________________
ಗ್ರಂಥಕಾರನ ದೇಶಕಾಲಾದಿ ವಿಚಾರ
ಅಲಂಕಾರರಾಘವವನ್ನು ಬರೆದವನು ಯಕ್ಷೇಶ್ವರ ದೀಕ್ಷಿತ. ಇವನ ತಂದೆ ಕೊಂಡುಭಟ್ಟ ಉಪಾಧ್ಯಾಯ. ತಿರುಮಲಯಜ್ಜನು ಇವನ ಸಹೋದರ, ಆಂಧ್ರ ಪ್ರದೇಶದಲ್ಲಿರುವ ಚರುಕೂರಿ ಎಂಬುದು ಇವನು ಹುಟ್ಟಿದ ಊರು. ಇವನಿಗೆ ಯಜ್ಞನಾರಾಯಣ ಎಂಬುದಾಗಿ ಮತ್ತೊಂದು ಹೆಸರೂ ಇದೆ.
ಈ
ಪದ್ ಭಾ ಷಾ ಚ೦ದ್ರಿಕಾ ಗ್ರಂಥವನ್ನು ರಚಿಸಿರುವ ಲಕ್ಷ್ಮೀಧರನು ಯಜ್ಞಶ್ವರದೀಕ್ಷಿತನ ಸಂಬಂಧಿ, ಬಹುಶಃ ಸೋದರಮಾವನಿರಬೇಕು. ಲಕ್ಷ್ಮೀಧರನು ಕೊಂಡುಭಟ್ಟನ ಶಿಷ್ಯನೂ ಆಗಿದ್ದನು. ಯಜ್ಞಶ್ವರದೀಕ್ಷಿತನ ಮಗ ವೆಂಕಟೇಶ್ವರ, ಈ ವೆಂಕಟೇಶ್ವರನು ಮಹಾನ್ ಕವಿಯಾಗಿದ್ದು ಚಿತ್ರಬಂಧ ರಾಮಾಯಣವೆಂಬ ಶಬ್ದಾಲಂಕಾರಪ್ರಧಾನವಾದ ಕಾವ್ಯವನ್ನು ಬರೆದಿದ್ದಾನೆ. ಈ ಕೃತಿಗೆ ಇವನ ತಂದೆಯಾದ ಯಕ್ಷೇಶ್ವರ ದೀಕ್ಷಿತನು ವ್ಯಾಖ್ಯಾನವನ್ನು ಬರೆದಿದ್ದಾನೆ.
ಯಕ್ಷೇಶ್ವರ ದೀಕ್ಷಿತನಿಂದ ರಚಿತವಾದ ಸಂಸ್ಕೃತ ಕೃತಿಗಳೆಂದರೆ೧. ಅಲಂಕಾರರಾಘವ ೨. ಆಲಂಕಾರಸೂರ್ಯೋದಯ ೩, ಅಲಂಕಾರ ರತ್ನಾಕರ ೪, ಕಾವ್ಯಪ್ರಕಾಶಟೀಕಾ ೫. ಸಾಹಿತ್ಯ ರತ್ನಾಕರ, ಇವು ಅಲಂಕಾರ ಶಾಸ್ತ್ರ ಗ್ರಂಥಗಳು. ಅಲ್ಲದೆ ಗಂಗಶೋಪಾಧ್ಯಾಯನಿಂದ ರಚಿತವಾದ ತತ್ತ್ವಚಿಂತಾ ಮಣಿ ಎಂಬ ತರ್ಕಶಾಸ್ತ್ರಗ್ರಂಥವನ್ನು ಖಂಡಿಸಿ ಶಾಸ್ತ್ರಚೂಡಾಮಣಿ ಎಂಬ ಗ್ರಂಥವನ್ನು ರಚಿಸಿದ್ದಾನೆ. ಇದಕ್ಕೆ ವಿವರದ್ದೇ ವಿನೀ ಎಂಬ ವ್ಯಾಖ್ಯಾನವನ್ನು ತಾನೇ ರಚಿಸಿದ್ದಾನೆ. ಅಷ್ಟಭಾಷಾರಾಮಾಯಣ ಎಂಬ ಪದ್ಯ ಕಾವ್ಯವನ್ನು, ವಂಶಸ್ಥರಾಮಾಯಣ, ಸ್ತೋತ್ರರತ್ನಾಕರ ಎ೦ಬ ಸ್ತೋತ್ರಕಾವ್ಯಗಳನ್ನು, ಚಂಪೂರತ್ನ, ಸಂಗೀತರಾಘವ ಎಂಬ ಚಂಪೂಕಾವ್ಯಗಳನ್ನು ಇವನು ಬರೆದಿದ್ದಾನೆ.
ಅಲಂಕಾರರಾಘವ ಗ್ರಂಥದ ಮಧ್ಯದಲ್ಲಿ ತಾನು ಬರೆದ ನಾಟ್ಯ ಪ್ರಕರಣದ ಲಕ್ಷಣಸಮನ್ವಯ ಹಾಗೂ ವಿವರಣೆಗಾಗಿ ಅದ್ಭುತರಾಮ ಎಂಬ ಉದಾಹರಣರೂಪ ವಾದ ನಾಟಕವನ್ನು ರಚಿಸಿದ್ದಾನೆ.