Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 23
________________ 5 ಅಂತಃಕರಣದ ಸ್ವರೂಪ ಹೇಳುತ್ತೇವೆ? ಜ್ಞಾನ ಹಾಗೂ ದರ್ಶನದ ನಡುವಿನ ಅಂತರವೇನು? ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇರುಳಿನ ಸಮಯದಲ್ಲಿ ಹೂದೋಟದಲ್ಲಿ ಕುಳಿತ್ತಿದ್ದು, ಕತ್ತಲಿನಲ್ಲಿ ಸತ್ಸಂಗದ ಮಾತುಗಳನ್ನು ಆಡುತ್ತಿರುವಾಗ, ಅಲ್ಲೇ ಹತ್ತಿರದಲ್ಲಿ ಏನೋ ಶಬ್ದವು ಕೇಳಿಸಿದರೆ, ಆಗ ಅಲ್ಲಿದ್ದವರು 'ಏನೋ ಇದೆ' ಎಂದು ಹೇಳಲು ಪ್ರಾರಂಭಿಸುತ್ತಾರೆ. ನೀವು ಕೂಡಾ, 'ಏನೋ ಇದೆ' ಎಂದು ಹೇಳಲಾರಂಭಿಸುವಿರಿ. ನಾವು ಸಹ ಹೇಳುತ್ತೇವೆ 'ಏನೋ ಇದೆ' ಎಂದು. ಈ 'ಏನೋ ಇದೆ' ಎಂಬ ಜ್ಞಾನವು ಎಲ್ಲರ ಅರಿವಿಗೆ ಬರುವುದನ್ನು 'ದರ್ಶನ'ವೆಂದು ಹೇಳಲಾಗುತ್ತದೆ. ನಂತರ ಎಲ್ಲರೂ ವಿಚಾರ ಮಾಡುತ್ತಾರೆ 'ಅದು ಏನಿರಬಹುದು?' ಎಂದು ಹಾಗು ಎಲ್ಲರೂ ಶಬ್ದವು ಬರುತ್ತಿರುವ ಕಡೆಗೆ ಹೋಗಿ ನೋಡಿದರೆ ಅಲ್ಲಿ ಹಸುವೊಂದು ಓಡಾಡುತ್ತಿರುತ್ತದೆ. ನಾವು ನೋಡಿ, 'ಅದು ಹಸು' ಎಂದು ಹೇಳುತ್ತೇವೆ. ನೀವು ಕೂಡ ಹೇಳುತ್ತೀರ 'ಅದು ಹಸು' ಎಂದು. ಇಲ್ಲಿ ಇದನ್ನು 'ಜ್ಞಾನ'ವೆಂದು ಹೇಳಲಾಗುತ್ತದೆ. ಖಚಿತವಲ್ಲದ (Undecided) ಜ್ಞಾನವನ್ನು, 'ದರ್ಶನ'ವೆಂದು ಹೇಳಲಾಗುತ್ತದೆ ಹಾಗೂ ಖಚಿತವಾಗಿರುವ (Decided) ಜ್ಞಾನವನ್ನು, 'ಜ್ಞಾನ'ವೆಂದು ಹೇಳಲಾಗುತ್ತದೆ. ನಿಮಗೆ ಈಗ ಸಂಪೂರ್ಣವಾಗಿ ಅರ್ಥವಾಯಿತಲ್ಲವೇ? ಜ್ಞಾನ-ದರ್ಶನ ಇವೆರಡೂ ಒಟ್ಟಿಗೆ ಸೇರಿದಾಗ, ಅದನ್ನು 'ಚಿತ್ತ' ಎನ್ನಲಾಗುತ್ತದೆ. ಜ್ಞಾನ-ದರ್ಶನವು ಅಶುದ್ಧವಾಗಿರುವವರೆಗೆ ಚಿತ್ತವು ಇರುತ್ತದೆ ಹಾಗೂ ಜ್ಞಾನ-ದರ್ಶನಗಳೆರಡೂ ಶುದ್ಧವಾದಾಗ, ಅಲ್ಲಿ 'ಆತ್ಮ' ಇದೆ, ಚಿತ್ತವು ಅಶುದ್ದವನ್ನು ನೋಡುತ್ತದೆ ಹಾಗೂ ತನ್ನನ್ನು ತಾನು ನೋಡುವುದಿಲ್ಲ! 'ಇವರು ನನ್ನ ಅತ್ತೆ, ಇವಳು ನನ್ನ ಸೊಸೆ, ಇವರು ನನ್ನ ಅಣ್ಣ' ಹೀಗೆಲ್ಲಾ ಅಶುದ್ದವನ್ನೇ ನೋಡುತ್ತದೆ ಹಾಗಾಗಿ ಇದನ್ನು ಅಶುದ್ಧ-ಚಿತ್ತ ಎಂದು ಹೇಳಲಾಗುತ್ತದೆ. ಚಿತ್ತವು ಶುದ್ಧಿಯಾಗಿ ಬಿಟ್ಟರೆ, ಆತ್ಮಜ್ಞಾನವಾಗಿ ಬಿಡುತ್ತದೆ. ಪ್ರಶ್ನಕರ್ತ: ಹಾಗಾದರೆ, 'ಪ್ರಜ್ಞಾ' ಎಂದು ಯಾವುದನ್ನು ಹೇಳುತ್ತಾರೆ? ದಾದಾಶ್ರೀ: 'ಚಿತ್ತ ಶುದ್ದಿಯು ಸಂಪೂರ್ಣವಾದಾಗ ಅದುವೇ 'ಆತ್ಮ ಯಾವಾಗ ಆತ್ಮ ಪ್ರಾಪ್ತಿಯಾಗುತ್ತದೆಯೋ, ಆಗ ಪ್ರಜ್ಞಾ (ಪ್ರಜ್ಞೆ) ಎನ್ನುವುದು ಪ್ರಾರಂಭವಾಗುತ್ತದೆ, ಅದು ತನ್ನಷ್ಟಕ್ಕೆ (Automatically)! 'ಆಜ್ಞಾ' ಎನ್ನುವುದೊಂದಿದೆ ಹಾಗೂ ಮತ್ತೊಂದು 'ಪ್ರಜ್ಞಾ' ಎನ್ನುವುದಿದೆ. ಆಜ್ಞಾ ಇರುವವರೆಗೆ, ಅದು ಸಂಸಾರದಿಂದ ಹೊರಬರಲು ಬಿಡುವುದಿಲ್ಲ. ಆಜ್ಞಾ ನಿರಂತರವಾಗಿ ಸಂಸಾರದ ಕಡೆಗೆಯೇ ನಿರ್ದೇಶಿಸುತಲಿರುತ್ತದೆ ಹಾಗೂ ಅದೆಂದೂ ಸಂಸಾರದಿಂದ ಹೊರಬರಲು ಬಿಡುವುದಿಲ್ಲ. ಬುದ್ದಿ ಇರುವವರೆಗೆ, ಆಜ್ಞಾ ಇರುತ್ತದೆ. ಬುದ್ದಿಯಿಂದ ಬಹಳಷ್ಟು

Loading...

Page Navigation
1 ... 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54