________________
ಅಂತಃಕರಣದ ಸ್ವರೂಪ
'ಜ್ಞಾನಿಪುರುಷ'ರನ್ನು ನಿಗ್ರ್ರಂಥಿಯವರೆಂದು ಹೇಳಲಾಗುತ್ತದೆ. ನಿಗ್ರ್ರಂಥಿಯ ಅರ್ಥವೇನೆಂದರೆ, ನಮ್ಮ (ಜ್ಞಾನಿಗಳ) ಮನಸ್ಸು ಒಂದು ಸೆಕೆಂಡು ಕೂಡಾ ಯಾವುದೇ ವಿಚಾರದಲ್ಲಿ ಸಿಕ್ಕಿಬೀಳುವುದಿಲ್ಲ. ನಿಮ್ಮ ಮನಸ್ಸು ಹೇಗಿರುತ್ತದೆ? ಕಾಲು-ಕಾಲು ಗಂಟೆ, ಅರ್ಧ-ಅರ್ಧ ಗಂಟೆ, ಒಂದೇ ವಿಚಾರದಲ್ಲಿ ಮುಳುಗಿರುತ್ತದೆ. ಹೇಗೆ ನೊಣವು ಬೆಲ್ಲದ ಸುತ್ತಾ ಸುತ್ತುತಲಿರುತ್ತದೆಯೋ, ಹಾಗೆ ನಿಮ್ಮ ಮನಸ್ಸು ಅಲ್ಲಿಯೇ ತಿರುಗುತಲಿರುತ್ತದೆ, ಏಕೆಂದರೆ ನಿಮ್ಮ ಮನಸ್ಸು ಗ್ರಂಥಿಗಳಿಂದ ಕೂಡಿದೆ. ಆದರೆ ನಮ್ಮ ಮನಸ್ಸು ಹಾಗಿಲ್ಲ. ಆ ಮನಸ್ಸು ಚಲನಚಿತ್ರದ (ಫಿಲಂ) ಹಾಗೆ ಒಂದರ ನಂತರ ಒಂದು ವಿಚಾರಗಳು ಬರುತಲಿರುತ್ತದೆ. ಆದರೆ, ಎಲ್ಲಿಯೂ ತನ್ಮಯಾಕಾರವಾಗುವುದಿಲ್ಲ. ಹಾಗು ನಾವು ಅದನ್ನು ವೀಕ್ಷಕರಂತೆ ವೀಕ್ಷಿಸುತ್ತೇವೆ.
ಒಬ್ಬರು ಪಟ್ಟಣವಾಸಿ ವ್ಯಕ್ತಿ ನಮ್ಮಲ್ಲಿಗೆ ದರ್ಶನ ಮಾಡಲು ಬರುತ್ತಿದ್ದರು. ಅವರು ಬಹಳ ಜಿಪುಣರು ಹಾಗು ಇಳಿವಯಸ್ಸಿನವರು. ಅವರಿಗೆ ನಾನು ಹೇಳಿದೆ, 'ಪ್ರತಿದಿನ ನೀವು ತುಂಬಾ ಆಯಾಸ ಮಾಡಿಕೊಂಡು ನಡೆದುಕೊಂಡು ಬರುತ್ತೀರಾ, ಯಾಕೆ ನೀವು ಆಟೋ ರಿಕ್ಷಾದಲ್ಲಿ ಬರಬಾರದು? ಹಾಗು ನಿಮ್ಮಲ್ಲಿ ಇರುವ ಹಣವನ್ನು ಏನು ಮಾಡುತ್ತೀರಾ? ಮಗನು ಕೂಡ ದುಡಿಯುತ್ತಿದ್ದಾನೆ.' ಆಗ ಅವರು, 'ಏನು ಮಾಡುವುದು, ನನ್ನ ಸ್ವಭಾವವೇ ಜಿಪುಣತನದ್ದಾಗಿದೆ. ಎಲ್ಲಾ ಜನರು ಊಟಮಾಡಲು ಕುಳಿತಿರುವಾಗ, ನಾನು ಲಾಡು ಬಡಿಸಲು ಹೋದರೆ ಅಲ್ಲಿಯೂ ಎಲ್ಲರಿಗೆ ಅರ್ಧ-ಅರ್ಧ ಮಾಡಿ ಬಡಿಸುತ್ತೇನೆ. ಅದೇನು ನಮ್ಮ ಮನೆಯ ಲಾಡು ಅಲ್ಲ, ಆದರೂ ಮುರಿದು ಅರ್ಧ-ಅರ್ಧ ಬಡಿಸುತ್ತೇನೆ. ನನ್ನ ಸ್ವಭಾವವೇ ಹಾಗೆ' ಎಂದು ಹೇಳಿದರು. ಅದಕ್ಕೆ ನಾನು ಕೇಳಿದೆ, 'ಜಿಪುಣತನದಿಂದ ನಿಮಗೆ ಬಹಳ ದುಃಖವಾಗಿರಬಹುದು ಅಲ್ಲವೇ? ಇದು ಲೋಭದ ಗ್ರಂಥಿಯಾಗಿದೆ. ಅದನ್ನು ಮುರಿಯುವ ಉಪಾಯವಿದೆ. ಏನೆಂದರೆ, 'ಹದಿನೈದು-ಇಪ್ಪತ್ತು ರೂಪಾಯಿಯ ಚಿಲ್ಲರೆ ಕೈಯಲ್ಲಿ ಇಟ್ಟುಕೊಳ್ಳಿ ಮತ್ತು ಇಲ್ಲಿಗೆ ಆಟೋ ರಿಕ್ಷಾದಲ್ಲಿ ಬನ್ನಿ. ಹಾಗೆ ಬರುವಾಗ ದಾರಿಯುದ್ದಕ್ಕೂ ಸ್ವಲ್ಪ-ಸ್ವಲ್ಪ ಚಿಲ್ಲರೆಯನ್ನು ಎಸೆಯುತ್ತಾ ಬನ್ನಿ.' ಎಂದು ಅವರಿಗೆ ಹೇಳಿಕೊಟ್ಟೆ. ಅವರು ಒಂದು ದಿನ ಹಾಗೆಯೇ ಮಾಡಿದರು. ಇದರಿಂದ ಅವರ ಸ್ವಭಾವದಿಂದ ಹೊರಬರಲು ಸಹಾಯವಾಯಿತಲ್ಲದೆ, ಬಹಳ ಆನಂದವೂ ಉಂಟಾಯಿತು. ಅಂತಹ ಆನಂದದ ದಾರಿಯನ್ನು ನಾನು ಹೇಳಿಕೊಟ್ಟೆವು. ಹಣವನ್ನು ದಾರಿಯಲ್ಲಿ ಎಸೆಯುವುದರಿಂದ ಅದೇನು ನದಿಯನ್ನು ಸೇರುವುದೇ? ಇಲ್ಲ, ರಸ್ತೆಯಲ್ಲಿ ಬಿದ್ದ ಹಣವು ಅಲ್ಲಿಯೇ ಬಿದ್ದಿರುವುದಿಲ್ಲ, ಆ ಹಣವನ್ನು ಯಾರಾದರು ತೆಗೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ನಿಮಗೆ ಏನು ಲಾಭವಾಗುವುದೆಂದರೆ, ನಿಮ್ಮ ಮನಸ್ಸಿಗೆ ತಿಳಿಯುತ್ತದೆ, ಇನ್ನು ನನ್ನಂತೆ (ಮನಸ್ಸಿನಂತೆ) ಏನು ನಡೆಯುವುದಿಲ್ಲ ಎಂದು. ಆಗ ನಿಮ್ಮ ಲೋಭದ ಗ್ರಂಥಿಯು ಮುರಿದು ಬೀಳುತ್ತದೆ. ಹೀಗೆ ಹದಿನೈದು-ಇಪ್ಪತ್ತು ದಿನಗಳವರೆಗೆ ಹಣವನ್ನು ರಸ್ತೆಯಲ್ಲಿ ಉದುರಿಸುತ್ತಿದ್ದರೆ