________________
ಯಶೋಧರ ಚರಿತೆ
ಕಿತ್ತ ಕರವಾಳಮನಗಂ ಮೃತ್ಯುವಿನಂತಿರ್ದ ಮಾರಿಗಂ ಬೆದಂದೆ ನಿಂ ದರ್ತಿಯನೆ ನುಡಿದರಿವರ ನೆ ಗು ಕರಂ ಪಿರಿದು ಧೀರರಕಟ ಕುಮಾರರ್ ಜವಳಿವೆತಿ ಮನುಜರೂಪದಿ ನವನಿಯೊಳೊಗೆದಂತೆ ಕಾಂತಿ ಮೆಅಲೆದಪುದಿಂದಿಂ ತಿವರ್ಗಳ ಚೆಲ್ವಿಕೆ ಕಣ್ಣಳ ತವರಾಜಮನಿಂದು ಕಂಡೆನೀ ಬಾಲಕರಂ
ಆವ ಕುಲಮಾರ ತನಯರಿ ದಾವಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ ಕ್ಷಾವೃತ್ತಿಯಂದು ಬೆಸಗೊಳೆ ಭೂವರ ಕೇಳೆಂದು ಕುವರನಂದಿಂತೆಂದಂ
೬೫
ಧರ್ಮಪರರ್ಗಲ್ಲದೆಮ್ಮಯ ನಿರ್ಮಲಚಾರಿತ್ರಮಿಂಬುಕಯ್ಯದು ನಿನಗಾ ಧರ್ಮದ ಪೊದ ಪೊಲಂಬದು. ನರ್ಮದೆಯಿಂ ಗೆಂಟನೇಕೆ ಕೇಳಪೆಯಮ್ಮ ಆ ಮಾತನ್ನೆಗಮಿರ್ಕೆಲೆ ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ ಡಾಮೂಲಚೂಲಮಮಗೆ ತ
ರಾಮಲಕಂ ಭವನಿಬದ್ಧಮಬಲಿಸಿತೆಂ ಮೊದಲೆಲ್ಲ ಈ ದೇವಾಲಯದ ಒಳಗೆ ಹೊಕ್ಕ ಎಲ್ಲರಿಗೂ ಜೀವವೇ ಹೋದಂತಾಗುತ್ತಿತ್ತು. ಈ ರೀತಿ ಅಂಜದಿರುವವರನ್ನು ನಾನಿದುವರೆಗೂ ಕಂಡಿಲ್ಲ ! ೬೧. ಹಿರಿದ ಖಡ್ಗಕ್ಕೂ, ನಿಂತ ನನಗೂ, ಮೃತ್ಯು ಸ್ವರೂಪಿಯಾದ ಮಾರಿಗೂ ಒಂದಿಷ್ಟೂ ಹೆದರದೆ, ಧೈರ್ಯದಿಂದ ನಿಂತುಕೊಂಡು ಪ್ರೀತಿಯ ಮಾತನ್ನೇ ಇವರು ಆಡಿದ್ದಾರೆ. ಇವರ ನಡತೆ ಬಹಳ ಹಿರಿದು ! ನಿಜವಾಗಿಯೂ ಈ ಕುಮಾರರು ಧೀರರೇ ಸರಿ ! ೬೨. ಜೋಡಿ ಚಂದ್ರರು ಮನುಷ್ಯರೂಪವನ್ನು ಧರಿಸಿ ಈ ಭೂಲೋಕದಲ್ಲಿ ಹುಟ್ಟಿ ಬಂದಂತೆ ಇವರ ಕಾಂತಿ ಮೆರೆಯುತ್ತಾ ಇದೆ. ನಿಜವಾಗಿಯೂ ಇವರ ಸೌಂದರ್ಯವು ಕಣ್ಣಿಗೆ ತವರಾಜದಂತೆ ಮಧುರವಾಗಿದೆ. ಈ ಬಾಲಕರನ್ನು ಇಂದು ನಾನು ಕಂಡೆನು. ೬೩. ಮಕ್ಕಳೇ, ನಿಮ್ಮ ಕುಲವಾವುದು ? ಯಾರ ಮಕ್ಕಳು ನೀವು ? ಎಲ್ಲಿಂದ ಬಂದಿರಿ ? ಈ ಎಳೆಯ ವಯಸ್ಸಿನಲ್ಲಿ ಈ ಭಿಕ್ಷಾವೃತ್ತಿಯನ್ನು ಕೈಕೊಂಡುದೇಕೆ ?” ಎಂದು ಮಾರಿದತ್ತನು ಕೇಳಿದನು. ೬೪. “ಅರಸನೇ ಕೇಳು” ಎಂದು ಉಪಕ್ರಮಿಸಿದನು 'ಅಭಯರುಚಿ, “ನಮ್ಮ ಚಾರಿತ್ರ್ಯ ನಿರ್ಮಲವಾದುದು. ಅದು ಧರ್ಮಪರರಾದವರಿಗೆ ಮಾತ್ರ ರುಚಿಸಬಹುದಲ್ಲದೆ ಇತರರಿಗೆ ಮೆಚ್ಚಲಾರದು. ನಿನ್ನ ಮಟ್ಟಿಗೆ ಹೇಳುವುದಾದರೆ, ಆ ಧರ್ಮದ ದಾರಿಯು ನರ್ಮದೆಗಿಂತಲೂ ದೂರ,೨೫ ನಮ್ಮನ್ನು ಕೇಳುವುದೇಕೆ ? ೬೫. ಆ ಮಾತು ಹಾಗಿರಲಿ, ಎಲೆ ಭೂಪತಿ, ನಿನಗೆ