________________
26
ಅಂತಃಕರಣದ ಸ್ವರೂಪ ಪ್ರಶ್ಯಕರ್ತ: ಅವನು ಆ ತಿಗಣೆ ಸಾಯಿಸುವ ಔಷಧಿಯನ್ನು ತೆಗೆದುಕೊಳ್ಳುವುದರ ಹಿಂದೆ ಅವನಿಗೆ ಪೂರ್ವದ ಸಂಬಂಧವೇನಾದರೂ ಇದೆಯೇ?
ದಾದಾಶ್ರೀ: ಹೌದು, ಪೂರ್ವದ ಸಂಭಂದದಿಂದಾಗಿಯೇ ಹಾಗೆ ಮಾಡುವುದಾಗಿದೆ. ಅದು ನಮ್ಮದೇ ಕರ್ಮದಿಂದಾಗಿದೆ, ಬೇರೆ ಯಾವುದರಿಂದಲೂ ಅಲ್ಲ. ಭಗವಂತನು ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಅವನ ಕರ್ಮದಿಂದಾಗಿ ಬುದ್ದಿಯು ಆ ರೀತಿಯಲ್ಲಿ ಅವನಿಗೆ ಸಾಯಿಸುವ ವಿಷವನ್ನು ಕುಡಿಸಿಬಿಡುತ್ತದೆ. ಆತ್ಮವು ಯಾವಾಗಲೂ ಅಸಂಗವಾಗಿಯೇ ಇರುತ್ತದೆ.
ಜನರು ಹೇಳುತ್ತಾರೆ, ಆತ್ಮದ ಇಚ್ಛೆಯಿಂದಾಗಿದೆ ಎಂದು. ಆತ್ಮಕ್ಕೆ ಇಚ್ಛೆಯೇ ಉಂಟಾಗುವುದಿಲ್ಲ, ಆತ್ಮಕ್ಕೆ ಇಚ್ಛೆ ಎನ್ನುವುದೇ ಇಲ್ಲ. ಆತ್ಮಕ್ಕೆ ಏನಾದರು ಇಚ್ಚೆಯೆನ್ನುವುದು ಇದ್ದಿದ್ದರೆ ಆಗ ಅದು ಭಿಕಾರಿಯ ಹಾಗೆ ಇರಬೇಕಾಗುತ್ತಿತ್ತು. ಆತ್ಮಕ್ಕೆ ಇಚ್ಚೆಯಾಗಿ ಬಿಟ್ಟರೆ ಆಗ ಎಲ್ಲವೂ ಮುಗಿದ ಹಾಗೆ. ಆದರೆ ಇದೆಲ್ಲಾ ಅಹಂಕಾರದಿಂದಾಗಿದೆ, ನಡುವಿನಲ್ಲಿನ ಈ 'ಅಹಂ' ನಿಂದಾಗಿಯೇ ಆಗಿದೆ. ಯಾವಾಗ ಅಹಂಕಾರವು ಹೊರಟು ಹೋಗುವುದೋ, ಆಗ ಎಲ್ಲಾ ಗೊಂದಲಗಳು ನಿವಾರಣೆಯಾಗಿ ಬಿಡುತ್ತವೆ (Puzzle Solve). ಈ ಗೊಂದಲಗಳನ್ನು ಪರಿಹರಿಸಿ ಕೊಳ್ಳಬೇಕೆಂದು ವಿಚಾರ ಮಾಡಿದ್ದೀರಾ? ಆದರೆ, ಜೀವನದಲ್ಲಿ ಗೊಂದಲಗಳು ಇದ್ದರೇನೇ ಪ್ರಗತಿಯಾಗುವುದು. ಗೊಂದಲಗಳು ಇರಬೇಕು, ಸಮಸ್ಯೆಗಳು ಇರಬೇಕು. ಪ್ರಗತಿ ಹೊಂದಬೇಕಿದ್ದರೆ ಸಮಸ್ಯೆಗಳಿರಬೇಕು. ಆಗ, ಮನಸ್ಸನ್ನು ಒರೆಗೆ ಹಚ್ಚಬೇಕು (Testing), ಬುದ್ದಿಯನ್ನು ಒರೆಗೆ ಹಚ್ಚಬೇಕು, ಅಹಂಕಾರವನ್ನು ಒರೆಗೆ ಹಚ್ಚಿ ನೋಡಬೇಕು.
ಜನರು 'ನಾವು ಹೇಳಿದೆವು' ಎಂದು ಅವರೇ ವಾಣಿಯ ಮಾಲೀಕರಾಗಿ ಬಿಡುತ್ತಾರೆ. ಎಲ್ಲಾ ಜನರು ಭ್ರಾಂತಿಯಿಂದ ಹೇಳುತ್ತಾರೆ, 'ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ' ಎಂದು. ಅದೆಲ್ಲಾ ಭ್ರಾಂತಿಯಾಗಿದೆ, ಅದು ಯಾವುದೂ ನಿಜವಲ್ಲ. ಭ್ರಾಂತಿಯಿಂದಾಗಿ ಅಹಂಕಾರವು ಉಂಟಾಗುತ್ತದೆ. ಈ ಅಹಂಕಾರದಿಂದಾಗಿ, ಜನ್ಮ-ಜನ್ಮಾಂತರಗಳ ಬಂಧನಕ್ಕೆ ಸಿಲುಕ ಬೇಕಾಗುತ್ತದೆ.
ಯಾವಾಗ ಅಂತಿಮ ಸಮಯವು (Last Station) ಹತ್ತಿರವಾಗುತ್ತಲಿದ್ದು ಇನ್ನೇನು, ಎರಡು-ಮೂರು ದಿನಗಳು ಉಳಿದಿರುವಾಗ ಏನಾಗುತ್ತದೆ? ಏನು ಹೇಳುತ್ತಾರೆ? 'ನನಗೆ ಮಾತನಾಡಲು ಆಗುತ್ತಿಲ್ಲ', ಮಾತು ನಿಂತು ಹೋಗಿದೆ' ಎಂದು ಹೇಳುತ್ತಾರೆ. ಅಲ್ಲದೆ ಮೊದಲಿಗೆ ಅವರೇ ಹೇಳುತ್ತಿದ್ದರು, 'ನಾನು ಮಾತನಾಡುತ್ತೇನೆ, ನಾನು ಹೇಳುತ್ತೇನೆ' ಎಂದು. ಅರೇ, ಏನು ಹೇಳುತ್ತಾರೆ?