Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 18
________________ 10 ಅಂತಃಕರಣದ ಸ್ವರೂಪ | ಬದಲಾಗುತ್ತವೆ. ಇದರಿಂದ ಅವರ ಜೀವನ (Life) ಬದಲಾಗುತ್ತದೆ. ಆದರೆ, ಯಾರಿಗೆ ಸತ್ಸಂಗದ ಅವಕಾಶ ಸಿಗುವುದಿಲ್ಲವೋ ಅಂಥವರು ಏನು ಮಾಡುವುದು? ಅಂಥವರಿಗೂ ನಾನು ಇನ್ನೊಂದು ದಾರಿ ತೋರಿಸಿ ಕೊಡುತ್ತೇನೆ. ಅದೇನೆಂದರೆ, 'ನಿಮ್ಮ ಅಭಿಪ್ರಾಯವನ್ನು ಬದಲಿಸಬೇಕು, ಕುಸ್ಸಂಗದಲ್ಲಿ ಕುಳಿತ್ತಿದ್ದರೂ ಸಹ ಅಭಿಪ್ರಾಯವನ್ನು ಬದಲಿಸಬೇಕು.' ಯಾವುದೇ ವಿಚಾರ ಮಾಡಬೇಕಿದ್ದರೂ ಆ ಸಮಯದಲ್ಲಿ ಮನಸ್ಸು ಇರುತ್ತದೆ. ಬೇರೆ ಸಮಯದಲ್ಲಿ ಮನಸ್ಸು ಇರುವುದಿಲ್ಲ. ಯಾವಾಗ ಜಿಲೇಬಿ ತಿನ್ನಬೇಕೆಂಬ ವಿಚಾರವು ಬರುವುದೋ, ಆಗ ಆ ವಿಚಾರವು ಅಹಂಕಾರಕ್ಕೆ ಇಷ್ಟವಾಗುವುದಲ್ಲದೆ, 'ಹೌದು, ಬಹಳ ಒಳ್ಳೆಯ ವಿಚಾರ, ಜಿಲೇಬಿಯನ್ನು ತರಿಸೋಣ' ಎಂಬ ಅಭಿಪ್ರಾಯಕ್ಕೆ ಬರುತ್ತದೆ. ಇದರಲ್ಲಿ ಮನಸ್ಸು ಎನ್ನನ್ನೂ ಮಾಡುವುದಿಲ್ಲ. ಈ ಅಹಂಕಾರ ಇದೆಯಲ್ಲ, ಅದು ಬೀಜ ಹಾಕುತ್ತದೆ. ಏನು ಮಾಡುತ್ತದೆ? ಪ್ರಶ್ನಕರ್ತ: ಸಂಕಲ್ಪದ ಬೀಜ ಹಾಕುತ್ತದೆ. ದಾದಾಶ್ರೀ: ಹೌದು, ಹಾಗೂ ವಿಕಲ್ಪವನ್ನು ಹೇಗೆ ಮಾಡುತ್ತದೆ? ಉದಾಹರಣೆಗೆ: ಯಾರಾದರು ಈ ಅಂಗಡಿ ನಿಮ್ಮದೆ? ಎಂದು ಕೇಳಿದರೆ, ಆಗ ಏನು ಹೇಳುತ್ತಾನೆ, ಹೌದು, ನಾನೇ ಇದರ ಮಾಲೀಕ ಎಂದು ಹೇಳುತ್ತಾನೆ. ಇದನ್ನೇ ವಿಕಲ್ಪವೆನ್ನುವುದು. ಅರ್ಥವಾಯಿತಲ್ಲವೇ? ಯಾವಾಗ ಯೋನಿಯಲ್ಲಿ ಬೀಜ ಹಾಕಲಾಗುತ್ತದೆ, ಆಗ ಅದನ್ನು ಸಂಕಲ್ಪ-ವಿಕಲ್ಪಗಳೆಂದು ಕರೆಯಲಾಗುತ್ತದೆ. ಮನಸ್ಸಿನಲ್ಲಿ ಸಂಕಲ್ಪ-ವಿಕಲ್ಪಗಳಿರುವುದಿಲ್ಲ. ಪ್ರಶ್ಯಕರ್ತ: ಹಾಗಾದರೆ ವಿಚಾರ ಹಾಗು ಅಭಿಪ್ರಾಯವು ಒಂದೇ ವಸ್ತುವೇ? ದಾದಾಶ್ರೀ: ಅಲ್ಲ, ಎರಡು ಬೇರೆ ಬೇರೆಯಾಗಿದೆ. ಅಭಿಪ್ರಾಯವು ಕಾರಣವಾಗಿದೆ (Cause) ಹಾಗೂ ವಿಚಾರವು ಪರಿಣಾಮವಾಗಿದೆ (effect). ಯಾರಿಗಾದರು, 'ಏನಿಷ್ಟು ಕಪ್ಪಗಿದ್ದೀಯ?' ಎಂದು ಕೇಳಿದರೆ, ಆಗ ಅವನು, 'ನಾನಂತೂ ಬೆಳ್ಳಗೆಯೇ ಇದ್ದೇನೆ', ಎಂದು ಹೇಳುತ್ತಾನೆ. ಇದನ್ನು ವಿಕಲ್ಪವೆಂದು ಕರೆಯಲಾಗುತ್ತದೆ. ಅರ್ಥವಾಗುತ್ತಿದೆಯೇ ನಿಮಗೆ? (ಸುಲಭವಾಗಿ ತಿಳಿಯಬೇಕಿದ್ದರೆ, 'ವಿಕಲ್ಪ' ಎಂದರೆ, 'ನಾನು' ಮತ್ತು 'ಸಂಕಲ್ಪ' ಎಂದರೆ, 'ನನ್ನದು) ಪ್ರಶ್ನಕರ್ತ: ಮನಸ್ಸಿನಲ್ಲಿ ಸಂಕಲ್ಪ-ವಿಕಲ್ಪಗಳು ಇಲ್ಲವೇ?

Loading...

Page Navigation
1 ... 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54