Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 38
________________ ಅಂತಃಕರಣದ ಸ್ವರೂಪ ಆಧಾರದಿಂದ ನಡೆಯುತ್ತದೆ. ಎರಡೂ ವಿಭಿನ್ನವಾಗಿದೆ. ಯಾವುದು ಸ್ವ-ಪರ ಪ್ರಕಾಶಕವಾಗಿದೆ, ಅದು ಎಲ್ಲವನ್ನೂ ಮಾಡಬಲ್ಲದ್ದು. ಇಡೀ ಜಗತ್ತಿನ ಜನರನ್ನು ನಾವು (ಜ್ಞಾನಿ) ಬುಗುರಿಗಳು ಎಂದು ಹೇಳುತ್ತೇವೆ. ನಿಜವಾಗಿ ನೋಡಿದರೆ, ಎಲ್ಲರೂ ಬುಗುರಿಗಳೇ ಆಗಿದ್ದಾರೆ! ಪ್ರಕೃತಿಯು ಕುಣಿಸಿದಂತೆ, ನೀವು ಕುಣಿಯುವುದಾಗಿದೆ; ನಂತರ ಹೇಳಲಾಗುತ್ತದೆ, 'ನಾನು ಕುಣಿಯುತ್ತಿದ್ದೇನೆ' ಎಂದು. ಆದರೆ ಜ್ಞಾನಿಪುರುಷರಲ್ಲಿ 'ಸ್ವ' ಹಾಗು 'ಪರ' ಎರಡು ಪ್ರತ್ಯೇಕವಾಗಿಯೇ ಇರುತ್ತವೆ. ಹಾಗೂ ಅವೆರಡರ ನಡುವೆ ಭೇದರೇಖೆ (line of demarcation) ಇರುತ್ತವೆ. 'ಪರ ಎನ್ನುವುದು ಪ್ರಕೃತಿಯ ವಿಭಾಗ, ಅನಾತ್ಮ ವಿಭಾಗವಾಗಿದೆ, ಮತ್ತು 'ಸ್ವ' ಎನ್ನುವುದು ತನ್ನ ವಿಭಾಗ, ಆತ್ಮದ ವಿಭಾಗವಾಗಿದೆ. ಆತ್ಮದ ವಿಭಾಗವು (home department) ಹಾಗೂ ಅನಾತ್ಮ ವಿಭಾಗವು (foreign department), ಎರಡು ಪ್ರತ್ಯೇಕವಾಗಿಯೇ ಇರುತ್ತವೆ. ಆತ್ಮವು, ಅವಶ್ಯಕತೆ ಬಿದ್ದಾಗ ಮಾತ್ರ ಅನಾತ್ಮ ವಿಭಾಗಕ್ಕೆ ಬಂದು ಪ್ರಕಾಶವನ್ನು ನೀಡುತ್ತದೆ ಆದರೆ ಆತ್ಮವು, ಎಂದೂ ಯಾವ ಕ್ರಿಯೆಯನ್ನು ಮಾಡುವುದಿಲ್ಲ; ಆತ್ಮಕ್ಕೆ ಕ್ರಿಯೆಯನ್ನು ಮಾಡುವ ಸಾಮರ್ಥ್ಯವು ಇರುವುದಿಲ್ಲ. ಆತ್ಮವು ದರ್ಶನ ಕ್ರಿಯೆ ಹಾಗು ಜ್ಞಾನ ಕ್ರಿಯೆ ಎಂಬುದೆರಡು ಕ್ರಿಯೆಗಳನ್ನು ಮಾತ್ರ ಹೊಂದಿರುತ್ತದೆ. ಇಲ್ಲಿ ನಮಗೆ ಕಾಣಸಿಗುವಂತಹ ಯಾವುದೇ ಕ್ರಿಯೆಗಳನ್ನು ಮಾಡುವ ಶಕ್ತಿ ಆತ್ಮಕ್ಕೆ ಇರುವುದಿಲ್ಲ. ಅದಕ್ಕೆ ಅಂಥದೆನಾದರೂ ಮಾಡಬೇಕೆಂಬ ಇಚ್ಛೆಯಾದರೆ, ಆಗ ಕೇವಲ ಕಲ್ಪನೆಯನ್ನು ಮಾತ್ರ ಮಾಡಬಲ್ಲದ್ದು, ಇದಕ್ಕಾಗಿ ಯಾವುದೇ ಅಂಗಗಳ ಅವಶ್ಯಕತೆಯು ಇರುವುದಿಲ್ಲ. ಆದರೆ ಕಲ್ಪನೆಯನ್ನು ಮಾಡಿದ ನಂತರ ಅಂಗಸಹಿತವಾಗುತ್ತದೆ. ಈ ಕಲ್ಪನೆಯಿಂದಲೇ ಜಗತ್ತು ನಿಂತಿರುವುದಾಗಿದೆ. ನಂತರ ಅದಕ್ಕೆ ಎಲ್ಲಾ ವಸ್ತು ಆಕಾರಗಳು ದೊರೆಯುತ್ತವೆ. ನಂತರ ಅದಕ್ಕೆ ಹೊರಗಿನ ಕಲ್ಪನೆಗಳು ಇಷ್ಟವಾಗುವುದಿಲ್ಲ, ಆದುದರಿಂದ ಮೋಕ್ಷವನ್ನು ಯಾಚಿಸತೊಡಗುತ್ತದೆ. 'ಹೇ ಭಗವಂತ! ನನಗೆ ಇದು ಯಾವುದೂ ಬೇಡ. ನನಗೆ ಮೋಕ್ಷವೇ ಬೇಕು' ಎಂದು. ಯಾರು ಭಗವಂತನಿದ್ದಾನೆ, ಅವನ ಒಂದೇ ಒಂದು ಕಲ್ಪನೆಯಿಂದ ಇಡೀ ಜಗತ್ತೇ ನಿರ್ಮಾಣವಾಗಿ ಬಿಡುತ್ತದೆ! ಅಷ್ಟೊಂದು ಶಕ್ತಿ ಕಲ್ಪನೆಗೆ ಇದೆ! ಭಗವಂತನಲ್ಲಿ ಕಲ್ಪನೆಯ ಶಕ್ತಿ ಇದೆ. ಆದರೆ ನಮ್ಮ ಹಾಗೆ ಬೇರೆ ಯಾವ ಶಕ್ತಿಯು ಇಲ್ಲ, ಅಹಂಕಾರ (Egoism) ಇಲ್ಲ. 30 ಯಾಕಾಗಿ ಅಹಂಕಾರವನ್ನು ಮಾಡಬೇಕು? ದೊಡ್ಡ ವ್ಯಕ್ತಿಗೆ ಅಹಂಕಾರ ಮಾಡಬೇಕಾದ ಅವಶ್ಯಕತೆಯಾದರೂ ಏನಿದೆ? ಸಣ್ಣ ವ್ಯಕ್ತಿಯೇ ಅಹಂಕಾರ ಮಾಡುವುದು. ಯಾರು ದೊಡ್ಡವರಿದ್ದಾರೆ, ಅವರಿಗಿಂತ ದೊಡ್ಡವರು ಯಾರು ಇಲ್ಲದಿರುವಾಗ ಅವರಿಗೆ ಅಹಂಕಾರದ ಅಗತ್ಯವಾದರೂ ಏನಿದೆ? ನಾನು (ಜ್ಞಾನಿ) ಸ್ವತಃ ತಿಳಿದಿದ್ದೇನೆ, ಬ್ರಹ್ಮಾಂಡದಲ್ಲಿ

Loading...

Page Navigation
1 ... 36 37 38 39 40 41 42 43 44 45 46 47 48 49 50 51 52 53 54