Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 20
________________ ಅಂತಃಕರಣದ ಪ್ರರೂಪ ಮನಸ್ಸಿನ ಬಗ್ಗೆ ಸಮಾಧಾನವನ್ನು (solution) ಈ ಜಗತ್ತಿನಲ್ಲಿ ಯಾರೂ ನೀಡಲಿಲ್ಲ. ಹಾಗಾಗಿ ನಾವು Solution ನೀಡಬೇಕಾಗಿದೆ. 12 ಮನಸ್ಸು ಅನ್ನುವುದು ಹೇಗಿದೆ? ಮನಸ್ಸಿನ ತಾಯಿ-ತಂದೆ ಯಾರು? ಮನಸ್ಸಿನ ಜನ್ಮ ಎಲ್ಲಿಂದ ಆಗಿದೆ? ಇಲ್ಲಿ ಮನಸ್ಸಿನ ತಾಯಿ-ತಂದೆ ಯಾರೆಂದು ಅರಿತುಕೊಳ್ಳುವುದರಿಂದ ಮನಸ್ಸು ಹೊರಟು ಹೋಗುತ್ತದೆ. ಇಬ್ಬರಲ್ಲಿ ಒಬ್ಬರು ಇಲ್ಲವಾದರೂ, ಆಗ ಮನಸ್ಸು ಇರಲು ಹೇಗೆ ಸಾಧ್ಯ? ಒಂದು ಪುಸ್ತಕವನ್ನೇ ಬರೆಯಬಹುದಾದಷ್ಟು ವಿಚಾರಗಳನ್ನು ಒಂದೇ ವಾಕ್ಯದಲ್ಲಿ ನಾನು ತಿಳಿಸಿಕೊಡುತ್ತೇವೆ. ಅದೇನೆಂದರೆ, ಅಭಿಪ್ರಾಯವೇ ಮನಸ್ಸಿನ ತಂದೆ ಹಾಗು ಭಾಷೆಯೇ (Opinion is the Father and Language is the Mother of Mind), ಮರಾಠಿ ಭಾಷೆಯಾಗಿದ್ದರೆ ಮಹಾರಾಷ್ಟ್ರದ ಮನಸ್ಸು, ಇಂಗ್ಲಿಷ್ ಭಾಷೆಯಾಗಿದ್ದರೆ ಆಂಗ್ಲ ಮನಸ್ಸು. ಸ್ವಲ್ಪವಾದರೂ ನಿಮಗೆ ತಿಳಿಯಲು ಸಾಧ್ಯವಾಗುತ್ತಿದೆಯೇ? ನಮಗೆ ಯಾರ ಬಗ್ಗೆಯು ಅಭಿಪ್ರಾಯವೇ ಇರುವುದಿಲ್ಲ. ನಾವು ಎರಡು ವಸ್ತುವನ್ನು ನೋಡುತ್ತೇವೆ. ಒಂದು 'Real' ಎನ್ನುವಲ್ಲಿ, ಸ್ವಯಂ ಭಗವಂತನೆಂದು ಹಾಗೂ ಮತ್ತೊಂದು 'Relative' ಎನ್ನುವಲ್ಲಿ, ಅವರನ್ನು ನಾವು ನಿರ್ದೋಷಿಗಳೆಂದು ಪರಿಗಣಿಸುತ್ತೇವೆ. ಹಾಗಿರುವಾಗ, ಅಭಿಪ್ರಾಯವು ಇರಲು ಹೇಗೆ ಸಾಧ್ಯ? ಅಭಿಪ್ರಾಯದವರಿಗೆ ಎಲ್ಲೆಡೆಯೂ ದೋಷಗಳೇ ಕಾಣುತ್ತವೆ. ನಿಜವಾದ ವಿಚಾರವೇನೆಂದರೆ, ಇಡೀ ಜಗತ್ತೇ ನಿರ್ದೋಷವಾಗಿದೆ. ಕಣ್ಣಿನಿಂದ ನೋಡಿದಾಕ್ಷಣ ಅವೆಲ್ಲಾ ವಿಚಾರಗಳು ನಿಜವಾಗುವುದಿಲ್ಲ. ಇವೆಲ್ಲಾ ಭ್ರಾಂತಿಯಾಗಿದೆ. ವಾಸ್ತವದಲ್ಲಿ ಈ ಜಗತ್ತಿನಲ್ಲಿ ಯಾರೂ ದೋಷಿಗಳಿಲ್ಲ. ಆದರೆ ನೀವು ದೋಷಿಗಳೆಂದು ಪರಿಗಣಿಸುವುದರಿಂದ, ಅದು ಸ್ವತಃ ನಿಮಗೆ ಹಾನಿಮಾಡುತ್ತದೆ. ನಮ್ಮನ್ನು ಯಾರೇ ನಿಂದಿಸಲು ಬಂದರೂ ಸಹ ನಾವು ಅವರನ್ನು ದೋಷಿಗಳೆಂದು ನೋಡುವುದಿಲ್ಲ. ಪ್ರಶ್ನಕರ್ತ: ಅಂತಹ ದೃಷ್ಟಿ ಮೂಡಿದರೆ ಸಾಕು. ಆಗ ಈ ಜಗತ್ತಿನ ಯಾವ ಬಂಧನವೂ ಇರುವುದಿಲ್ಲ ಅಲ್ಲವೇ? ದಾದಾಶ್ರೀ: ಅರೇ, ಆಮೇಲೆ ಅಲ್ಲಿ ಮನಸ್ಸೇ ಇರುವುದಿಲ್ಲ. ಭಾಷೆಯು ಯಾವಾಗಲು ಅಭಿಪ್ರಾಯದ ಜೊತೆಯಲ್ಲಿಯೇ ಇರುತ್ತದೆ. ಯಾವಾಗ

Loading...

Page Navigation
1 ... 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54