________________
31
ಅಂತಃಕರಣದ ಸ್ವರೂಪ ನನಗಿಂತ ದೊಡ್ಡವರು ಯಾರೂ ಇಲ್ಲ. ಹಾಗಾಗಿ ನನಗೆ ಅಹಂಕಾರದ ಅವಶ್ಯಕತೆಯಾದರೂ ಏನಿದೆ? ನಾನಂತೂ ಬಾಲಕನಂತೆ ಇರುತ್ತೇನೆ. ನಮಗೆ (ಜ್ಞಾನಿಗೆ) ಯಾರಾದರು ತೆಗಳಿದರೂ ಕೂಡ ನಾವು ಆಶೀರ್ವಾದವನ್ನು ನೀಡುತ್ತೇವೆ. ನಾವು ತಿಳಿದಿದ್ದೇವೆ ಆ ಬಡಪಾಯಿಗೆ ತಿಳುವಳಿಕೆಯೂ ಇಲ್ಲ ಹಾಗು ದೃಷ್ಟಿಯೂ ಇಲ್ಲ ಎಂದು. ಅವರನ್ನು ನಾವು ನಿರ್ದೋಷಿಗಳೆಂದು ಪರಿಗಣಿಸುತ್ತೇವೆ (ನೋಡುತ್ತೇವೆ), ಜಗತ್ತಿನಲ್ಲಿ ನಮಗೆ ಯಾರೂ ದೋಷಿಗಳೆಂದು ಕಾಣಿಸುವುದಿಲ್ಲ. ನಮಗೆ ಎಲ್ಲರ ಆತ್ಮವು ಗೋಚರಿಸುತ್ತದೆ ಹಾಗೂ ಪ್ರಕೃತಿಯು ಕಾಣಿಸುತ್ತದೆ. ಮೊದಲಿಗೆ ಪುರುಷನಾಗ ಬೇಕು, ನಂತರ ಪುರುಷನನ್ನು ಕಾಣಬೇಕು. ಅದರ ನಂತರ ಯಾರೂ ದೋಷಿಗಳೆಂದು ಕಾಣುವುದಿಲ್ಲ. ಭಗವಾನ್ ಮಹಾವೀರರು ಕೈವಲ್ಯ ಜ್ಞಾನದಲ್ಲಿ ಇರುವಾಗ, ಅವರಿಗೆ ಎಲ್ಲರೂ ಒಂದೇ ಸಮಾನದ ನಿರ್ದೋಷಿಗಳಂತೆ ತೋರುತ್ತಿದ್ದರು. ಅವರ ದೃಷ್ಟಿಯಲ್ಲಿ ಕಳ್ಳ ಕಳ್ಳತನ ಮಾಡಿದರೆ, ಅದು ಕೂಡಾ ಸರಿ ಮತ್ತು ದಾನಿ ದಾನ ನೀಡಿದರೆ, ಅದು ಕೂಡಾ ಸರಿ.
ಅಹಂಕಾರದ ತೀರ್ಪು (Judgement)
ದಾದಾಶ್ರೀ: ನಿಮ್ಮಲ್ಲಿ ತಪ್ಪುಗಳು ಏನಾದರು ಇದೆಯೋ, ಇಲ್ಲವೋ?
ಪ್ರಶ್ಯಕರ್ತ: ಹೌದು, ಬಹಳ ಇದೆ.
ದಾದಾಶ್ರೀ: ಎಷ್ಟು? ಎರಡೋ-ನಾಲ್ಕೂ ಇರಬಹುದಲ್ಲವೇ? ಪ್ರಶ್ಯಕರ್ತ: ನಮ್ಮಿಂದ ಎಲ್ಲೆಲ್ಲಿ ತಪ್ಪುಗಳಾಗಿದೆ ಎಂದು ವಿಚಾರವನ್ನು ಮಾಡಿದಾಗ, ಬಹಳಷ್ಟು ತಪ್ಪುಗಳು ಹೊರಗೆ ಬರುತ್ತವೆ, ಯಾಕೆಂದರೆ ಆತ್ಮದ 'ತೀರ್ಪು' ತಪ್ಪಾಗುವುದಿಲ್ಲ.
ದಾದಾಶ್ರೀ: ಇದು ಆತ್ಮದ 'ತೀರ್ಪು' ಅಲ್ಲ. ಇದು ಅಹಂಕಾರದ 'Judgement' ಆಗಿದೆ. ಅದೂ ಸಹ ಒಳ್ಳೆಯ 'Judgement ' ಮಾಡುತ್ತದೆ. ಅಹಂಕಾರವು ಶುದ್ಧ ವಸ್ತುವೇ ಆಗಿದೆ. ಅದನ್ನು ಎಷ್ಟು ಶುದ್ಧವಾಗಿ ಇಡಬಹುದೋ ಅಷ್ಟು ಶುದ್ಧವಾಗುತ್ತದೆ. ಆದರೂ ಅಹಂಕಾರದ ಮೂಲ ಗುಣ ಹೋಗುವುದಿಲ್ಲ. ಅಹಂಕಾರಕ್ಕೆ ಯಾವುದು ಅಭಿರುಚಿಯ (Interest) ವಸ್ತುವಾಗಿದೆಯೋ, ಅದನ್ನು ಮುಚ್ಚಿಡುತ್ತದೆ ಮತ್ತು ಅಲ್ಲಿ ನ್ಯಾಯ ಮಾಡಲು ಹೋಗುವುದಿಲ್ಲ. ಅಹಂಕಾರವು, ತನಗೆ ಯಾವುದರ ಬಗ್ಗೆ ಅಭಿರುಚಿ ಇರುತ್ತದೆಯೋ, ಅಲ್ಲೆಲ್ಲಾ ತಪ್ಪುಗಳನ್ನು ನೋಡುವುದಿಲ್ಲ. ಅಲ್ಲಿ ಎಲ್ಲಾ ತಪ್ಪುಗಳನ್ನು ಅಡಗಿಸಿ ಬಿಡುತ್ತದೆ.