Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 26
________________ ಅಂತಃಕರಣದ ಸ್ವರೂಪ 18 ಎಂದರೆ ಶಾಶ್ವತ (Permanent! ಚಿತ್ತ ಎಂದರೆ ಜ್ಞಾನ-ದರ್ಶನವಾಗಿದೆ. ಜ್ಞಾನ-ದರ್ಶನವು ಒಂದುಗೂಡಿದರೆ, ಚಿತ್ತವೆಂದು ಹೇಳಲಾಗುತ್ತದೆ. ಶಾಶ್ವತವಾದ (Permanent) ಜ್ಞಾನ-ದರ್ಶನದಿಂದ ಉಂಟಾಗುವುದರ ಫಲವೇನು? ಅದುವೇ, ಆನಂದ! ಶಾಶ್ವತವಾದ ಜ್ಞಾನ-ದರ್ಶನವನ್ನು ಏನೆಂದು ಹೇಳುತ್ತಾರೆ? ಅದುವೇ, 'ಕೇವಲಜ್ಞಾನ-ದರ್ಶನ (Absolute)!' ಬುದ್ದಿಯ ವಿಜ್ಞಾನ ದಾದಾಶ್ರೀ: ನಿಮಗೆ, ಬುದ್ಧಿ ಅನ್ನುವುದು ಇದೆಯೇ? ಪ್ರಶ್ಯಕರ್ತ: ಬಹಳ ಕಡಿಮೆ ಇದೆ. ದಾದಾಶ್ರೀ: ಹೆಚ್ಚಿನ ಬುದ್ದಿಯು ಇಲ್ಲವಾದರೆ, ನಿಮಗೆ ಹೇಗೆ ಕೆಲಸ ಮಾಡಲಾಗುತ್ತದೆ? ಬುದ್ದಿಯು ಇಲ್ಲವಾದರೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ಬುದ್ದಿಯ ಪ್ರಕಾಶದಿಂದ, ಈ ಸಂಸಾರವನ್ನು ನಡೆಸುವುದಾಗಿದೆ. ಸಂಸಾರದಲ್ಲಿ ಇದು ನಿರ್ಣಯ (Decision) ತೆಗೆದುಕೊಳ್ಳುವುದಕ್ಕಾಗಿಯೇ ಇರುವುದಾಗಿದೆ. ಬುದ್ದಿಯು ಇದ್ದರೆ ಮಾತ್ರ ನಿರ್ಣಯ (Decision) ತೆಗೆದುಕೊಳ್ಳಲಾಗುತ್ತದೆ. ನೀವು ಹೇಗೆ ನಿರ್ಣಯವನ್ನು ತೆಗೆದುಕೊಳ್ಳುತ್ತೀರಾ? ಪ್ರಶ್ನಕರ್ತ: ಎಷ್ಟೋ ಅಲ್ಪ ಸ್ವಲ್ಪ ಬುದ್ದಿಯಿಂದ ಕೆಲಸವಾಗುತ್ತಿದೆ, ಅದರಿಂದಲೇ ನಡೆಸಿಕೊಂಡು ಹೋಗುತ್ತಿದ್ದೇನೆ. ದಾದಾಶ್ರೀ: ನಿಮಗಿಂತ ಹೆಚ್ಚಿನ ಬುದ್ದಿಶಾಲಿಗಳು ಯಾರಾದರೂ ಇದ್ದಾರೆಯೇ? ಪ್ರಶ್ಯಕರ್ತ: ಪ್ರಪಂಚದಲ್ಲಿ ಬಹಳ ಮಂದಿ ಇರಬಹುದು. ಅವರು ಯಾರೆಂಬುದು, ನನಗೆ ಗೊತ್ತಿಲ್ಲ. ದಾದಾಶ್ರೀ: ಸಂಪೂರ್ಣ ಬುದ್ಧಿಯೇ ಇಲ್ಲದಿರುವಂಥವರನ್ನು ಯಾರನ್ನಾದರೂ ನೋಡಿದ್ದೀರಾ? ಪ್ರಶ್ನೆಕರ್ತ: ನಾನು, ಸಂಪೂರ್ಣ ಬುದ್ಧಿಯೇ ಇಲ್ಲದಿರುವಂಥವರನ್ನು ಯಾರನ್ನೂ ನೋಡಿಲ್ಲ. ಏಕೆಂದರೆ ಎಷ್ಟೆಲ್ಲಾ ಪ್ರಾಣಿಗಳಿವೆಯೋ, ಅವುಗಳಿಗೂ ಅವುಗಳ ಶ್ರೇಣಿಗೆ (grade) ತಕ್ಕಂತೆ ಅಲ್ಪಮಟ್ಟಿಗಿನ ಬುದ್ಧಿಯು ಇದ್ದೇ ಇರುತ್ತದೆ. ದಾದಾಶ್ರೀ: ನಮ್ಮಲ್ಲಿ (ಜ್ಞಾನಿಗಳಲ್ಲಿ) ಬುದ್ದಿ ಸುತರಾಂ (ಪೂರ್ತಿಯಾಗಿ) ಇಲ್ಲವೇ ಇಲ್ಲ. ನಾವು ಅಬುದ್ದರು.

Loading...

Page Navigation
1 ... 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54