________________
ಅಂತಃಕರಣದ ಸ್ವರೂಪ ಬೇಡವಾಗಿದೆ. ಯಾರ ಬಳಿಯಲ್ಲಿ ನೇರವಾದ ಪ್ರಕಾಶವಿಲ್ಲವೋ, ಅಂಥವರಿಗೆ ಪರೋಕ್ಷವಾದ ಪ್ರಕಾಶವು ಬೇಕಾಗುತ್ತದೆ. ಅದಕ್ಕಾಗಿ ಅವರು ಮೇಣದಬತ್ತಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ನೇರವಾಗಿ ಪ್ರಕಾಶವು ಸಿಗುವಾಗ ಮೇಣದಬತ್ತಿಯ (ಬುದ್ದಿಯ) ಅವಶ್ಯಕತೆ ಏನಿದೆ? ಆತ್ಮ ಪ್ರಾಪ್ತಿಯಾದ ಬಳಿಕ ಬುದ್ದಿಯು ಯಾಕೆ ಬೇಕು? ಇಡೀ ಜಗತ್ತಿನ ಜನರ ಬಳಿ ಮೇಣದಬತ್ತಿ ಇದೆ, ನಮ್ಮ ಬಳಿ ಮೇಣದಬತ್ತಿ ಇಲ್ಲ ಅರ್ಥಾತ್ ನಮ್ಮ ಹತ್ತಿರ ಬುದ್ದಿ ಇಲ್ಲ.
ಯಾವುದು ಪರೋಕ್ಷವಾದ ಪ್ರಕಾಶವಾಗಿದೆ ಎನ್ನುವುದನ್ನು ನಿಮಗೊಂದು ಉದಾಹರಣೆಯಿಂದ ತಿಳಿಸಿಕೊಡುತ್ತೇನೆ, ಈ ಸೂರ್ಯನಾರಾಯಣನ ಪ್ರಕಾಶವು ಕನ್ನಡಿಯ ಮೇಲೆ ನೇರವಾಗಿ ಬಿದ್ದು, ನಂತರ ಆ ಕನ್ನಡಿಯಿಂದ ಪ್ರಕಾಶವು ನಿಮ್ಮ ಅಡಿಗೆ ಮನೆಯೊಳಗೆ ಬರುತ್ತದೆ. ಅಡಿಗೆ ಮನೆಗೆ ಕನ್ನಡಿಯಿಂದ ಬರುವ ಪ್ರಕಾಶವನ್ನು ಪರೋಕ್ಷವಾದ ಪ್ರಕಾಶವೆಂದು ಹೇಳಲಾಗುತ್ತದೆ. ಹೀಗೆ ಎಲ್ಲರಲ್ಲಿ 'ಬುದ್ದಿ' ಪರೋಕ್ಷವಾದ ಪ್ರಕಾಶವಾಗಿದೆ ಹಾಗೂ 'ಜ್ಞಾನ' ಸೂರ್ಯನಿಂದ ಕನ್ನಡಿಯ ಮೇಲೆ ಬೀಳುವಂತಹ ನೇರವಾದ ಪ್ರಕಾಶವಾಗಿದೆ
ಸೂರ್ಯನ ಪ್ರಕಾಶವು ಕನ್ನಡಿಯ ಮಾಧ್ಯಮದ ಮೂಲಕ (medium through) ಹೊರಗೆ ಬೀಳುತ್ತದೆ. ಇಲ್ಲಿ ಮಾಧ್ಯಮವು ಕನ್ನಡಿಯಾಗಿದೆ. ಹಾಗೆಯೇ ಆತ್ಮ ಪ್ರಕಾಶವು ಅಹಂಕಾರದ ಮಾಧ್ಯಮದ ಮೂಲಕ ಹೊರಬೀಳುತ್ತದೆ, ಅದುವೇ ಬುದ್ದಿ' ಆಗಿದೆ. ಅಹಂಕಾರ ಹೇಗಿರುತ್ತದೋ, ಅದರಂತೆ ಬುದ್ದಿ ಇರುತ್ತದೆ.
ಪ್ರಶ್ನಕರ್ತ: 'ನಾನು' ಎಂದು ಕರೆದುಕೊಳ್ಳುವ, ಆ 'ನಾನು' ಎನ್ನುವುದನ್ನು ಅಹಂಕಾರ ಎಂದು ಹೇಳುತ್ತಾರೆ ಅಲ್ಲವೇ?
ದಾದಾಶ್ರೀ: ಹೌದು, ಆ 'ನಾನು' ಎಂಬ ಅಹಂಕಾರ ಇರುವಲ್ಲಿ 'ಬುದ್ದಿ' ಇದೆ. ಹಾಗೂ 'ನಾನು' ಎಂಬ ಅಹಂಕಾರ ಇಲ್ಲವಾದಾಗ ಅಲ್ಲಿ ಜ್ಞಾನವಿದೆ, ನೇರ ಪ್ರಕಾಶವಿದೆ. ನಮ್ಮಲ್ಲಿ (ಜ್ಞಾನಿಗಳಲ್ಲಿ) ಬುದ್ದಿ ಇಲ್ಲ ಹಾಗು 'ನಾನು' ಎಂಬ ಅಹಂಕಾರವೂ ಇಲ್ಲ. ನಮ್ಮೊಳಗೆ ಯಾವ ಪ್ರಕಾರದ ಅಹಂಕಾರವೂ ಇಲ್ಲ. ದೊಡ್ಡ ದೊಡ್ಡ ಮಹಾತ್ಮರಿಗೆಲ್ಲಾ 'ನಾನು, ನಾನು, ನಾನು' ಎನ್ನುವುದು ಇರುತ್ತದೆ.
ಪ್ರಶ್ನಕರ್ತ: ಹಾಗಿದ್ದರೆ ಅವರು ಹೇಗೆ ದೊಡ್ಡವರಾಗುತ್ತಾರೆ? ಯಾರಿಗೆ ನಾನು, ನಾನು, ನಾನು' ಎನ್ನುವುದು ಇರುತ್ತದೆಯೋ, ಅವರು ದೊಡ್ಡವರೆಂದು ಹೇಗೆ ಎನ್ನಿಸಿಕೊಳ್ಳುತ್ತಾರೆ?
ದಾದಾಶ್ರೀ: ಅದು, ಅವರು ತಿಳಿದುಕೊಂಡಿದ್ದಾರೆ 'ನಾನು ದೊಡ್ಡವನು' ಎಂದು. ಅವರಲ್ಲಿ