Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 4
________________ ಅಧ್ಯಕ್ಷರ ನುಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮರುಮುದ್ರಣಗೊಳ್ಳುತ್ತಿರುವ ಮತ್ತು ಹೊಸದಾಗಿ ಮುದ್ರಿತವಾಗುತ್ತಿರುವ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಸಹೃದಯರು ಮೆಚ್ಚಿ ಸ್ವೀಕರಿಸಲು ಯೋಗ್ಯವಾಗುವಂತೆ ಆಕರ್ಷಕ ವಿನ್ಯಾಸಗಳಲ್ಲಿ ಸಿದ್ಧಪಡಿಸುವ ಆಶಯ ನಮ್ಮದು. ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ, ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು, ಶತಮಾನೋತ್ರವನ್ನು ಆಚರಿಸಿಕೊಳ್ಳುತ್ತಲಿದೆ. ಕಳೆದ ೯೯ ವರ್ಷಗಳಿಂದಲೂ ಕನ್ನಡ ಗ್ರಂಥಗಳ ಪ್ರಕಟಣೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಪರಿಷತ್ತು ಸುಮಾರು ಒಂದು ಸಾವಿರದ ನಾಲ್ಕುನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುತ್ತದೆ. ಸರಿಸುಮಾರು ಒಂದು ಶತಮಾನದಷ್ಟು ಕಾಲಾವಧಿಯ ನಿರಂತರತೆ ಹಾಗೂ ಕೃತಿಗಳ ಮೌಲಿಕತೆಯ ದೃಷ್ಟಿಯಿಂದ ಇದೊಂದು ಅಪೂರ್ವ ದಾಖಲೆಯಾಗಿದೆ. ಕನ್ನಡ ಪ್ರಕಟಣಾ ಚರಿತ್ರೆಯಲ್ಲಂತೂ ಅನನ್ಯವೇ ಸರಿ. ಜನ್ನನ ಯಶೋಧರ ಚರಿತೆಯು ಪ್ರಾಚೀನ ಕನ್ನಡ ಕಾವ್ಯ ಪರಂಪರೆಯಲ್ಲಿ ಒಂದು ಅಪೂರ್ವ ಕೃತಿ. ಹಿಂಸೆ ಹಾಗೂ ಪ್ರೇಮದ ಅಪರೂಪದ ಕಲ್ಪನೆಯನ್ನು ಒಳಗೊಂಡ ಈ ಕಾವ್ಯವು ಕನ್ನಡ ವಿಮರ್ಶೆಯ ಲೋಕದಲ್ಲಿ ಬಹುಚರ್ಚಿತವಾದ ಕೃತಿಯಾಗಿದೆ; ಮತ್ತೆ ಮತ್ತೆ ಪುನರ್‌ಮೌಲ್ಯಮಾಪನಕ್ಕೆ ಒಳಗಾದ ಕಾವ್ಯವಾಗಿದೆ. ಓದುಗರಿಂದ ಬೇಡಿಕೆ ಇರುವ ದೃಷ್ಟಿಯಿಂದ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಮುದ್ರಣ ಮಾಡಿರುವ 'ಯಶೋಧರ ಚರಿತೆ' ಕೃತಿಯನ್ನು ಪುನರ್ ಮುದ್ರಿಸಲಾಗುತ್ತಿದೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ ಬಿ.ಎಂ.ಶ್ರೀ. ಅಚ್ಚುಕೂಟದ ಸಿಬ್ಬಂದಿವರ್ಗಕ್ಕೆ ಹಾಗೂ ಈ ಕಾರ್ಯದಲ್ಲಿ ಸಹಕಾರ ನೀಡಿದ ಪ್ರಕಟಣ ಸಮಿತಿಯ ಎಲ್ಲಾ ಸದಸ್ಯರಿಗೆ ನನ್ನ ಕೃತಜ್ಞತೆಗಳು. ೮-೬-೨೦೧೫ ಪುಂಡಲೀಕ ಹಾಲಂಬಿ ಅಧ್ಯಕ್ಷರು

Loading...

Page Navigation
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 ... 536