Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 8
________________ ಉಪೋದ್ಘಾತ ಭದ್ರ, ಗುಣಭದ್ರ, ಪೂಜ್ಯಪಾದ ಎಂಬಿವರುಗಳನ್ನೂ ಹೊಗಳಿದ್ದಾನೆ. ಅನಂತರ - ಹುಲಿ ಪಾಯೆ ಗುರುಗಳ್' 'ಸಳ ಹೊಯ್' ಎಂದು ಕುಂಚದ ಸೆಳೆಯಂ ಕೊಡಲು ಹುಲಿಯನಟ್ಟಿ ಹೊಯ್ಸಳನಾದನು. ಅವನ ಮಗ ವಿನಯಾದಿತ್ಯ ; ಆತನ ಪುತ್ರ ಎರೆಯಂಗ ಅವನ ಸುತ ಬಿಟ್ಟಿದೇವ ; ಆತನ ಮಗ ನರಸಿಂಹ ; ಅವನ ಪುತ್ರ ವೀರಬಲ್ಲಾಳ - ಎಂದು ಹೊಯ್ಸಳರಾಜರ ಪರಂಪರೆಯನ್ನು ಹೇಳಿ, ವೀರಬಲ್ಲಾಳನು ತನಗೆ ಸ್ವಾಮಿಯಾದುದರಿಂದ ಅವನನ್ನು ವಿಶೇಷವಾಗಿ ಸ್ತುತಿಸಿದ್ದಾನೆ. ಗ್ರಂಥಾಂತ್ಯದಲ್ಲಿಯೂ 'ಅಸಹಾಯಶೂರನ ಭುಜಕ್ಕೆ ಜಯಂ ಸಮಸ' ಎಂದು ವೀರಬಲ್ಲಾಳನನ್ನು ಆಶೀರ್ವದಿಸಿದ್ದಾನೆ”. 2 ಯಶೋಧರಚರಿತೆಯನ್ನು ಜನ್ನನು ಬರೆದು ಮುಗಿಸಿದುದು ಕ್ರಿ.ಶ. ೧೨೦೯ರಲ್ಲಿ ಎಂದು ಈ ಕೆಳಗಣ ಪದ್ಯದಿಂದ ತಿಳಿದುಬರುತ್ತದೆ : ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ ಕಾಗಿರೆ ಶುಕ್ಲದಾಶ್ವಯುಜ ಕೃಷ್ಣದ ಪಂಚಮಿ ಪುಷ್ಕತಾರೆ ಪೂ ರ್ಣಾಗುರುವಾಗ ಭೂತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠೆಯಂ ಚಾಗದ ಭೋಗದಗ್ಗಳಿಕೆಯಂ ಮೆದಂ ಕವಿಭಾಳಲೋಚನಂ (ಯಶೋಧರ ಚರಿತೆ: ೪-೮೬) ಇದಿಷ್ಟು ಯಶೋಧರಚರಿತೆಯ ಬಾಹ್ಯ ಪರಿಚಯ ಮಾತ್ರ. ಇನ್ನು, ಕೃತಿಯ ಒಳಗನ್ನು ನೋಡಬಹುದು. 'ಕವಿಚರಿತೆ'ಯಲ್ಲಿ ಮಾರಿದತ್ತನೆಂಬ ರಾಜನು ಮಾರಿಗೆ ಬಲಿಕೊಡುವುದಕ್ಕಾಗಿ ಇಬ್ಬರು ಕುಲೀನರಾದ ಹುಡುಗರನ್ನು ಹಿಡಿದು ತರಿಸಿದಾಗ ಅವರು ಹೇಳಿದ ಪೂರ್ವಕಥೆಯಿಂದ ಪರಹಿಂಸಾಸಕ್ತಿಯನ್ನು ಬಿಟ್ಟು ಅವರನ್ನು ಬಿಡುಗಡೆ ಮಾಡಿ ತಪಂಬಟ್ಟನು - ಎಂಬುದೇ ಇದರ ಕಥಾಸಾರ” ಎಂಬ ಮಾತಿದೆ. ಕೃತಿಯಲ್ಲಿ “ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯಂ ಪೆಟ್ಟು ಧರ್ಮಕ್ಕೆ ತಂದೀ ಶುಭಕಥನ” ಎಂಬ ಮಾತು ಇದಕ್ಕೆ ಆಧಾರ. ಆದರೆ ಕೃತಿಗೆ 'ಯಶೋಧರಚರಿತೆ' ಎಂಬ ಹೆಸರಿರುವುದರಿಂದ ಯಶೋಧರನು ಸಂಕಲ್ಪ ಹಿಂಸೆ ಯಿಂದ ಏನೇನು ಕಷ್ಟಗಳನ್ನು ಯಾವ ಯಾವ ಜನ್ಮದಲ್ಲಿ ಹೇಗೆ ಹೇಗೆ ಅನುಭವಿಸ ಬೇಕಾಯಿತು ಎಂಬ ವಸ್ತುವೇ ಇದರಲ್ಲಿ ಪ್ರಧಾನವೆಂಬುದನ್ನು ಅಂಗೀಕರಿಸ ಬೇಕಾಗುತ್ತದೆ. ಕಥೆಯಲ್ಲಿ ಕುತೂಹಲವನ್ನುಂಟು ಮಾಡುವುದಕ್ಕಾಗಿ ಯಶೋಧರನು ಅಭಯರುಚಿಯಾಗಿದ್ದ ಜನ್ಮದ ಅವಧಿಯಲ್ಲಿ ನಡೆದ ಘಟನೆಯಿಂದ ಕೃತಿಯನ್ನು ತೊಡಗಿಸಿದ್ದಾನೆ, ಅಷ್ಟೆ. ಕಥೆಯ ಸಂಕ್ಷೇಪಸ್ವರೂಪವನ್ನು ಮೊದಲು ಕವಿ ನೋಡೋಣ. ೩. ಕಥಾಸಾರ ಅಯೋಧ್ಯಾ ದೇಶದ ರಾಜಪುರದ ಮಾರಿದತ್ತರಾಜನು ಒಂದು ವಸಂತದಲ್ಲಿ ಎಂದಿನಂತೆ ಚಂಡಮಾರಿದೇವತೆಯ ತೃಪ್ತಿಗಾಗಿ ನರಬಲಿ ಕೊಡುವುದಕ್ಕಾಗಿ ಇಬ್ಬರು

Loading...

Page Navigation
1 ... 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 ... 536