________________
೨೨
ಕಿರುವರೆಯದ ಶುಭಲಕ್ಷಣ ದಣಿಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ
ನಱಸಲ್ ಬಳರಿಯ ಬನದಿಂ ಪೊಱಮಟ್ಟಂ ಚಂಡಕರ್ಮನೆಂಬ ತಳಾಂ
ಇತ್ತಲ್ ಬಟಕ್ಕ ಪಂಚಶ
ತೋತ್ತಮ ಯತಿಸಮಿತಿವೆರಸು ಗಮನಪ್ರಾಯ ಶ್ಚಿತ್ತನಿಮಿತ್ತಂ ಬಂದು ಸು
ದತ್ತಾಚಾರ್ಯರ್ ಪುರೋಪವನಮಂ ಸಾರ್ದಮ್
ಅವರ ಗುಣಮವರ ಸಂಯಮ
ಮವರ ತಪಶ್ಚರಣವೆಂಬುದವರಿವರಳವ ಅವರ ಪೆಸರ್ಗೊಂಡ ನಾಲಗೆ
ಸವಿದವೆಯದು ಬಟಕ ತಾಯ ಮೊಲೆವಾಲ್ವನಿಯಂ
ಮುನಿಸಮುದಾಯಸಮೇತಂ
ವಿನೇಯಜನವನಜವನದಿವಾಕರನಂತಾ
ಮುನಿಪನುಪವಾಸಮಂ ಪ
ರ್ವನಿಮಿತ್ತಂ ಕಳೆದು ಬಳಕ ಬಾಲಕಯುಗಮಂ
ಚರಿಗೆಗೆ ಬೀಳ್ಕೊಡೆ ಗುರುಗಳ
ಚರಣಕ್ಕಾ ಯುಗಳಮೆಆಗಿ ಪೋಣಮಟ್ಟಾಗಳ ತರುಣವನಹರಿಣಯುಗಮಂ
ತರಕ್ಷು ಪಿಡಿವಂತೆ ಚಂಡಕರ್ಮ೦ ಪಿಡಿದಂ
ಯಶೋಧರ ಚರಿತೆ
A
೪೪
೪೫
೪೬
೪೭
ತಳಾರ ಚಂಡಕರ್ಮನು ಅಪ್ಪಣೆ ಎಂದು ಉತ್ತರವನ್ನೇನೋ ಕೊಟ್ಟನು. ಒಡನೆಯೇ ತನ್ನ ಕಿಂಕರರು ಈಗಾಗಲೇ ಬಲಿಪಶುಗಳನ್ನು ತಂದಿರಲೇಬೇಕು ಎಂದು ಭಾವಿಸಿ, ೪೩. ಎಳೆಯ ವಯಸ್ಸಿನ, ಶುಭಲಕ್ಷಣವುಳ್ಳ ಬುದ್ದಿವಂತರಾದ ಒಳ್ಳೆಯ ವಂಶದಲ್ಲಿ ಹುಟ್ಟಿದ ಮಾನವ ಜೋಡಿಯನ್ನು ಹುಡುಕುತ್ತಾ ಆ ಮಾರಿಯ ಬನದಿಂದ ಹೊರಟನು. ೪೪. ಇತ್ತ ಸುದತ್ತಾಚಾರ್ಯರೆಂಬ ಗುರುಗಳು ಐನೂರು ಮಂದಿ ಶಿಷ್ಯರನ್ನು ಕೂಡಿಕೊಂಡು ಆ ರಾಜಧಾನಿಯ ಉಪವನಕ್ಕೆ ಬಂದು ಗಮನ ಪ್ರಾಯಶ್ಚಿತ್ತಕ್ಕಾಗಿ ಅಲ್ಲಿಯೇ ತಂಗಿದ್ದರು. ೪೫. ಅವರ ಗುಣ, ಅವರ ಮನೋನಿಗ್ರಹ, ಅವರ ತಪಶ್ಚರಣ ಎಂಬವುಗಳು ಅಂತಿಂಥ ಸಾಮಾನ್ಯರಿಗೆ ಅಳವಡುವಂತಹವಲ್ಲ, ಅವರ ಹೆಸರನ್ನು ಹೇಳಿದರೆ ಸಾಕು, ಆ ನಾಲಗೆಗೆ ತಾಯಿಯ ಮೊಲೆಹಾಲು ಕೂಡ ಸವಿಯಾಗ ಲಾರದು. ೪೬. ತಾವರೆಗಳನ್ನರಳಿಸುವ ಸೂರ್ಯನಂತೆ ಸುದತ್ತಾಚಾರ್ಯರು ಶಿಷ್ಯ ವೃಂದದ ವಿಕಾಸಕ್ಕೆ ಕಾರಣವಾಗಿದ್ದರು. ಅವರು ಈ ಮುನಿಗಳ ಸಮುದಾಯವನ್ನು ಕೂಡಿಕೊಂಡು, ವ್ರತದ ಅಂಗವಾಗಿ ಉಪವಾಸವನ್ನು ಮಾಡಿದರು. ಅನಂತರ ಇಬ್ಬರು ಮಕ್ಕಳನ್ನು ಕರೆದು ಭಿಕ್ಷೆಯೆತ್ತಿ ತರುವಂತೆ ಕಳುಹಿಸಿಕೊಟ್ಟರು. ೪೭. ಆ ಬಾಲಕರು ಗುರುಗಳ ಪಾದಕ್ಕೆ ನಮಸ್ಕರಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲೇ ಎರಡು ಎಳೆಯ ಜಿಂಕೆ ಮರಿಗಳನ್ನು ಹುಲಿಯು ಹಿಡಿಯುವಂತೆ, ಅವರನ್ನು ಚಂಡಕರ್ಮನು ಹಿಡಿದನು.