________________
ಅಂತಃಕರಣದ ಸ್ವರೂಪ
23
ಅಹಂಕಾರವು ಮಾಧ್ಯಮವಾಗಿದೆ. ಯಾವ ಆತ್ಮ ಪ್ರಕಾಶವಿದೆಯೋ, ಅದರ ನಡುವೆ ಅಹಂಕಾರದ ಮಾಧ್ಯಮವಿರುತ್ತದೆ, ಜೊತೆಯಲ್ಲಿ ಬುದ್ಧಿಯು ಸೇರಿಕೊಂಡಿರುತ್ತದೆ. ನಮ್ಮ ಬಳಿ ಬುದ್ಧಿ ಇಲ್ಲ, ಏಕೆಂದರೆ ನಮ್ಮ ಅಹಂಕಾರವು ಸಂಪೂರ್ಣವಾಗಿ ಖಾಲಿಯಾಗಿರುವಾಗ, ಮತ್ತೆ ಬುದ್ಧಿಯನ್ನು ಎಲ್ಲಿಂದ ತರುವುದು? ನಮ್ಮಲ್ಲಿ (ಜ್ಞಾನಿಯಲ್ಲಿ) ಸ್ವಲ್ಪ ಮಟ್ಟಿಗಿನ ಅಹಂಕಾರವು ಇದ್ದಿದ್ದರೂ ನಮಗೆ ಜ್ಞಾನವೇ ಪ್ರಾಪ್ತಿಯಾಗುತ್ತಿರಲಿಲ್ಲ, ಪ್ರಕಾಶವೂ ಇರುತ್ತಿರಲಿಲ್ಲ. ಎಲ್ಲಿ ಅಹಂಕಾರವಿದೆಯೋ, ಅಲ್ಲಿ ಬುದ್ಧಿ ಇರುತ್ತದೆ ಹಾಗೂ ಅಹಂಕಾರವು ಸಂಪೂರ್ಣವಾಗಿ ಇಲ್ಲವಾದಾಗ, ಅಲ್ಲಿ ಆತ್ಮದ ಪ್ರಕಾಶವಿರುತ್ತದೆ.
ಬುದ್ದಿ, ಎಲ್ಲರಲ್ಲೂ ಒಂದೇ ಸಮನಾಗಿ ಇರುವುದಿಲ್ಲ. ಒಬ್ಬರಲ್ಲಿ 80 ಶೇಕಡಾ, ಮತ್ತೊಬ್ಬರಲ್ಲಿ 81 ಶೇಕಡಾ, ಇನ್ನೊಬ್ಬರಲ್ಲಿ 82 ಶೇಕಡಾ, ಹೀಗೆ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಆದರೆ 100% (ನೂರಕ್ಕೆ ನೂರು) ಬುದ್ಧಿ ಯಾರಲ್ಲಿಯೂ ಇಲ್ಲ. ಯಾರಿಗೆ 100% ಬುದ್ಧಿ ಇರುವುದೋ ಅವರನ್ನು 'ಬುದ್ಧ ಭಗವಾನ್' ಎಂದು ಕರೆಯುತ್ತಾರೆ. ಬುದ್ಧ ಭಗವಾನರಿಗೆ ಬುದ್ದಿಯು 100% ಇತ್ತು. ಆದರೆ, ಅದು ಪ್ರಕಾಶದಲ್ಲಿ ಬರಲಿಲ್ಲ. ಅವರ ಅಹಂಕಾರವು ಏನಾಗಿತ್ತು? ದಯೆ, ದಯೆ, ದಯೆ...., ಅವರಿಗೆ ಎಲ್ಲರ ದುಃಖವನ್ನು ನೋಡಿ ದಯೆ ಮೂಡುತ್ತಿತ್ತು. ಅವರಿಗೆ ಏನು ಅನ್ನಿಸುತ್ತಿತ್ತೋ, ಅದೆಲ್ಲವೂ ಅವರ ಅಹಂಕಾರವಾಗಿತ್ತು. ಹಾಗಾಗಿ ಅವರಿಗೆ ಜ್ಞಾನದಲ್ಲಿ ಮುಂದೆ ಹೋಗಲು ಆಗಲಿಲ್ಲ. ಅಂತಹ ಅಹಂಕಾರವು ಒಳ್ಳೆಯದ್ದೇ ಆಗಿದೆ, ಆದರೆ ಅಹಂಕಾರವು ಅಡ್ಡವಾಗಿರುವವರೆಗೂ ಮುಂದೆ ಹೋಗಲು ಹೇಗೆ ತಾನೇ ಸಾಧ್ಯ? ಅದೊಂದು ಬಿಟ್ಟರೆ ಬುದ್ಧರು 'ಭಗವಾನ್' ಅಗಿದ್ದರು. ಆದರೆ ಒಂದೇ ಒಂದು ಹೆಜ್ಜೆ (Step) ಮುಂದೆ ಹೋಗಿದಿದ್ದರೆ ಆಗ ಪೂರ್ಣ ಭಗವಾನ್' ಆಗಿಬಿಡುತ್ತಿದ್ದರು. ಹೇಗೆ 'ಮಹಾವೀರ್ ಭಗವಾನ್' ಆದರೋ, ಹಾಗೆ ಪೂರ್ಣ 'ಭಗವಾನ್' ಆಗಿಬಿಡುತ್ತಿದ್ದರು.
ಬುದ್ಧಿ ಇರುವಲ್ಲಿ ಮೋಕ್ಷವು ಎಂದೂ ಇಲ್ಲ, ಹಾಗೂ ಎಂದಿಗೂ ದೊರಕುವುದೂ ಇಲ್ಲ. ಇಪ್ಪತ್ತನಾಲ್ಕು ತೀರ್ಥಂಕರರಿಗೆ ಬುದ್ಧಿ ಸಂಪೂರ್ಣ ಇರಲಿಲ್ಲ.
ಪ್ರಶ್ನಕರ್ತ: ಆದರೆ ಅವರಿಗೆ ಅನಂತಜ್ಞಾನವಿದೆ ಎಂದು ಹೇಳಲಾಗುತ್ತದೆಯಲ್ಲ?
ದಾದಾಶ್ರೀ: ನಿಜ, ಅವರಿಗೆ ಅನಂತಜ್ಞಾನ ಸರ್ವಥಾ ಇದೆ. ಆದರೆ ಅವರಲ್ಲಿ ಬುದ್ದಿ ಇಲ್ಲ. ಬುದ್ದಿಯು ಲೋಕದಲ್ಲಿ ಎಲ್ಲರ ಬಳಿ ಇದೆ. ಬಡ ಜನರಲ್ಲಿಯೂ ಕೂಡ ಬುದ್ದಿ ಇರುತ್ತದೆ.
ಪ್ರಶ್ನಕರ್ತ: ಹಾಗಿದ್ದರೆ ಬುದ್ಧಿ ಹಾಗು ಜ್ಞಾನದಲ್ಲಿನ ವ್ಯತ್ಯಾಸವೇನು?