________________
ನಾಲ್ಕನೆಯ ಅವತಾರ
ತೀವಿದ ತಿದಿಯಂ ತೂಗಿಯುಮಾ ವಾಯುವನಿಟಿಪಿ ತೂಗಿಯುಂ ಸರಿ ತಿದಿಯಿಂದಾ ವಾಯು ಬೇರೆ ತನುವಿಂ ಜೀವಂ ಬೇಕೆಂದು ಮಗನೆ ಭಾವಿಸಿ ನೋಡಾ
ಏದೊರೆಯನಾತ್ಯನೆಂದೊಡನಾದಿಯನಂತಂ ನಿರತ್ಯಯಂ ಚಿನ್ಮಯ ನಿಃ ಪ್ರಾದೇಶಿಕನೆಂದಾತನುಪಾದೇಯಂ ಮುಕ್ತಿಮುಕ್ತನುಂ ಪರಮಾತ್ಮ
ಕಲ್ಲೋಳ್ ಪೊನ್ ಪಾಲೊಳ್ ಕೃತಮಿಲ್ಲೆನವೇಡುಂಟು ದೇಹದೊಳಗಾನದೇಕಿಲ್ಲ ಕುರುಡಂಗೆ ತೋಚಿದೆಡಿಪ್ಪುದೆ ವಸ್ತು ಭೇದಿಸಂಗಾತನೊಳಂ
ಮಾಡುವನಾತ್ಮಂ ನೆಟ್ಟನೆ ಮಾಡಿತನುಣ್ಣಾತನಾತ್ಯನಘಜಲಧಿಯೊಳೊಲಾಡುವೊಡಂ ಗುಣಗಣದೊಳ್ ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ
ಆತನು ದೇಹಕ್ಕಿಂತ ಪ್ರತ್ಯೇಕವಾಗಿಯೇ ಇದ್ದಾನೆ. ೨೫. ತಿದಿಯೊಳಗೆ ಗಾಳಿ ತುಂಬಿಸಿ ತೂಗಿ ನೋಡಿದರೂ, ಅದರೊಳಗಿನ ಗಾಳಿ ತೆಗೆದು ತೂಕ ಮಾಡಿದರೂ ತೂಕದಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ. ಗಾಳಿ ಬೇರೆ, ತಿದಿ ಬೇರೆ ಎಂಬುದು ಖಂಡಿತವಷ್ಟೆ. ಹಾಗೆಯೇ ದೇಹವೇ ಬೇರೆ, ಜೀವವೇ ಬೇರೆ ಎಂಬುದನ್ನು ಚೆನ್ನಾಗಿ ಯೋಚಿಸಿ ನೋಡು, ಮಗನೆ! ೨೬. ಇನ್ನು, ಆತ್ಮನ ಸ್ವರೂಪವೇನು ಬಲ್ಲೆಯಾ? ಅವನಿಗೆ ಆದಿಯಿಲ್ಲ ಅಂತ್ಯವಿಲ್ಲ, ನಾಶವಿಲದ ಚಿನ್ಮಯನಾಗಿದ್ದಾನೆ ಅವನು. ಯಾವ ಒಂದು ಪ್ರದೇಶಕ್ಕೂ ಸೇರಿದವನಲ್ಲ; ಸರ್ವತ್ರ ಉಪಾದೇಯನಾಗಿದ್ದಾನೆ, ಮುಕ್ತಿಯಿಂದ ಮುಕ್ತನಾದಾಗ ಅವನು ಪರಮಾತ್ಮನಾಗುತ್ತಾನೆ. ೨೭. ಕಲ್ಲಿನಲ್ಲಿ ಹೊನ್ನಿಲ್ಲ, ಹಾಲಿನಲ್ಲಿ ತುಪ್ಪವಿಲ್ಲ ಎನ್ನುವುದು ಸಲ್ಲ ; ಅವು ಇವೆ. ಹಾಗೆಯೇ ದೇಹದಲ್ಲಿ ಆತ್ಮನಿಲ್ಲ ಎಂದು ಹೇಳುವುದೇಕೆ ? ಕುರುಡನಿಗೆ ಯಾವು ವಸ್ತುವೂ ಕಾಣದಿದ್ದಲ್ಲಿ ಆ ವಸ್ತುವೇ ಇಲ್ಲವೆಂದು ಹೇಳಲಾದೀತೆ? ಈ ವ್ಯತ್ಯಾಸವನ್ನು ಭೇದಿಸಿಕೊಳ್ಳಬಲ್ಲವನಿಗೆ ಆತ್ಮನು ಇದ್ದಾನೆ ಎಂಬುದು ಗೊತ್ತಾಗುತ್ತದೆ. ೨೮. ಎಲ್ಲವನ್ನೂ ಮಾಡುವವನು ಆತ್ಮನು. ಮಾಡಿದುದರ ಫಲವನ್ನುಣ್ಣುವವನೂ ಅವನೇ. ಪಾಪದ ಕಡಲಲ್ಲಿ ಓಲಾಡುವುದಿದ್ದರೂ, ಗುಣ (ಪುಣ್ಯ) ಸಾಗರದಲ್ಲಿ ಸೇರಿಕೊಳ್ಳುವುದಿದ್ದರೂ,