________________
ಒಂದನೆಯ ಅವತಾರ
ಅಭಯರುಚಿಯಭಯಮತಿಯೆಂ ಭುಭಯಮನಾ ಪಾಪಕರ್ಮನುಯ್ಕೆಡೆಯೊಳ್ ಮ ತೃಭಯರುಚಿ ತಂಗೆಗೆಂದದ ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೋಳ್' ನಿಯತಿಯನಾರ್ ಮೀಟಿದಪರ್ ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್ ಸಯವಿದೆ ಪತ್ನ ಪರೀಷಹ ಜಯಮ ತಪಂ ತಪಕೆ ಬೇತೆ ಕೊಡೆರಡೊಳವೇ
ಅಣ್ಣನ ಮಾತಂ ಮನದೊಳ್ ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ ವುಣ್ಣದೆ ಪೋಕುಮೆ ಭಯಮೇ ಕಣ್ಣ ಭವಪ್ರಕೃತಿವಿಕೃತಿ ನಾವಣೆಯದುದೇ
ಎನಿತೋಳವಪಾಯಕೋಟಿಗ ಇನಿತರ್ಕಂ ಗೇಹಮಲೆ ದೇಹಮಿದಂ ನೆ ಟ್ಟನೆ ಪೊತ್ತು ಸುಖಮನಯಿಸುವ ಮನುಜಂ ಮೊರಡಿಯೊಳೆ ಮಾದುಪಲಿಮನಸದಿರಂ
೪೮. ಅಭಯರುಚಿ ಮತ್ತು ಅಭಯಮತಿ ಎಂಬ ಆ ಇಬ್ಬರು ಮಕ್ಕಳನ್ನು ಪಾಪ ಕಾರ್ಯಪ್ರವೃತ್ತನಾದ ಚಂಡಕರ್ಮನು ಹಿಡಿದೊಯ್ಯತೊಡಗಿದನು. ಇಬ್ಬರಿಗೂ ಆತನ ಉದ್ದೇಶದ ಅರಿವಾಯಿತು. ಅಭಯರುಚಿ ತಂಗಿಯೊಡನೆ “ಎಲೆ ತಂಗಿ, ನಮಗೆ ಮೃತ್ಯುವೇ' ಸನ್ನಿಹಿತವಾಗಿದೆಯೆಂದು ಹೆದರಿಕೊಳ್ಳಬೇಡ” ಎಂದು ಮಾತಿಗಾರಂಭಿಸಿದನು. ೪೯, ವಿಧಿನಿಯಮವನ್ನು ಮೀರುವವರು ಯಾರಿದ್ದಾರೆ ? ಅದಕ್ಕಾಗಿ ಅಂಜಿದರೆ ಪ್ರಯೋಜನವಾದರೂ ಏನಿದೆ ? ಏನಾದರೂ ಸಂಘಟಿಸಿ ತೆಂದಾದರೆ ಅದನ್ನು ಸಹಿಸಿಕೊಳ್ಳುವುದೇ ನ್ಯಾಯವಾದ ದಾರಿ. ಒದಗಿಬರುವ ಪರೀಷಹಗಳನ್ನು ಜಯಿಸುವುದನ್ನೇ ತಪಸ್ಸು ಎಂಬ ಹೆಸರಿನಿಂದ ಕರೆಯುತ್ತಾರೆ. ತಪಸ್ಸಿಗೆ ಬೇರೆ ಎರಡು ಕೋಡುಗಳಿವೆಯೆ ?೨೨ ೫೦. ಅಣ್ಣನ ಮಾತನ್ನು ಅಭಯಮತಿ ಚೆನ್ನಾಗಿ ಗ್ರಹಿಸಿಕೊಂಡಳು. ಅವಳೂ ಮಾತಾಡತೊಡಗಿದಳು : “ಅಣ್ಣಾ, ಮಾಡಿದುದರ ಫಲವನ್ನು ನಾವು ಉಣ್ಣದೆ ಹೋದೇವೆಯೆ ? ಅದಕ್ಕಾಗಿ ಭಯಪಡುವುದೇಕೆ ? ಜನ್ಮವೆತ್ತಿದ ಮೇಲೆ ಸಹಜವಾಗಿ ಏನೆಲ್ಲ ವಿಕಾರಗಳು ಬರುತ್ತವೆಯೆಂಬುದು ನಮಗೆ ಗೊತ್ತಿಲ್ಲವೆ ? .೫೧. ಅಪಾಯ ಕೋಟಿಗಳು ಎಷ್ಟೆಷ್ಟಿವೆಯೋ ಅಷ್ಟಕ್ಕೆಲ್ಲ ಈ ದೇಹವೇ ಮನೆಯಲ್ಲವೆ . ? ಈ ದೇಹವನ್ನು ಧರಿಸಿಕೊಂಡ ಮೇಲೆ ಇದರಲ್ಲಿ ಸುಖವನ್ನು ಹುಡುಕುವುದೂ ಒಂದೇ ; ಕಲ್ಲು ಗುಡ್ಡದಲ್ಲಿ ಪಕ್ವವಾದ ಮಾದಳದ