Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 13
________________ ಅಂತಃಕರಣದ ಸ್ವರೂಪ ಮನಸ್ಸು ಮತ್ತೆ ಎಂದೂ ಅಡ್ಡಿಪಡಿಸಲು ಬರುವುದಿಲ್ಲ ಮತ್ತು ಮನಸ್ಸಿಗೆ ತಿಳಿಯುತ್ತದೆ. ಇನ್ನು ತನ್ನಂತೆ ಏನೂ ನಡೆಯುವುದಿಲ್ಲ ಎಂದು, ನಂತರ ಮನಸ್ಸು ವಿಶಾಲವಾಗುತ್ತದೆ. ಎಷ್ಟು ಅವತಾರಗಳಿಂದ ನಿಮ್ಮ ಮನಸ್ಸು ಇದೆ? ಪ್ರಶ್ಯಕರ್ತ: ಗೊತ್ತಿಲ್ಲ. ಈ ಮನಸ್ಸು ಹೇಗೆ ಹುಟ್ಟುತ್ತದೆ? ದಾದಾಶ್ರೀ: ಇಡೀ ಪ್ರಪಂಚವೇ ಈ ಮನಸ್ಸಿನಿಂದಾಗಿ ತಳಮಳಗೊಂಡಿದೆ. ಮನಸ್ಸು ಏನು ಎಂಬುದನ್ನು ತಿಳಿದುಕೊಳ್ಳಬೇಕು. ಮನಸ್ಸು ಬೇರೆ ಯಾವ ವಸ್ತುವಲ್ಲ, ಅದು ಹಿಂದಿನ ಜನ್ಮದ Opinion (ಅಭಿಪ್ರಾಯ) ಆಗಿದೆ. ಹಿಂದಿನ ಒಂದು ಜನ್ಮದ ಅಭಿಪ್ರಾಯವಾಗಿದೆ. ಈಗಿನ ನಿಮ್ಮ ಅಭಿಪ್ರಾಯವು, ಅದು ಈಗಿನ ಜ್ಞಾನದಿಂದಾಗಿದೆ. ಈಗ ನೀವು ಯಾವ ಜ್ಞಾನವನ್ನು ಕೇಳಿರುತಿರೋ, ಯಾವ ಜ್ಞಾನವನ್ನು ಓದಿರುತ್ತೀರೋ, ಅದರಿಂದ ಈಗಿನ ಅಭಿಪ್ರಾಯಗಳು ಉಂಟಾಗುತ್ತವೆ. ಅದೇ ರೀತಿ ಹಿಂದಿನ ಜನ್ಮದಲ್ಲಿ ಯಾವ ಜ್ಞಾನವಿತ್ತೋ ಅದರಂತೆ ಅಭಿಪ್ರಾಯಗಳಿರುತ್ತವೆ. ಆಗಿನ ಆ ಎಲ್ಲಾ ಅಭಿಪ್ರಾಯಗಳನ್ನು ಈಗಿರುವ ಮನಸ್ಸು ಹೇಳುತ್ತದೆ. ಇದರಿಂದಾಗಿ ಎರಡು ಅಭಿಪ್ರಾಯಗಳ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಹೀಗೆ ಜಗತ್ತಿನಲ್ಲಿ ಎಲ್ಲರೂ ಮನಸ್ಸಿನ ಅಧೀನಕ್ಕೆ ಒಳಗಾಗಿ, ಬಹಳ ದುಃಖಿಗಳಾಗಿದ್ದಾರೆ. ಒಬ್ಬ ವ್ಯಕ್ತಿಯ ಹೆಂಡತಿ ಪ್ರತಿನಿತ್ಯ ಅವರೊಂದಿಗೆ ಜಗಳವಾಡುತ್ತಿದ್ದಳು. ಏಕೆಂದರೆ, ಅವಳ ಗೆಳತಿಯರೆಲ್ಲರೂ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ ಹಾಗೂ ನೀವು ಇಷ್ಟು ದೊಡ್ಡ Officer (ಅಧಿಕಾರಿ) ಆಗಿ ಏನೂ ಮಾಡಲಿಲ್ಲ. ನೀವು ಯಾಕೆ ಲಂಚವನ್ನು ತೆಗೆದು ಕೊಳ್ಳುವುದಿಲ್ಲ? ನೀವೂ ಕೂಡಾ ಬೇರೆಯವರ ಹಾಗೆ ಲಂಚವನ್ನು ಪಡೆಯಬೇಕು. ಹೀಗೆ, ಅವಳು ಪ್ರತಿನಿತ್ಯ ಹೇಳುತ್ತಿದ್ದಳು, ಇದರಿಂದಾಗಿ ಅವರಿಗೂ, ಲಂಚವನ್ನು ತೆಗೆದುಕೊಳ್ಳಲೇಬೇಕೆಂದು ಅನ್ನಿಸಿತು ಹಾಗೂ ಕಚೇರಿಗೆ ಹೊರಡುವಾಗ ಲಂಚವನ್ನು ತೆಗೆದುಕೊಳ್ಳುವ ಮನಸ್ಸು ಮಾಡಿ ಹೊರಡುತ್ತಿದ್ದರು. ಆದರೆ, ಲಂಚ ತೆಗೆದುಕೊಳ್ಳುವ ಸಮಯ ಬಂದಾಗ ಹಿಂಜರಿಯುತ್ತಿದ್ದರು. ಏಕೆಂದರೆ ಅವರ ಹಿಂದಿನ ಅಭಿಪ್ರಾಯವು ತೆಗೆದುಕೊಳ್ಳಲು ಬಿಡುವುದಿಲ್ಲ, ಆದರೆ ಈಗಿರುವ ಅಭಿಪ್ರಾಯವು 'ಲಂಚ ತೆಗೆದುಕೊಳ್ಳಲೇಬೇಕು, ಲಂಚ ತೆಗೆದುಕೊಳ್ಳುವುದೇ ಸರಿ' ಎಂದು ಹೇಳುತ್ತದೆ. ಹೀಗಾಗಿ ಮುಂದಿನ ಜನ್ಮದಲ್ಲಿ ಅವರು ಲಂಚ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಹಾಗೆಯೇ, ಇನ್ನೊಬ್ಬ ವ್ಯಕ್ತಿಯು ಲಂಚ ತೆಗೆದುಕೊಳ್ಳುತ್ತಿರುತ್ತಾರೆ, ಆದರೆ ಅದರಿಂದಾಗಿ ಅವರಿಗೆ ಬಹಳ ದುಃಖವಾಗುತ್ತಿರುತ್ತದೆ ಹಾಗೂ 'ಲಂಚ ತೆಗೆದುಕೊಳ್ಳುವುದೇ ಬೇಡ, ಅದು ಒಳ್ಳೆಯದಲ್ಲ, ಆದರೂ ಯಾಕೆ ಹೀಗೆ ತೆಗೆದುಕೊಳ್ಳುತ್ತಿದ್ದೇನೆ?' ಎಂದು ಅನ್ನಿಸುತ್ತದೆ. ಅಂತಹವರು ಮುಂದಿನ

Loading...

Page Navigation
1 ... 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54