶ್ಯಕರ್ತ: ಇಲ್ಲಿ ಮರಣ ಹೊಂದುವವ ಯಾರು?
ದಾದಾಶ್ರೀ: 'ತಾನು' ಮರಣ ಹೊಂದುವುದೇ ಇಲ್ಲ. ಯಾವ ಅಹಂಕಾರವಿದೆಯೋ, ಅದು ಮರಣಹೊಂದುತ್ತದೆ. ಏಕೆಂದರೆ ಅದು 'ನಾನು, ನಾನು' ಎಂದು ಹೇಳುತ್ತಲೇ ಇರುತ್ತದೆ, ಎಲ್ಲಿ ಅಹಂಕಾರ ಇರುವುದಿಲ್ಲವೋ, ಅದು 'ತಾನೇ' ಆಗಿದೆ. 'ತನ್ನನ್ನು ತಾನು ತಿಳಿದ ಮೇಲೆ 'ತಾನು' ಎಂದೂ ಮರಣಹೊಂದುವುದಿಲ್ಲ. ಅಹಂಕಾರಕ್ಕೆ ಮರಣದ ಭಯವಿದೆ. ಈ ಅಹಂಕಾರದಿಂದಾಗಿ ಕ್ಷಣ ಮಾತ್ರದಲ್ಲಿ ಏರುತ್ತದೆ (Elevate) ಹಾಗೂ ಕ್ಷಣ ಮಾತ್ರದಲ್ಲಿ ತಗ್ಗುತ್ತದೆ (Depress). ಅಹಂಕಾರವು (Egoism) ಹೊರಟುಹೋದರೆ, ಮತ್ತೆಂದೂ ಖಿನ್ನತೆಯು (Depress) ಕಾಡುವುದಿಲ್ಲ.
ಭಗವಾನ್ ಮಹಾವೀರರು ಹೇಳುತ್ತಾರೆ, 'ಜಗತ್ತಿನಲ್ಲಿ ಯಾರೂ ಮರಣಹೊಂದುವುದಿಲ್ಲ' ಎಂದು. ಆದರೂ ಎಲ್ಲಾ ಜನರು ರೋಧಿಸುತ್ತಾರೆ, ಯಾಕೆ? ಜನರು, 'ನಮಗೆ ಹಾಗೆ (ಮರಣ ಹೊಂದುವುದಿಲ್ಲವೆಂದು) ಕಾಣಿಸುವುದಿಲ್ಲ' ಎಂದು ಹೇಳುತ್ತಾರೆ. ಆದರೆ ನಾನು ಹೇಳುತ್ತೇನೆ, 'ನಮ್ಮ ದೃಷ್ಟಿಯಿಂದ ನೋಡಿ, ಜ್ಞಾನಿ ಪುರುಷರ ದೃಷ್ಟಿಯಿಂದ ನೋಡಿ.' ನಾವು ನೋಡಿಬಿಟ್ಟಿದ್ದೇವೆ ಈ ಜಗತ್ತಿನಲ್ಲಿ ಯಾರೂ ಮರಣಹೊಂದುವುದಿಲ್ಲವೆಂದು. ಆದರೂ ಜನ ದುಃಖಿಸುತ್ತಾರೆ, ನಮ್ಮ ಅಣ್ಣ ಮೃತ್ಯುಹೊಂದಿದರು, ನಮ್ಮ ಅಳಿಯ ಮೃತ್ಯುಹೊಂದಿದರು ಎಂದು. ಅರೇ, ಸುಮ್ಮನೆ ಯಾಕೆ ವ್ಯಥೆಪಡುತ್ತೀರ? ಇದೆಲ್ಲಾ ಕೇವಲ ಅವಸ್ಥೆಗಳ ವಿನಾಶವಾಗಿವೆ, ಮೂಲ ವಸ್ತುವು ಸನಾತನವಾಗಿದೆ. ನೀವು ಸನಾತನವಾಗಿರುವಾಗ, ನಿಮಗೇನೂ ಆಗುವುದಿಲ್ಲ ಮತ್ತು ನೀವು ಅವಸ್ಥೆಗಳ ರೂಪವಾದಾಗ ಮಾತ್ರ ನಿಮ್ಮ ವಿನಾಶವಾಗುವುದು.
ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಾನು ವೈಜ್ಞಾನಿಕವಾದ ವಿಚಾರವನ್ನು ತಿಳಿಸಿಕೊಡುತ್ತೇನೆ, ವೈಜ್ಞಾನಿಕ ಎಂದರೆ, ಯಾವುದು 'ಇದೆಯೋ ಅದು ಇದ್ದೇ ಇದೆ' ಹಾಗೂ ಯಾವುದು 'ಇಲ್ಲವೋ, ಅದು ಇಲ್ಲವೇ ಇಲ್ಲ' ಎಲ್ಲವನ್ನು ಹೇಗಿದೆಯೋ