________________
- 25
ಅಂತಃಕರಣದ ಸ್ವರೂಪ ಸ್ವಭಾವದ್ದಾಗಿದೆ. ಯಾವ ಸಂಯೋಗ ಬರುವುದೋ, ಅದನ್ನು ನೀವೇನೂ ಹೊರಟುಹೋಗು ಅಥವಾ ಹೋಗಬೇಡ ಎಂದು ಹೇಳಬೇಕಾಗಿಲ್ಲ, ಹೋಗಬೇಡ ಎಂದು ಹೇಳಿದರೂ ಅದು ಹೊರಟುಹೋಗುತ್ತದೆ. ಸಂಯೋಗದ ಸ್ವಭಾವವೇ ವಿಯೋಗವಾಗಿದೆ. ಇಲ್ಲಿ ಶುದ್ಧಾತ್ಮ ಏನೂ ಮಾಡಬೇಕಾಗಿಲ್ಲ. ಸಂಯೋಗದ ಸಮಯ ಮುಗಿಯುತ್ತಲೇ ಅದು ಹೊರಟುಹೋಗುತ್ತದೆ. ಸಂಯೋಗದ ಸಮಯದಲ್ಲಿ ಬುದ್ದಿಯು ಎರಡು ತರಹದಲ್ಲಿ ತೋರಿಸುತ್ತದೆ, ಹೀಗಾದರೆ ಒಳಿತು ಅಥವಾ ಹಾಗಾದರೆ ಕೆಡಕು' ಎಂದು. ಎಲ್ಲವೂ ಸಂಯೋಗದ ಅನುಸಾರವಾಗಿದೆ. ಆದರೆ ಬುದ್ದಿಯು ಒಳ್ಳೆಯದು-ಕೆಟ್ಟದ್ದು ಎಂಬ ಹೆಸರನ್ನಿಡುತ್ತದೆ. ಆದರೆ ಇವುಗಳಲ್ಲೆಲ್ಲಾ 'ಜ್ಞಾನಿಗಳು' ಅಬುದ್ಧರಾಗಿ ಇದ್ದುಬಿಡುತ್ತಾರೆ. ಸಂಯೋಗವನ್ನು ಸಂಯೋಗವೆಂದು ಒಪ್ಪಿಕೊಳ್ಳುತ್ತಾರೆ. ಅವರು ಸಂಯೋಗವನ್ನು ಎರಡು ಭಾಗ ಮಾಡುವುದಿಲ್ಲ. 'ಕೆಟ್ಟದ್ದು ಮತ್ತು ಒಳ್ಳೆಯದು' ಎಂಬ ದ್ವಂದ್ವವನ್ನು ಉಂಟುಮಾಡುವುದಿಲ್ಲ. ಯಾರು ಅಬುದ್ಧರಾಗಿ ಇರುತ್ತಾರೋ, ಅಂಥವರಿಗೆ ಸಂಯೋಗವು ಎಂದೂ ಹಾನಿಯನ್ನು ಉಂಟುಮಾಡುವುದಿಲ್ಲ. ಅಲ್ಲದೆ ಬುದ್ದಿವಂತರು ಸಂಯೋಗಗಳ ಬಗ್ಗೆ 'ಒಳ್ಳೆಯದು-ಕೆಟ್ಟದ್ದು' ಎಂದು ವಿಮರ್ಶೆ ಮಾಡುವುದರಿಂದ ತೊಂದರೆಗಳು ಉಂಟಾಗುತ್ತವೆ.
ಬುದ್ಧಿಯು 100% ಇದ್ದರೂ, ಈ ಜಗತ್ತನ್ನು ಯಾರು ಸೃಷ್ಟಿಸಿದರು ಎಂಬುದನ್ನು ತಿಳಿಯಲಾಗುವುದಿಲ್ಲ. ಈಗಿನ ವಿಜ್ಞಾನಿಗಳು ತಿಳಿದಿದ್ದಾರೆ ಈ ಸೃಷ್ಟಿಯಲ್ಲಿ (Creation), ಸೃಷ್ಟಿಕರ್ತನ ಅವಶ್ಯಕತೆ ಇಲ್ಲ ಎಂದು.
'ಅಹಂ-ಕಾರ' ಇದಕ್ಕೆ ಪರಿಹಾರ (Solution)
ಯಾವುದು ತಿಗಣೆ ಸಾಯಿಸುವ ವಿಷ ಇದೆಯೋ, ಅದನ್ನು ಮನುಷ್ಯನು ಕುಡಿದುಬಿಟ್ಟು, ಅವನು ಮರಣ ಹೊಂದಿದರೆ, ಅಲ್ಲಿ ಭಗವಂತನು ಮಾಡುವುದಾದರೂ ಏನು?
ಪ್ರಶ್ನಕರ್ತ: ಆದರೆ ಔಷಧಿಯನ್ನು ಕುಡಿಯುವುದಕ್ಕೆ ಬುದ್ಧಿಯನ್ನು ಯಾರು ಕೊಡುತ್ತಾರೆ?
ದಾದಾಶ್ರೀ: ಒಳಗೆ ಯಾವ ಬುದ್ದಿವಂತಿಕೆ ಇದೆಯೋ, ಅದು ಹೇಳಿಕೊಡುತ್ತದೆ.
ಪ್ರಶ್ನಕರ್ತ: ಅದು ಆತ್ಮವೇ?
ದಾದಾಶ್ರೀ: ಅಲ್ಲ, ಆತ್ಮವು ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಆತ್ಮವು ನಿರ್ಲಿಪ್ತವಾಗಿದೆ, ಅಸಂಗವಾಗಿದೆ. ಇದೆಲ್ಲಾ ಅಹಂಕಾರದ ಕಾರ್ಯವಾಗಿದೆ.