Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 32
________________ 24 ಅಂತಃಕರಣದ ಸ್ವರೂಪ ದಾದಾಶ್ರೀ: ಹೆಚ್ಚಿನ ವ್ಯತ್ಯಾಸವಿದೆ. ಕತ್ತಲು ಹಾಗೂ ಬೆಳಕಿನ ನಡುವೆ ಹೇಗೆ ಇದೆಯೋ, ಹಾಗೆ ಬಹಳ ವ್ಯತ್ಯಾಸವಿದೆ. ಈ ಸಂಸಾರದಲ್ಲಿ ಬುದ್ದಿಯಿಂದಾಗಿಯೇ ಅಲೆದಾಡುತ್ತಿರುವುದು. ಬುದ್ದಿಯಿಂದಾಗಿಯೇ ಭಗವಂತನ ಮಿಲನವಾಗುವುದಿಲ್ಲ ಹಾಗೂ ಬುದ್ಧಿಯು ಮೋಕ್ಷಕ್ಕೆ ಹೋಗಲು ಸಹ ಬಿಡುವುದಿಲ್ಲ. ಬುದ್ಧಿಯು, ಮೋಕ್ಷಕ್ಕೆ ಹೋಗದಂತೆ ಹಿಡಿದಿಟ್ಟುಕೊಳ್ಳುತ್ತದೆ (Protection). ಲಾಭ-ನಷ್ಟ (Profit-Loss), ಇದೆಲ್ಲಾ ಬುದ್ದಿಯೇ ತಿಳಿಸಿಕೊಡುವುದಾಗಿದೆ ಹಾಗೂ ಮತ್ತೇನು ಮಾಡುತ್ತದೆ? ಪ್ರಶ್ಯಕರ್ತ: ವ್ಯವಹಾರದಲ್ಲಿ ಸಿಲುಕಿಸಿ ಬಿಡುತ್ತದೆ. ದಾದಾಶ್ರೀ: ಹೌದು, ವ್ಯವಹಾರದಲ್ಲಿಯೇ ಸಿಕ್ಕಿಹಾಕಿಕೊಳ್ಳುವಂತೆ ಮಾಡಿ, ಅದರಿಂದ ಹೊರಗೆ ಬರುವುದಕ್ಕೂ ಬಿಡುವುದಿಲ್ಲ ಹಾಗೂ ಎಂದೂ ಮೋಕ್ಷಕ್ಕೆ ಹೋಗಲು ಬಿಡುವುದಿಲ್ಲ. ಬುದ್ದಿಯು ಖಾಲಿಯಾಗಿ ಹೋದಮೇಲೆಯೇ, ಮೋಕ್ಷ ಪ್ರಾಪ್ತಿಯಾಗುವುದು. ನಮ್ಮಲ್ಲಿ ಬುದ್ಧಿ ಎಂಬುದು ಇಲ್ಲ. ಚಿಕ್ಕ ಮಕ್ಕಳಿಗೂ ಕೂಡ ಬುದ್ದಿಯು ಇರುತ್ತದೆ. ಎಲ್ಲಾ ಮನುಷ್ಯರಿಗೂ ಬುದ್ದಿಯಿದೆ. ಜಗತ್ತಿನಲ್ಲಿ ನಾವು ಒಬ್ಬರೇ ಬುದ್ದಿ ಇಲ್ಲದೆ ಇರುವಂತಹ ವ್ಯಕ್ತಿ. ಈ ಜಗತ್ತಿನಲ್ಲಿನ ವಿಜ್ಞಾನಿಗಳಿಗೆ ಎಲ್ಲಾ ಪ್ರಕಾರದ ಜ್ಞಾನವಿದೆ. ಆದರೆ ಅದೆಲ್ಲವೂ ಬುದ್ದಿಯಿಂದಾಗಿದೆ, ಯಾಕೆಂದರೆ ಆ ಜ್ಞಾನವು ಅಹಂಕಾರದಿಂದ ಕೂಡಿದೆ ಹಾಗು ಅಹಂಕಾರದ ಮಾಧ್ಯಮದಿಂದ ಉಂಟಾಗಿರುವ ಜ್ಞಾನವಾಗಿದೆ. ಆತ್ಮದ ಜ್ಞಾನವು ಪ್ರಕಾಶವಾಗಿದೆ, ಅದು ನೇರವಾಗಿ ಬರುವಂತಹ ಜ್ಞಾನವಾಗಿದೆ. ಎಲ್ಲಿ ಅಹಂಕಾರವು ಇಲ್ಲವೋ, ಅಲ್ಲಿ Direct ಜ್ಞಾನವಿದೆ. ಈ ಇಡೀ ಜಗತ್ತಿನ ಎಲ್ಲಾ ವಿಷಯಗಳನ್ನು (subject) ತಿಳಿಯಬಹುದಾಗಿದೆ, ಆದರೆ ಅದೆಲ್ಲವೂ ಅಹಂಕಾರಿ ಜ್ಞಾನವಾಗಿದ್ದರೆ, ಅಲ್ಲಿ ಬುದ್ದಿ ಇರುತ್ತದೆ. ಹಾಗು ಯಾವುದು ನಿರಹಂಕಾರಿ ಜ್ಞಾನವಿದೆಯೋ, ಅಲ್ಲಿ ಜ್ಞಾನವಿದೆ. ಈ ಜಗತ್ತು ಅಂದರೇನು? ಅದನ್ನು ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ. ಅದೇನೆಂದರೆ, ಒಂದು ಶುದ್ಧಾತ್ಮ ಹಾಗು ಮತ್ತೊಂದು ಸಂಯೋಗ, ಕೇವಲ ಇವೆರಡೇ ವಸ್ತುಗಳಿರುವುದು ಈ ಜಗತ್ತಿನಲ್ಲಿ. ಸಂಯೋಗದಲ್ಲಿ ಬಹಳಷ್ಟು ವಿಭಜನೆಗಳಿವೆ. ಸ್ಫೂಲ ಸಂಯೋಗ, ಸೂಕ್ಷ್ಮ ಸಂಯೋಗ ಹಾಗೂ ವಾಣಿಯ ಸಂಯೋಗಗಳಿವೆ. ನೀವು ಏಕಾಂತದಲ್ಲಿ ಕುಳಿತಿರುವಾಗ ಮನಸ್ಸು ಏನನ್ನಾದರು ಹೇಳಿದರೆ, ಅದು ನಿಮ್ಮ ಸೂಕ್ಷ್ಮ ಸಂಯೋಗವಾಗಿದೆ. ಯಾರಾದರು ವ್ಯಕ್ತಿ ನಿಮಗೆ ಹೇಳಲು ಬಂದರೆ, ಅದು ಸ್ಫೂಲ ಸಂಯೋಗವಾಗಿದೆ. ನೀವು ಏನಾದರೂ ಹೇಳಿಬಿಟ್ಟರೆ, ಅದು ವಾಣಿಯ ಸಂಯೋಗವಾಗಿದೆ. ಯಾವ ಸಂಯೋಗ ಉಂಟಾಗಿದೆಯೋ, ಅದು ವಿಯೋಗಿ.

Loading...

Page Navigation
1 ... 30 31 32 33 34 35 36 37 38 39 40 41 42 43 44 45 46 47 48 49 50 51 52 53 54