________________
28
ಅಂತಃಕರಣದ ಸ್ವರೂಪ ದಾದಾಶ್ರೀ: ಯಾರು 'ಜ್ಞಾನಿ ಪುರಷರು' ಇರುತ್ತಾರೋ, ಅವರ ವಿಜ್ಞಾನದಿಂದ ಎಲ್ಲವೂ ಸಾಧ್ಯವಾಗುತ್ತದೆ. ಬೇರೆ ಯಾವ ಜ್ಞಾನದಿಂದ ಏನೂ ನಡೆಯುವುದಿಲ್ಲ. ಅವೆಲ್ಲವೂ ಜ್ಞಾನವೆ, ಆದರೆ ಅದು 'Relative' ಜ್ಞಾನವಾಗಿದೆ. ಅಲ್ಲಿ ಮಾಡಬೇಕಾಗಿ ಬರುತ್ತದೆ. ಆದರೆ ಇದು "Real ಜ್ಞಾನವಾಗಿದೆ, ಇದನ್ನು ವಿಜ್ಞಾನವೆಂದು ಹೇಳಲಾಗುತ್ತದೆ. ವಿಜ್ಞಾನವನ್ನು ಅರಿತ ಮೇಲೆ ನಿಮಗೂ ಏನೂ ಮಾಡಬೇಕಾದದ್ದು ಇಲ್ಲವೇ ಇಲ್ಲ ಎಂದೆನಿಸುತ್ತದೆ.
ಪ್ರಶ್ನಕರ್ತ: ಕೆಲವರು ಹೇಳಿಕೊಳ್ಳುತ್ತಾರೆ, ನಮಗೆ ಜ್ಞಾನವಾಗಿದೆ ಎಂದು. ಹಾಗಾದರೆ ಅದು
ಏನು?
ದಾದಾಶ್ರೀ: ಇಲ್ಲ, ಅದು ಜ್ಞಾನವಲ್ಲ. ಯಾವುದನ್ನು ಜ್ಞಾನವೆಂದು ತಿಳಿದಿದ್ದಾರೋ, ಅದು ಯಾಂತ್ರಿಕವಾಗಿದೆ (Mechanical) ಬುದ್ದಿಜನ್ಯ ಜ್ಞಾನವಾಗಿದೆ. ನಿಜವಾದ ಜ್ಞಾನ, ಅದು ಬೇರೆಯೇ ವಸ್ತುವಾಗಿದೆ. ಆ ಜ್ಞಾನವನ್ನು ವರ್ಣಿಸಲು ಅಸಾಧ್ಯವಾಗಿದೆ. ಜ್ಞಾನದ ಒಂದು ಶೇಕಡಾ (1%) ಕೂಡಾ ಇಂದು ಯಾರೂ ನೋಡಿಲ್ಲ. ಅವರು ತಿಳಿದಿರುವುದೆಲ್ಲಾ Mechanical ಚೇತನದ ಮಾತಾಗಿದೆ, ಬೌದ್ದಿಕದ ಮಾತಾಗಿದೆ ಹಾಗೂ ಅದು ಬೌದ್ದಿಕದ ಸೂಕ್ಷ್ಮ ವಿಭಾಗವಾಗಿದೆ. ಯಾವುದು ಭಕ್ತಿ ವಿಭಾಗವಾಗಿದೆಯೋ, ಅಲ್ಲಿ 'ನಾನು' ಮತ್ತು 'ಭಗವಂತ' ಬೇರೆ ಎನ್ನುವುದು ಇರುತ್ತದೆ. ಆದರೆ ಜಗತ್ತಿಗೆ ಈ ಜ್ಞಾನವು ಸೂಕ್ತವಾಗಿದೆ. ಯೋಗ್ಯವಾದ ಜ್ಞಾನವೆಂದು ಯಾವುದನ್ನು ಕರೆಯುತ್ತಾರೆಂದರೆ, ಯಾವುದು ಪೂರ್ಣತೆಯನ್ನು ಹೊಂದಿರುವುದೋ, ಅದು ಯೋಗ್ಯವಾದ ಜ್ಞಾನವಾಗಿದೆ. ಅದರಿಂದಾಚೆಗೆ ಏನನ್ನೂ ತಿಳಿಯಬೇಕಾದ ಅವಶ್ಯಕತೆಯೇ ಇರುವುದಿಲ್ಲವೋ, ಅಂಥದ್ದನ್ನು 'ಕೇವಲಜ್ಞಾನ' ಎಂದು ಕರೆಯಲಾಗುತ್ತದೆ; ಇದರಲ್ಲಿ ಯಾವ ಕ್ರಿಯೆಯೂ ಇಲ್ಲ. ಜಗತ್ತಿನಲ್ಲಿ ಯಾವ ಜ್ಞಾನವಿದೆಯೋ, ಅದು ಕ್ರಿಯಾಶೀಲ ಜ್ಞಾನವಾಗಿದೆ.
ಈ ದೇಹವು ಪ್ರಸ್ತುತ ಜೀವನದಲ್ಲಿ (one life) ಹೀಗೆಯೇ ನಡೆಯುತಲಿರುತ್ತದೆ. ಇದರಲ್ಲಿ ಆತ್ಮದ ಯಾವ ಕ್ರಿಯೆ ಇಲ್ಲದಿದ್ದರೂ ಏನೂ ಸಮಸ್ಯೆಯಿಲ್ಲ. ಆದರೆ, ಇದಕ್ಕೆ (ದೇಹಕ್ಕೆ) ಆತ್ಮದ ಉಪಸ್ಥಿತಿಯ ಅವಶ್ಯಕತೆ ಇದೆ. 'ನಾವು' 'ಅದರ ಜೊತೆಯಲ್ಲಿ ಇರುವುದರಿಂದಾಗಿ, ಎಲ್ಲಾ ಕ್ರಿಯೆಗಳು ನಡೆಯುತ್ತವೆ. ಈ ಎಲ್ಲಾ ಕ್ರಿಯೆಗಳು Mechanical ಆಗಿವೆ. ಜಗತ್ತು ಯಾವುದವನ್ನು ಆತ್ಮವೆಂದು ಪರಿಗಣಿಸಿದೆಯೋ, ಅದು Mechanical ಆತ್ಮವಾಗಿದೆ, ನಿಜವಾದ ಆತ್ಮ ಅದಲ್ಲ. ನಿಜವಾದ ಆತ್ಮವನ್ನು 'ಜ್ಞಾನಿ' ನೋಡಿದ್ದಾರೆ ಹಾಗು ಜ್ಞಾನಿಯು ಅದರಲ್ಲಿಯೇ (ಅತ್ಮದಲ್ಲಿಯೆ) ಇರುತ್ತಾರೆ. ನಿಜವಾದ ಆತ್ಮವು 'ಸ್ವತಃ ತಾನೇ ಆಗಿದೆ. ಅದನ್ನು (ಆತ್ಮವನ್ನು) 'ಯಾರು' ತಿಳಿದಿರುತ್ತಾರೆ, ಅವರೇ 'ಸ್ವಯಂ' ಆಗಿರುತ್ತಾರೆ. ನಿಜವಾದ ಆತ್ಮ ಅಚಲವಾಗಿದೆ ಹಾಗು