________________
೯೦
ಯಶೋಧರ ಚರಿತೆ ಸುವಸ್ತುಗಳು ಹೇಂಟೆ (ಪೇಂಟೆ-ಪೇಟೆ)ಯಲ್ಲಿ ಸುವಸ್ತುಗಳು ಸೇರಿರುತ್ತದೆ. ಹಾಗೆಯೇ ಹುಂಜ ಹೇಂಟೆಯಲ್ಲಿ ಸೇರಿದೆ. ಈ ರೀತಿ ಶ್ಲೇಷೆಯಿಂದ ಹುಂಜವನ್ನು ವರ್ಣಿಸಿದ್ದಾನೆ ಕವಿ.
೫೬. ಹುತ್ತದೊಳಗೆ ಯಾವುದಾದರೂ ಹಾವು ಇರುವುದೆಂದು ಹೇಳಿಕೆ. ಹಾಗೆಯೇ ಸನ್ಯಾಸಿಗಳಲ್ಲಿ ಏನಾದರೂ ಮಹತ್ವವಿರುತ್ತದೆ ಎಂದು ಭಾವ.
೫೭. ಆಸನ್ನಭವ್ಯ ಎಂದರೆ ಭವ್ಯವಾಗುವ ಸ್ಥಿತಿಗೆ ಸಮೀಪಿಸಿದವನು. ಭವ್ಯ ಎಂಬುದಕ್ಕೆ ಟಿಪ್ಪಣಿಯ ೨೮ನೆಯ ಸಂಖ್ಯೆಯ ಮುಂದೆ ನೋಡಿಕೊಳ್ಳಬಹುದು. ಅವಧಿ ಜ್ಞಾನ ಎಂದರೆ ದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವ ಇವುಗಳಿಂದ ಮರ್ಯಾದಿತವಾದ ಪದಾರ್ಥಗಳನ್ನು ಮತ್ತು ಕರ್ಮಬದ್ಧ ಜೀವಗಳ ಅನೇಕ ಭವಗಳನ್ನು ತಿಳಿದುಕೊಳ್ಳುವ
ಜ್ಞಾನ.
- ೫೮, 'ರತ್ನತ್ರಯಗಳಲ್ಲಿ ಸ್ಥಿರವಾಗಿ ಪ್ರಾಣತ್ಯಾಗ ಮಾಡುವ ಕ್ರಮ' ಎಂದರೆ ಧ್ಯಾನ ಮಾಡುತ್ತಿರುವಂತೆ ಪ್ರಾಣ ಕಳೆದುಕೊಳ್ಳುವಿಕೆ.
೫೯. ಹೂದೋಟದಲ್ಲಿ ಬಳ್ಳಿಯನ್ನು ನೆಟ್ಟು ನೀರೆರೆದು ಚಪ್ಪರಕ್ಕೆ ಹಬ್ಬಿಸುವಂತೆ ಇಲ್ಲಿ ಯಶೋಧರನು ದಾನಮಾಡುತ್ತ ದಯಾಪರನಾಗಿ ಜನಮತದಲ್ಲಿ ಸಂತೋಷದಿಂದಿದ್ದು ಕೀರ್ತಿಕುಸುಮವನ್ನು ಅರಳಿಸಿದನು ಎಂದು ತಾತ್ಪರ್ಯ.
೬೦. ಯಶಸ್ಸು ಬೆಳ್ಳಗಿದೆಯೆಂದು ಕವಿಸಮಯ. ಈ ಯಶಸ್ಸಿಗೆ ಉಪಮಾನವಾಗಿ ಅನೇಕ ಶುಭವಸ್ತುಗಳ ಹೆಸರನ್ನು ಹೇಳಲಾಗಿದೆ. ತಾರಾ-ಬೆಳ್ಳಿ ಅಥವಾ ನಕ್ಷತ್ರ. ತಾರಧರಾಧರ (ತಾರ-ಬೆಳ್ಳಿ; ಧರಾಧರ-ಪರ್ವತ)-ಬೆಳ್ಳಿಯ ಬೆಟ್ಟ, ತಾರಾ ಎಂದು ಮಾತ್ರ ಇಟ್ಟುಕೊಂಡರೆ ಇಲ್ಲಿಯೂ ನಕ್ಷತ್ರ ಅಥವಾ ಬೆಳ್ಳಿ ಎನ್ನಬಹುದು. ತಾರಾಧರ ಎಂದಿದ್ದರೆ ಚಂದ್ರ ಎನ್ನಬಹುದು. ದರತಾರಹಾರ ಎಂದಾದರೆ ಸಣ್ಣ ಮುತ್ತಿನಮಾಲೆ ಎನ್ನಬಹುದು. ಈ ಭಾಗದಲ್ಲಿ ಬೇಕಾದಂತೆ ಅರ್ಥ ಹೇಳುವ ಸಾಧ್ಯತೆಯಿದೆ.
ಕವಿಗೆ ಯಶೋಧರ ಎಂಬ ಹೆಸರೂ ಕವಿತಿಲಕ ಎಂಬ ಹೆಸರೂ ಇಲ್ಲಿ ಬರಬೇಕಾಗಿದೆ. ಆದುದರಿಂದ ಇಂತಹ ಪ್ರಯೋಗ ಇಲ್ಲಿದೆ. 'ಕವಿಶ್ರೇಷ್ಠನು ನಿರ್ಮಲ ಕೀರ್ತಿಯನ್ನು ಪಡೆದಿದ್ದಾನೆ' ಎಂದು ಹೇಳಬಹುದು.