________________
ಅಂತಃಕರಣದ ಸ್ವರೂಪ
ಈ ಬೇಸಿಗೆಯ ಕಾಲದಲ್ಲಿ ನೀವು ಗದ್ದೆಗೆ ಹೋದರೆ, ಆಗ ಗದ್ದೆಯ ಬದಿಯ 'ಬದು'ವನ್ನು ನೋಡಿ ನೀವು ಹೇಳುತ್ತೀರಾ, 'ನಮ್ಮ ಬದುವಿನ ಮೇಲೆ ಯಾವ ಕಳೆಯು ಬೆಳೆಯದೆ ಬಹಳ ಸ್ವಚ್ಛವಾಗಿದೆ' ಎಂದು. ಅದಕ್ಕೆ ನಾವು, 'ಜೂನ್ ತಿಂಗಳ ಹದಿನೈದನೇ ತಾರೀಖಿನ ನಂತರ ಮಳೆಯಾದ ಮೇಲೆ ನಿಮಗೆ ತಿಳಿಯುತ್ತದೆ ಎಂದು ಹೇಳುತ್ತೇವೆ. ಮಳೆಯಾದ ಮೇಲೆ ನೀವೇ ಹೇಳುತ್ತೀರಾ, ಎಷ್ಟೊಂದು ಗಿಡಬಳ್ಳಿಗಳು ಚಿಗುರೊಡೆದಿವೆ ಎಂದು. ಅದಕ್ಕೆ ಕಾರಣವೇನೆಂದರೆ ಯಾವೆಲ್ಲ ಗಿಡಗಳು ಮೇಲೆ ಬಂದಿರುವುವೋ, ಅದು ಅವುಗಳ ಗ್ರಂಥಿಯಿಂದಾಗಿ; ಭೂಮಿಯೊಳಗೆ ಯಾವುದೆಲ್ಲಾ ಗಿಡಗಳ ಬೇರುಗಳು ಹುದುಗಿಕೊಂಡಿವೆಯೋ, ಅವುಗಳಿಗೆ ನೀರಿನ ಸಂಯೋಗವು ಸಿಗುತ್ತಿದಂತೆಯೇ ಚಿಗುರೊಡೆಯುತ್ತವೆ. ಹಾಗೆಯೇ ಈ ಮನುಷ್ಯನ ಮನಸ್ಸು ಕೂಡಾ ಗ್ರಂಥಿಯ ಸ್ವರೂಪದಲ್ಲಿ ಇರುತ್ತದೆ. ವಿಷಯದ ಗ್ರಂಥಿ, ಲೋಭದ ಗ್ರಂಥಿ, ಮಾಂಸಾಹಾರದ ಗ್ರಂಥಿ, ಹೀಗೆ ಎಲ್ಲಾ ವಿಧದ ಗ್ರಂಥಿಗಳು ಇರುತ್ತವೆ. ಆದರೆ, ಅವುಗಳಿಗೆ ಸರಿಯಾದ ಸಮಯ ಬಾರದೆ ಇದ್ದರೆ, ಸಂಯೋಗವು ಸಿಗದೇ ಹೋದರೆ ಅವುಗಳು ಚಿಗುರುವುದಿಲ್ಲ. ಅದರ ಸಮಯ ಬಂದಾಗ, ಸಂಯೋಗವು ಅನುಕೂಲಕರವಾದಾಗ, ಗ್ರಂಥಿಯಿಂದ ವಿಚಾರಗಳು ಹೊರಹೊಮ್ಮುತ್ತವೆ. ಸ್ತ್ರೀಯನ್ನು ಕಂಡಾಕ್ಷಣವೇ ಹಲವಾರು ವಿಚಾರಗಳು ಬರುತ್ತವೆ, ಆದರೆ ಅಂತಹ ಸಂದರ್ಭವು ಕಾಣಲು ಸಿಗದೆ ಇದ್ದಾಗ ಯಾವುದೇ ವಿಚಾರಗಳು ಇರುವುದಿಲ್ಲ, ತೊಂದರೆಯು ಇರುವುದಿಲ್ಲ.
ನಿಮಗೆ ಯಾವ ವಿಚಾರವು ಬರುತ್ತದೆಯೋ, ಅದೇ ವಿಚಾರವು ಬೇರೆಯವರಿಗೆ ಬರುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ಮನುಷ್ಯನಲ್ಲಿ ಗ್ರಂಥಿಗಳು ವಿಧವಿಧವಾಗಿರುತ್ತವೆ. ಕೆಲವರಿಗೆ ಮಾಂಸಾಹಾರದ ಗ್ರಂಥಿಯೇ ಇರುವುದಿಲ್ಲ, ಅಂಥವರಿಗೆ ಅದರ ವಿಚಾರವೇ ಬರುವುದಿಲ್ಲ.
ಒಂದೇ ಕಾಲೇಜಿನಲ್ಲಿನ ಮೂರು ವಿದ್ಯಾರ್ಥಿಗಳು, ಅವರಲ್ಲಿ ಒಬ್ಬ ಜೈನ, ಒಬ್ಬ ಮುಸ್ಲಿಂ ಹಾಗು ಒಬ್ಬ ವೈಷ್ಣವ ಈ ಮೂವರು ಒಳ್ಳೆಯ ಗೆಳೆಯರು. ಅವರಲ್ಲಿ ಜೈನ ಹುಡುಗನಿಗೆ ಮಾಂಸಾಹಾರವನ್ನು ಸೇವಿಸಬೇಕೆಂಬ ವಿಚಾರವು ಎಂದೂ ಬರುವುದೇ ಇಲ್ಲ. ಅವನು, 'ಅದು ನನಗೆ ಇಷ್ಟವಿಲ್ಲ ಹಾಗು ಅದರ ಬಗ್ಗೆ ಕುತೂಹಲವೂ ಇಲ್ಲ' ಎಂದು ಹೇಳುತ್ತಾನೆ. ಹಾಗೆ ಮತ್ತೊಬ್ಬ ವೈಷ್ಣವ ಹುಡುಗ ಏನು ಹೇಳುತ್ತಾನೆ. 'ನನಗೆ ಒಮ್ಮೊಮ್ಮೆ ಮಾಂಸಾಹಾರವನ್ನು ಸೇವಿಸಬೇಕೆಂಬ ವಿಚಾರವು ಬರುತ್ತದೆ. ಆದರೆ ನಾನು ಎಂದೂ ಸೇವಿಸಿಲ್ಲ' ಎಂದು. ಇನ್ನು ಮುಸ್ಲಿಂ ಹುಡುಗ ಹೇಳುತ್ತಾನೆ, 'ನನಗೆ ಮಾಂಸಾಹಾರ ಬಹಳ ಇಷ್ಟ, ಅದು ನಮ್ಮ ದಿನ ನಿತ್ಯದ
ಆಹಾರವಾಗಿದೆ' ಎಂದು.