________________
೨೪
ಯಶೋಧರ ಚರಿತೆ
ಬೇಡಿದ ಕಾಡೊಳ್ ಮಲಿಯಾ
ಡಾಡುವಮಿದ ಪೊಜಯನೆನಗಂ ನಿನಗಂ ಮೂಡುವ ಮುಖಗುವ ದಂದುಗ ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
೫೨
ಇಂತಿಂತೊರ್ವರನೊರ್ವರ್ ಸಂತೈಸುತ್ತಂ ನೃಪೇಂದ್ರತನುಜಾತ ನಿ. ಶೃಂತಂ ಪೊಕ್ಕರ್ ಪಸಿದ ಕೃ~ ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ
೫೩
ತಳಮನುಡಿದಿಡುವ ಕಣ್ಣಂ ಕಳೆದೇಪ ಕರುಳ ತೋರಣಂಗಟ್ಟುವ ಕಾ •ಳನುರಿಪಿ ನೆತ್ತರಾ ಕೂ ಆ್ಯಳನಡುತಿಹ ವೀರರತ್ತ ನೋಡಮದಅಕೊಳ್
೫೪
ತಾಳುಗೆಯನುರ್ಚಿ ನೆತ್ತಿಯ ಗಾಳಂ ಗಗನದೊಳೆಬಿಲ್ವ ವಾರಿಯ ಬೀರರ್ ಪಾಳಿಯೊಳೆಸೆದರ್ ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೇಜದಿಂ
೫೫
ಹಣ್ಣನ್ನು ಹುಡುಕುವುದೂ ಒಂದೇ ! ೫೨. ಯಾವ ಕಾಡಿಗೆ ಮಳೆ ಬೇಕಿತ್ತೋ, ಅಲ್ಲಿಗೇ ಮಳೆ ಬಂದಂತಾಯಿತು. ಈ ದೇಹದ ಹೊರೆಯನ್ನಂತೂ ಕಳೆದು ಬಿಡೋಣ. ನನಗೂ ನಿನಗೂ ಈ ಮೂಡುವ ಮುಳುಗುವ ಕೋಟಲೆಯೆಂಬುದು ಆಡಿದ ಹೊಲ, ಉಂಡ ಮದ್ದು, ಕಂಡ ವಿಚಾರ !? ೨೩ ೫೩. ಅಣ್ಣ ತಂಗಿಯನ್ನೂ, ತಂಗಿ ಅಣ್ಣನನ್ನೂ ಈ ರೀತಿ ಪರಸ್ಪರ ಸಂತೈಸಿಕೊಳ್ಳುತ್ತಿದ್ದರು. ರಾಜಕುಮಾರರಾದ ಇವರು ಹೀಗೆ ಸಾಂತ್ವನವಚನಗಳನ್ನಾಡುತ್ತಾ ಮುಂಬರಿದು ನಿಶ್ಚಿಂತೆಯಿಂದ ಆ ಮಾರಿಯ ಮನೆಯನ್ನು ಪ್ರವೇಶಿಸಿದರು. ೫೪, ಮಾರಿಗುಡಿ ಯಮನ ಅಡಿಗೆಯ ಮನೆಯಂತಿತ್ತು. ಅಂಗೈಗಳನ್ನೂ ಅಂಗಾಲುಗಳನ್ನೂ ಕತ್ತರಿಸಿ ಇಡುವ ವೀರರು ಕೆಲವರು, ಕಣ್ಣನ್ನು ಕಿತ್ತು ದೇವಿಗೆ ಏರಿಸುವ ವೀರರು ಕೆಲವರು, ಕರುಳನ್ನು ಹೊರಕ್ಕೆಳೆದು ತೋರಣವಾಗಿ ಕಟ್ಟುವವರು ಕೆಲವರು, ಕಾಲುಗಳನ್ನು ಉರಿಸಿ ರಕ್ತದಿಂದ ಅನ್ನವನ್ನು ಬೇಯಿಸುವ ಕೆಲವರು ಅಲ್ಲಿ ಸುತ್ತಮುತ್ತಲೂ ತುಂಬಿಕೊಂಡಿದ್ದರು. ೫೫. ಬಾಯಿಯನ್ನು ಬಗಿದು ಅಂಗುಳು ಕಾಣುವಂತೆ ಮಾಡಿ, ಅಲ್ಲಿಗೆ ಗಾಳವನ್ನು ಚುಚ್ಚಿ, ಆ ಗಾಳವನ್ನು ನೆತ್ತಿಯಲ್ಲಿ ಹೊರಬರುವಂತೆ ಮಾಡಿ, ಎತ್ತರದಲ್ಲಿ ತೂಗಾಡಿಸುವ ವೀರಪುರುಷರು ಸಾಲುಸಾಲಾಗಿ ಕಾಣಿಸುತ್ತಿದ್ದರು. ಹೊಲಗಳಲ್ಲಿ ಪಕ್ಷಿಗಳನ್ನು ಬೆಚ್ಚಿಸಿ ಓಡಿಸುವುದಕ್ಕಾಗಿ ಬೆರ್ಚುಗಳನ್ನು ಕಟ್ಟಿ ನಿಲ್ಲಿಸಿದಂತೆ ಇಲ್ಲಿ ಈ ವೀರರು ಪಾಪದ