Book Title: Antahskaran Ka Swroop Kannada Author(s): Dada Bhagwan Publisher: Dada Bhagwan Aradhana Trust View full book textPage 7
________________ ಸಂಪಾದಕೀಯ ಜ್ಞಾನಿಪುರುಷರು ಮಾತ್ರ ತಮ್ಮ ಅಂತಃಕರಣದಿಂದ ಸಂಪೂರ್ಣ ಬೇರ್ಪಟ್ಟು, ಕೇವಲ ಜ್ಞಾನದಲ್ಲಿದ್ದು, ಅದರ ಯಥಾರ್ಥ ವರ್ಣನೆಯನ್ನು ಮಾಡಬಲ್ಲರು. ಜ್ಞಾನಿಪುರುಷರಾದ ಪರಮ ಪೂಜ್ಯ ದಾದಾ ಭಗವಾನ್ (ದಾದಾಶಿ) ರವರು ಅಂತಃಕರಣದ ಬಗ್ಗೆ ಬಹಳ ಸುಂದರವಾದ ಸ್ಪಷ್ಟವಾದ ವರ್ಣನೆಯನ್ನು ಮಾಡಿದ್ದಾರೆ. ಅಂತಃಕರಣದಲ್ಲಿ ನಾಲ್ಕು ಭಾಗಗಳಿವೆ: ಮನಸ್ಸ,ಬುದ್ದಿ,ಚಿತ್ತ ಮತ್ತು ಅಹಂಕಾರ. ಇಲ್ಲಿ ಪ್ರತಿಯೊಂದರ ಕಾರ್ಯವೂ ಬೇರೆ ಬೇರೆಯಾಗಿದೆ. ಏಕಕಾಲದಲ್ಲಿ ಈ ನಾಲ್ಕರಲ್ಲಿ ಒಂದು ಮಾತ್ರ ಕಾರ್ಯನಿರತವಾಗಿರುತ್ತದೆ. ಮನಸ್ಸು ಎಂದರೇನು? ಮನಸ್ಸು ಗ್ರಂಥಿಗಳಿಂದ ಉಂಟಾಗಿದೆ, ಹಿಂದಿನ ಜನ್ಮದಲ್ಲಿ ಅಜ್ಞಾನದಿಂದಾಗಿ ಯಾವುದರ ಮೇಲೆಲ್ಲಾ ರಾಗ-ದ್ವೇಷ ಮಾಡಲಾಗಿತ್ತೋ, ಅವುಗಳ ಪರಮಾಣುಗಳನ್ನು ಸೆಳೆದು ಮತ್ತು ಅವುಗಳನ್ನು ಸಂಗ್ರಹಿಸಿಕೊಂಡು ಗ್ರಂಥಿಗಳು ಉಂಟಾಗುತ್ತವೆ. ಆ ಗ್ರಂಥಿಗಳು ಈ ಜನ್ಮದಲ್ಲಿ ಚಿಗುರೊಡೆಯುತ್ತವೆ. ಇವುಗಳನ್ನು ವಿಚಾರಗಳೆಂದು ಹೇಳಲಾಗುತ್ತದೆ. ಇಂತಹ ವಿಚಾರಗಳನ್ನು 'Discharge ಮನಸ್ಸು' ಎಂದು ಕರೆಯುತ್ತಾರೆ. ವಿಚಾರಗಳು ಬಂದಾಗ ಅಹಂಕಾರವು ಅದರಲ್ಲಿ ತನ್ಮಯವಾಗುತ್ತದೆ. ಅಹಂಕಾರವು ತನ್ಮಯವಾಗದೆ ಇದ್ದರೆ, ಎಲ್ಲಾ ವಿಚಾರಗಳು Discharge ಆಗಿ ಮನಸ್ಸು ಖಾಲಿಯಾಗುತ್ತದೆ, ಯಾವುದರ ಬಗ್ಗೆ ಹೆಚ್ಚಿನ ವಿಚಾರವಿರುವುದೋ, ಅದರ ಮನೋಗ್ರಂಥಿಯು ದೊಡ್ಡದಿರುತ್ತದೆ. ಅಂತಃಕರಣದ ಇನ್ನೊಂದು ಭಾಗ 'ಚಿತ್ತ'ವಾಗಿದೆ. ಚಿತ್ತದ ಸ್ವಭಾವ ಅಲೆದಾಡುವುದು, ಮನಸ್ಸು ಎಂದೂ ಅಲೆದಾಡುವುದಿಲ್ಲ. 'ಚಿತ್ತವು ಸುಖವನ್ನು ಹುಡುಕಿಕೊಂಡು ಅಲೆಯುತ್ತಲೇ ಇರುತ್ತದೆ. ಆದರೆ, ಅದೆಲ್ಲವೂ ಭೌತಿಕ ಸುಖವಾಗಿದ್ದು ವಿನಾಶವಾಗಿಲಿರುವುದರಿಂದ, ಅದರ ಹುಡುಕಾಟಕ್ಕೆ ಅಂತ್ಯ ವಿರುವುದಿಲ್ಲ. ಹಾಗಾಗಿ ಅದು ಅಲೆದಾಡುತ್ತಲೇ ಇರುತ್ತದೆ. ಯಾವಾಗ ಆತ್ಮಸುಖವು ದೊರಕುವುದೋ, ಆಗ ಅದರ ಅಲೆದಾಟವು ಅಂತ್ಯಗೊಳ್ಳುತ್ತದೆ. ಈ 'ಚಿತ್ತವು ಜ್ಞಾನದರ್ಶನದಿಂದ ಉತ್ಪನ್ನವಾಗುತ್ತದೆ. ಅಶುದ್ಧ ಜ್ಞಾನ ಹಾಗು ಅಶುದ್ಧ ದರ್ಶನದಿಂದ ಅಶುದ್ದ ಚಿತ್ತವು ಉತ್ಪನ್ನವಾಗಿದೆ, ಇದು ಸಂಸಾರಿಕ ಚಿತ್ರವಾಗಿದೆ. ಮತ್ತು ಶುದ್ಧ ಜ್ಞಾನ ಹಾಗು ಶುದ್ಧ ದರ್ಶನದಿಂದ ಶುದ್ಧ ಚಿತ್ತವು ಉತ್ಪನ್ನವಾಗುತ್ತದೆ, ಇದು ಶುದ್ಧ ಆತ್ಮ! ಬುದ್ದಿಯು ಆತ್ಮದ Indirect Light ಆಗಿದೆ ಮತ್ತು ಪ್ರಜ್ಞೆ (ಪ್ರಜ್ಞಾ) Direct Light ಆಗಿದೆ. ಬುದ್ದಿPage Navigation
1 ... 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54