Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 6
________________ ಉಪೋದ್ಘಾತ ೧. ಕವಿ 'ಯಶೋಧರ ಚರಿತೆ'ಯನ್ನು ಬರೆದ ಕವಿ ಜನ್ನ. ಕಮ್ರವಂಶದ ಕಾಶ್ಯಪಗೋತ್ರದ 'ಶಂಕರ' ಎಂಬವನು ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾಧ್ಯಾಯನಾಗಿದ್ದನು. ಇವನಿಗೆ 'ಸುಮನೋಬಾಣ'ನೆಂಬ ಬಿರುದಿತ್ತು. ಈತನ ಹೆಂಡತಿ ಗಂಗಾದೇವಿ. ಇವರಿಗೆ, ಅನಂತನಾಥಜಿನನು ಹುಟ್ಟಿದ ಆಷಾಢಕೃಷ್ಣ ತ್ರಯೋದಶೀ ರೇವತಿ ನಕ್ಷತ್ರ* ಶಿವಯೋಗದಲ್ಲಿ ಜನ್ನನು ಹುಟ್ಟಿದನೆಂದು ಅವನೇ ಹೇಳಿಕೊಂಡಿದ್ದಾನೆ. ಈತನ ಹೆಂಡತಿ “ರಾಯ ದಂಡಾಧಿನಾಥಕೃತಾಂತಂ ಪೆಸರ್ವೆತ್ತ ಚಾಕಣನಪತ್ಯಂ ರೇಚಯಂ ಪೆತ್ತ ಪುತ್ರಿ” ಲಕುಮಾದೇವಿ. ಇವನ ಧಾರ್ಮಿಕಗುರು - ಕಾಣೂರ್ಗಣದ ಮಾಧವಚಂದ್ರ ಶಿಷ್ಯನಾದ ' ಗಂಡವಿಮುಕ್ತ ರಾಮಚಂದ್ರಮುನಿ. ಚಾಳುಕ್ಯ ಜಗದೇಕಮಲ್ಲನಲ್ಲಿ ಕಟಕೋಪಾಧ್ಯಾಯನಾಗಿಯೂ ಅಭಿನವ ಶರ್ವವರ್ಮ ನೆಂಬ ಬಿರುದುಳ್ಳವನಾಗಿಯೂ ಇದ್ದ ಎರಡನೆಯ ನಾಗವರ್ಮನು ಇವನ ಉಪಾಧ್ಯಾಯನಾಗಿದ್ದನು. ಸೂಕ್ತಿಸುಧಾರ್ಣವವನ್ನು ಬರೆದ ಮಲ್ಲಿಕಾರ್ಜುನನು ಈತನ ಸೋದರಿಯ ಪತಿ ; ಮತ್ತು ಶಬ್ದಮಣಿದರ್ಪಣವನ್ನು ಬರೆದ ಕೇಶಿರಾಜನು ಇವನ ಸೋದರಳಿಯ. - ಜನ್ನನೇ ಹೇಳಿಕೊಂಡಂತೆ ಅವನು ವೀರಬಲ್ಲಾಳನ ಆಸ್ಥಾನಕವಿಯಾಗಿದ್ದು ಅವನಿಂದ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು. ಮಾತ್ರವಲ್ಲ, ಬಲ್ಲಾಳನ ಮಗ ನರಸಿಂಹನಲ್ಲಿ ನಿಂದಿರೆ ದಂಡಾಧೀಶಂ ಕುಳ್ಳಿರೆ ಮಂತ್ರಿ ತೊಡಂಕೆ ಕವಿಯಾಗಿದ್ದನು ; ಇವನ ಧರ್ಮಶ್ರದ್ದೆ ಇವನಿಗೆ ಅನಂತನಾಥನ ಬಸದಿಯನ್ನು ಕಟ್ಟಿಸುವ ಹಾಗೂ ಪಾರ್ಶ್ವಜಿನೇಶ್ವರನ ಬಸದಿಯ ದ್ವಾರವನ್ನು ಮಾಡಿಸುವ ಪ್ರೇರಣೆಯನ್ನು ಕೊಟ್ಟಿದೆ. ಇವನದು ಇತ್ತ ಕಯ್ಯಲ್ಲದೆ ಒಡ್ಡಿದ ಕಯ್ಯಲ್ಲ, ಇದೂ ಅಲ್ಲದೆ ತಾನು ರನ್ನನಂತೆ ವೈಯಾಕರಣನೂ ಪೊನ್ನನಂತೆ ಅಸಹಾಯ ಕವಿಯೂ ಆಗಿದ್ದುದನ್ನು ಅವನು ಹೇಳಿಕೊಂಡಿದ್ದಾನೆ. ಜನ್ನನು ಚೆನ್ನರಾಯಪಟ್ಟಣದ ೧೭೯ ನೆಯ ಶಾಸನವನ್ನೂ (ಕ್ರಿ. ಶ. ೧೧೯೧) ತರೀಕೆರೆಯ ೪೫ನೆಯ ಶಾಸನವನ್ನೂ (ಕ್ರಿ.ಶ. ೧೧೯೭) ಬರೆದನೆಂದು ಆಯಾ * ಆಷಾಢ ಕೃಷ್ಣತ್ರಯೋದಶಿಯಂದು ರೇವತೀನಕ್ಷತ್ರ ಬರುವುದು ಹೇಗೋ ತಿಳಿಯದು. ಏಕೆಂದರೆ ಆಷಾಢಮಾಸದ ಪೌರ್ಣಮಿ ಪೂರ್ವಾಷಾಢ ಅಥವಾ ಉತ್ತರಾಷಾಢ ನಕ್ಷತ್ರಗಳಲ್ಲಿಯೇ ಹೆಚ್ಚಾಗಿ ಬರುತ್ತದೆ. ಅನಂತರ ಹದಿಮೂರು ದಿವಸಗಳಲ್ಲಿ ತ್ರಯೋದಶಿ ಬರುವಾಗ, ರೇವತೀನಕ್ಷತ್ರ ದಾಟಿ ಎಷ್ಟೋ ದಿನಗಳ ಅವಧಿ ಕಳೆದಿರುತ್ತದೆ.

Loading...

Page Navigation
1 ... 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 ... 536