________________
ಅಂತಃಕರಣದ ಸ್ವರೂಪ
ಇದರ ಕಾರಣವೇನು? ಮುಸ್ಲಿಂ ಹುಡುಗನಿಗೆ ಮಾಂಸಾಹಾರದ ವಿಚಾರವು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ವೈಷ್ಣವನಿಗೆ ಅದರ ಬಗ್ಗೆ ಯಾವಾಗಲೋ ಒಮ್ಮೆ ವಿಚಾರ ಬರುತ್ತದೆ. ಹಾಗು ಜೈನ ಹುಡುಗನಿಗೆ ಎಂದೂ ಅದರ ಬಗ್ಗೆ ವಿಚಾರವೇ ಬರುವುದಿಲ್ಲ. ಈ ಜೈನ ಹುಡುಗನೊಳಗೆ ಮಾಂಸಾಹಾರದ ಗ್ರಂಥಿಯೇ ಇರುವುದಿಲ್ಲ. ವೈಷ್ಣವನಿಗೆ ಅದರ ಬಗ್ಗೆ ಬಹಳ ಸಣ್ಣ ಗ್ರಂಥಿಯು ಇರುವುದಾಗಿದೆ. ಹಾಗೆ, ಮುಸ್ಲಿಂ ಹುಡುಗನಿಗೆ ಅದರ ಗ್ರಂಥಿಯು ದೊಡ್ಡದಿದೆ. ಯಾವ ಗ್ರಂಥಿ ಇರುವುದೋ, ಅದರ ವಿಚಾರವು ಬರುವುದಲ್ಲದೆ, ಬೇರೆ ಯಾವ ವಿಚಾರವು ಬರುವುದಿಲ್ಲ. ಹೀಗೆ ಹಲವಾರು ರೀತಿಯ ವಿಚಾರಗಳಿರುತ್ತವೆ, ಆದರೆ ನಿಮ್ಮೊಳಗೆ ಎಷ್ಟೆಲ್ಲಾ ಗ್ರಂಥಿಗಳಿವೆಯೋ, ಅವುಗಳದ್ದಷ್ಟೇ ವಿಚಾರಗಳು ಬರುತ್ತವೆ.
ಗ್ರಂಥಿ ಹೇಗೆ ಹುಟ್ಟುತ್ತದೆ? ಈ ಜನ್ಮದಲ್ಲಿ ನೀವು ಮಾಂಸಾಹಾರ ಮಾಡದೆ ಇದ್ದರೂ, ನಿಮ್ಮ ಗೆಳೆಯರ ಸಂಗದಲ್ಲಿ ಯಾರಾದರೂ ಮಾಂಸಾಹಾರ ಮಾಡುತ್ತಿದ್ದು, ಮಾಂಸಾಹಾರವು ರುಚಿಕರ ಒಳ್ಳೆ ಮಜಾ ಇದೆ ಎಂದಾಗ, ಇದರಿಂದ ನಿಮ್ಮೊಳಗೆ ಅದೇ ಅಭಿಪ್ರಾಯವು ಮೂಡುತ್ತದೆ. ಏನೆಂದರೆ, ಹೌದು ಅವನ ಮಾತು ನಿಜ ಎಂದು ಅರಿತು ನಂತರ ನೀವೂ ಕೂಡ ಮನಸ್ಸಿನಲ್ಲಿ ಭಾವನೆಯನ್ನು ಮಾಡುವಿರಿ, ಮಾಂಸಾಹಾರ ಸೇವಿಸುವುದರಿಂದ ಏನೂ ತಪ್ಪಿಲ್ಲ ಎಂದು. ಆಗ ಅದರ ಗ್ರಂಥಿಯು ಉತ್ಪನ್ನವಾಗುತ್ತದೆ. ನಂತರ ಆ ಗ್ರಂಥಿಯು ಮನಸ್ಸಿನಲ್ಲಿ ಉಳಿಯುತ್ತದೆ ಹಾಗೂ ಮುಂದಿನ ಜನ್ಮದಲ್ಲಿ ನೀವು ಮಾಂಸಾಹಾರವನ್ನು ಸೇವಿಸಲಾರಂಭಿಸುತ್ತೀರಿ.
ನಿಮಗೆ ಅರ್ಥವಾಗುತ್ತಿದೆಯೇ? ಆದುದರಿಂದ ಎಂದಿಗೂ ಅಂತಹ ಸಂಗವನ್ನಾಗಲಿ, ಭಾವನೆಯನ್ನಾಗಲಿ ಮಾಡಬೇಡಿ. ಶಾಖಾಹಾರಿಗಳೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ, ಗ್ರಂಥಿಯನ್ನು ನಾವೇ ಹುಟ್ಟುಹಾಕುವುದು, ಮನಸ್ಸನ್ನು ಯಾವ ಭಗವಂತನೂ ಹುಟ್ಟಿಸಿಲ್ಲ. ಮನಸ್ಸನ್ನು ನಾವೇ ಸೃಷ್ಟಿಸಿರುವುದು.
ಈಗಿರುವ ಮನಸ್ಸು Discharge ಸ್ವರೂಪದ್ದಾಗಿದೆ. ಯಾವುದನ್ನು Charge ಮಾಡಲಾಗಿತ್ತೋ, ಅದೇ ಈಗ Discharge ಆಗುತಲಿರುತ್ತದೆ. Discharge ಸಮಯದಲ್ಲಿನ ವಿಚಾರವು ಹೇಗೆ ಬೇಕಾದರೂ ಇರಲಿ, ಆದರೆ, ಯಾವ ತರಹದ ಭಾವನೆಯಿಂದ charge ಮಾಡಿಕೊಳ್ಳಲಾಗುತ್ತದೆಯೋ, ಅದೇ ರೀತಿಯ ಭಾವನೆಯಿಂದ Discharge ಆಗುತ್ತದೆ. ಅದಲ್ಲದೆ ಬೇರೇನೂ ಇಲ್ಲ.