________________
ಪ್ರತಿಪಾದಿಸಲಾಗಿದೆ. ಅಲಂಕಾರರಾಘವ ಭಾಗ ೨ರಲ್ಲಿ ಶಬ್ದಾಲಂಕಾರ-ಅರ್ಥಾಲಂಕಾರ ಗಳನ್ನು ವಿಶದವಾಗಿ ವಿವರಿಸಲಾಗಿದೆ. ಇಲ್ಲಿ ನ ಅದ್ಭುತರಾವ ಉದಾಹರಣ ನಾಟಕವನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕೆಂಬ ಉದ್ದೇಶದಿಂದ ಸಂಪಾದನೆ ಮಾಡು ವಾಗ ಪ್ರತ್ಯೇಕಿಸಲಾಗಿದೆ. ಅಲಂಕಾರರಾಘವ ಭಾಗ-೧ ಮತ್ತು ಭಾಗ-೨ ಕೃತಿಗಳನ್ನು ಬೇರೆ ಬೇರೆ ಮುದ್ರಣಾಲಯಗಳಿಗೆ ಕೊಟ್ಟಿದ್ದು, ಭಾಗ-೨ ಬೇಗ ಮುದ್ರಣಗೊಂಡಿತು. ಆದರೆ ಭಾಗ-೧ ಕೆಲವಾರು ಕ್ಷೇಶಗಳನ್ನನುಭವಿಸಿ ವಿಳಂಬದಿಂದ ಮುದ್ರಣಗೊಂಡು ಇದೀಗ ಪ್ರಕಟಗೊಂಡಿದೆ. , - ಅಲಂಕಾರರಾಘವ - ಮೊದಲ ಭಾಗವನ್ನು ಅನೇಕ ಅಲಂಕಾರಶಾಸ್ತ್ರ ಗ್ರಂಥಗಳನ್ನು ಅವಲೋಕಿಸಿ ಸಂಪಾದಿಸಲಾಗಿದೆ. ಸಹೃದಯ ಸಜ್ಜನಾಭಿಮಾನಿಗಳು ಪ್ರೀತ್ಯ ಭಿ ನಾ ನ ಗಳಿ೦ದ ಇದನ್ನು ಅವಲೋಕಿಸಿದಲ್ಲಿ ನಮ್ಮ ಪ್ರಯತ್ನ ಸಾರ್ಥಕವಾಗುವುದು.
* ಸಜ್ಜನ ಏಧೇಯ ವಿದ್ವಾನ್ ಡಾ|| ಟಿ. ವಿ. ಸತ್ಯನಾರಾಯಣ,
* ಎಂ.ಎ, ಪಿ.ಹಚ್ಡಿ , ಹಿರಿಯ ಸಹಾಯಕ.ಸಂಶೋಧಕ ಪ್ರಾಚ್ಯವಿದ್ಯಾ ಸಂಶೋಧನಾಲಯ
', ಮೈಸೂರು,