________________
ಅಂತಃಕರಣದ ಸ್ವರೂಪ | ವಿಚಾರಗಳನ್ನು ತಿಳಿಯಬಹುದಾಗಿದೆ. ಆದರೆ, ಅದರಲ್ಲಿ ಶುದ್ಧತೆಯು (Pure) ಕಾಣಸಿಗುವುದಿಲ್ಲ. ಏಕೆಂದರೆ, 'ಬುದ್ಧಿಯ' ಪ್ರಕಾಶವು ಪರೋಕ್ಷವಾಗಿದೆ (Indirect) ಹಾಗೂ 'ಜ್ಞಾನವು' ನೇರ ಪ್ರಕಾಶವಾಗಿದೆ (Direct).
ಈ ಜ್ಞಾನವನ್ನು ಪಡೆದ ನಂತರ ಪ್ರಜ್ಞಾ ಮೂಡುವುದು ಹಾಗೂ ಈ ಪ್ರಜ್ಞಾ ಎನ್ನುವುದು, ಮೋಕ್ಷವನ್ನು ಅನುಸರಿಸಿಕೊಂಡು ಹೋಗುವುದಾಗಿದೆ. ನಾವು ಒಂದು ವೇಳೆ ಬೇಡವೆಂದು ಹೇಳಿದರೂ, ಹೇಗಾದರೂ ಮಾಡಿ ಮೋಕ್ಷಕ್ಕೆ ಕರೆದುಕೊಂಡು ಹೋಗದೆ ಬಿಡುವುದಿಲ್ಲ.
- ಇಲ್ಲಿ ಕುಳಿತುಕೊಂಡಿರುವಾಗ ಕೂಡ ನಿಮ್ಮ ಚಿತ್ತವು ಮನೆಗೆ ಹೋಗುತ್ತದೆ. ಆದರೆ ಮನಸ್ಸು ಮನೆಗೆ ಹೋಗುವುದಿಲ್ಲ. ಜನರು ಏನು ಹೇಳುತ್ತಾರೆ, ನಮ್ಮ ಮನಸ್ಸು ಮನೆಯಲ್ಲೇ ಇರುತ್ತದೆ, ಎಲ್ಲೆಲ್ಲೋ ಹೋಗುತ್ತದೆ ಎಂದು. ನಿಜವಾಗಿ ಅವರ ಮಾತು ಸರಿಯಲ್ಲ. ಮನಸ್ಸು ಈ ಶರೀರದಿಂದ ಎಂದೂ ಹೊರಗೆ ಹೋಗುವುದೇ ಇಲ್ಲ. ಚಿತ್ತವು ಹೊರಗೆ ಹೋಗುವುದಾಗಿದೆ. ಮನೆಯಲ್ಲಿ ಹುಡುಗ ಓದಲು ಕುಳಿತಿರುತ್ತಾನೆ, ಅವನಿಗೆ ಪೋಷಕರು ಏನು ಹೇಳುತ್ತಾರೆ? ನಿನ್ನ ಚಿತ್ತವು ಓದುವುದರ ಮೇಲೆ ಇಲ್ಲ, ನಿನ್ನ ಚಿತ್ತವು ಯಾವಾಗಲೂ ಆಟದ ಕಡೆಯೇ ಇರುತ್ತದೆ ಎಂದು. ಮನಸ್ಸಿಗೆ ಹಾಗೆಲ್ಲ ನೋಡಲು ಸಾಧ್ಯವಿಲ್ಲ. ಮನಸ್ಸು ಕಣ್ಣಿಲ್ಲದ ಕುರುಡನಂತೆ. ಸಿನಿಮಾ ನೋಡಿಕೊಂಡು ಬಂದ ಮೇಲೂ ಕೂಡಾ, ಚಿತ್ತವು ಆ ದೃಶ್ಯಗಳನ್ನು ವೀಕ್ಷಿಸಬಹುದು. ಚಿತ್ತವು ಯಾವಾಗಲೂ ಹೊರಗೆ ಅಲೆದಾಡುತ್ತಲೇ ಇರುತ್ತದೆ ಹಾಗೂ ಎಲ್ಲಿ ಸುಖವು ದೊರಕಬಹುದೆಂದು ಹುಡುಕುತ್ತಲೇ ಇರುತ್ತದೆ. ಎಲ್ಲರಿಗೂ ಎರಡು ವಸ್ತುಗಳು ತೊಂದರೆ ಕೊಡುತ್ತವೆ, ಒಂದು ಮನಸ್ಸು ಮತ್ತೊಂದು ಚಿತ್ತ.
ಮನಸ್ಸು, ಈ ಶರೀರದಿಂದ ಹೊರಗೆಹೋಗಲು ಸಾಧ್ಯವಿಲ್ಲ. ಮನಸ್ಸು ಏನಾದರೂ ಈ ಶರೀರದಿಂದ ಹೊರಗೆ ಹೋದರೆ, ಮತ್ತೆ ಜನರು ಅದನ್ನು ಒಳನುಗ್ಗಲು ಬಿಡುವುದಿಲ್ಲ. ಆದರೆ, ಅದು ಹೊರಗೆ ಬರುವುದೇ ಇಲ್ಲ. ಮನಸ್ಸು ವಿಚಾರಗಳ ಭೂಮಿಕೆಯಾಗಿದೆ. ಅದು ವಿಚಾರ ಮಾಡುವುದನ್ನು ಬಿಟ್ಟು ಬೇರೇನೂ ಕೆಲಸ ಮಾಡುವುದಿಲ್ಲ. ಕೇವಲ ವಿಚಾರ ಮಾಡುತ್ತಲೇ ಇರುತ್ತದೆ. ಎಲ್ಲಾ ಕಡೆಯು ಅಲೆಯುವುದು, ಹೊರಗೆ ತಿರುಗಾಡುವುದು, ಅದೆಲ್ಲಾ ಈ ಚಿತ್ರವು ಮಾಡುತ್ತದೆ. ಈಗಿಲ್ಲಿ ಕುಳಿತುಕೊಂಡಿರುವಾಗಲೇ ಚಿತ್ತವು ಇಲ್ಲಿಂದ ಮನೆಗೆ ಹೋಗಿ ಮೇಜು, ಕುರ್ಚಿ, ಕಪಾಟು ಎಲ್ಲವನ್ನು ನೋಡುತ್ತದೆ. ಹಾಗೆ ಮನೆಯಲ್ಲಿ ಇರುವ ಮಗ, ಮಗಳು, ಹೆಂಡತಿ ಎಲ್ಲರನ್ನೂ ನೋಡುತ್ತದೆ. ಪೇಟೆಯಲ್ಲಿ ಏನಾದರು ನೋಡಿದ್ದನ್ನು ಕೊಂಡುಕೊಳ್ಳಬೇಕೆಂಬ