________________
೬೮
ಯಶೋಧರ ಚರಿತೆ
ಪರಮಾತ್ಮನನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ ಕೇವಲ ವಿಬೋಧನೇತ್ರನೆ ದೇವನೆ ಪರಮಾತ್ಮನಾಗಮಂ ತದ್ವಚನಂ ಜೀವದಯೆ ಧರ್ಮಮೆಂಬೀ ಭಾವನೆಯಂ ನೆಲೆಯೆ ನಂಬುವುದು ಸತ್ಯಕ್ಷಂ ಕೊಲೆಯಾಗದು ಪುಸಿಯಾಗದು ಕಳಲಾಗದು ಪುರ ಪೆಂಡಿರೊಳ್ ತನ್ನ ಮನಂ ಸಲಲಾಗದು ತೀರದುದಕಲವರಲಾಗದು ಪರಿಯಂ ಬಯಸುವವಂ
ಇವು ಮೊತ್ತಮೊದಲಣುವ್ರತಮಿವು ಮಸುಳದೆ ನಡೆದೊಡ್ಡೆಹಿಕಾಮುಕಮಂಬಿವತೋಳ್ ಸಮಸುಖಿಯಪ್ಪಂ ಭವಭವದೊಳ್ ದುಃಖಿಯಪ್ಪನಿವು ಮಸುಳ್ಳಾತಂ ಮಾಡಿದ ಕೋಟೆಯನಚಿದರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬ‌್ರ ಗೂಡಿನ ಕೋಟೆಗಳಾದರ್ ನೋಡಮ್ ಮತ್ತೊರ್ಮೆ ಬಲಿ ತಿರ್ಯಗ್ಧತಿಯೊಳ್
೩೩ ಜನಸಮುದ್ರವನ್ನು ದಾಟುವುದಿದ್ದರೂ ಆತನಿಂದ ಮಾತ್ರ ಸಾಧ್ಯ. ೨೯, ಹಾಗಾದರೆ ಪರಮಾತ್ಮನು ಹೇಗಿರುತ್ತಾನೆ ಎನ್ನುವುದಾದರೆ ಅವನು ಕಟ್ಟಕಡೆಗೆ (ಚರಮ) ದೇಹವನ್ನು ಧರಿಸಿ ಅನಂತರ ಪುನಃ ದೇಹವನ್ನು ಧರಿಸದವನು. ಎಲ್ಲ ಲೋಕಗಳಿಗೆ ಸಮಾನನಾಗಿರುತ್ತಾನೆ ಅವನು, ಅವಯವಗಳೇ ಇಲ್ಲದವನಾಗಿ ನಿತ್ಯನಾಗಿ ಯಾವ ಪಾಪಕ್ಕೂ ಪಕ್ಕಾಗದವನಾಗಿ ಅನಂತಜ್ಞಾನ, ಅನಂತದರ್ಶನ, ಅನಂತ ಸೌಖ್ಯ ವುಳ್ಳವನಾಗಿರುತ್ತಾನೆ. ೩೦. ಕೇವಲಜ್ಞಾನವೇ ಕಣ್ಣಾಗಿರುವ ಆ ದೇವನೆ ಪರಮಾತ್ಮನು. ಅವನ ಮಾತೇ ಆಗಮ, ಜೀವದಯೆಯೇ ಧರ್ಮ ಎನ್ನುವ ಭಾವನೆಯನ್ನು ಚೆನ್ನಾಗಿ ನಂಬುವುದನ್ನು ಸಮ್ಯಕ್ಷ ಎನ್ನುತ್ತಾರೆ. ೩೧. ಮೇಲುಲೋಕವನ್ನು ಬಯಸುವವನು ಕೊಲೆ ಮಾಡಬಾರದು, ಸುಳ್ಳು ಹೇಳಬಾರದು, ಪರಸ್ತ್ರೀಯರ ಮೇಲೆ ಮನಸ್ಸು ಮಾಡಬಾರದು, ಎಂದೂ ಕಳವು ಮಾಡಬಾರದು, ಆಗದುದಕ್ಕೆ, ಆಸೆಪಡಬಾರದು. ೩೨. ಇವೇ ಮೊತ್ತ ಮೊದಲಿನ ಅಣುವ್ರತಗಳೆನ್ನಿಸಿವೆ. ಇವುಗಳಿಗೆ ಮಾಲಿನ್ಯವುಂಟಾದಂತೆ ಆಚರಿಸಿದವನು ಇಹಪರ ಲೋಕಗಳ ಸುಖಗಳನ್ನು ಯಾವ ಏರಿಳಿತವೂ ಇಲ್ಲದೆ ಅನುಭವಿಸುತ್ತಾನೆ. ಇವುಗಳಿಗೆ ಮಲಿನತೆಯುಂಟಾದಲ್ಲಿ, ಅಂಥವನು ಜನ್ಮಜನ್ಮಾಂತರಗಳಲ್ಲಿಯೂ ದುಃಖಭಾಜನನಾಗುತ್ತಾನೆ. ೩೩. ಕೃತಕವಾಗಿ ಒಂದು ಕೋಳಿಯನ್ನು ತಯಾರಿಸಿ ಅದನ್ನು ಕೊಂದ ಯಶೋಧರ ಮತ್ತು ಚಂದ್ರಮತಿ ಎಂಬಿಬ್ಬರೂ ಸತ್ತ ಮೇಲೆ ಜನ್ಮಾಂತರಗಳನ್ನೆತ್ತಿ ಈಗ ಮತ್ತೊಮ್ಮೆಗೂಡಿನ ಕೋಳಿಗಳಾಗಿ