________________
೬೦
ಎಂಬ ನುಡಿಗಳುಮೋಪಳ್ ಪಾನ ಕೂಡಿದ ನಣ್ಣುಗಂಡುಂ ತಮದಿಂ ದಂ ಬೆಂದು ಸತ್ತುದರೆಗೊ ಯುಣ್ಣುದಂ ನೊಂದು ಸತ್ತುದಿಲ್ಲಜಪೋತಂ
ಆ ರೌದ್ರಹತಿಗೆ ತವೆ ಸಂ
ಸಾರಂ ತತ್ಪುರದ ಪೋಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ
ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಳ್
ಕರಮೇಯುಳ್ಳ ಒಳ್ಳೆಗ
ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾದರನಿತ್ತು ಚಂಡಕರ್ಮ೦
ಗರಸನವಂ ನೋಡಿ ಸಲಹು ನೀನೆಂದಿತ್ತಂ
ಯಶೋಧರ ಚರಿತೆ
ವಿಸರುಹದಂತೆ ಕೇಸರಮನಾಂತುದು ಮೆಯ್ಯಲಿಯಂತಿರಾರೆ ಕೂ ರ್ಪೆಸೆದುದು ಚಾಗಿಯಂತೆ ನೆ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದ ರಂಜಿಸಿದುದು ಪುಂಜನಗ್ಗದ ಸುವಸ್ತುವಿನಂತಿಗೆ ತಳ್ಳು ಹೇಂಟೆಯೊಳ್
28
22
ನ
2.es
ಹೇಳಿನೋಡಿದನು. ಆದರೂ ಇವಳು ಅವುಗಳನ್ನು ಬಿಡಲೊಲ್ಲಳು. ಇವಳಿಗೆ ಅತ್ಯಂತ ದುರ್ಘಟವಾದ ನರಕದ ಮೇಲೆಯೇ ಮೆಚ್ಚಿಗೆಯಾಗಿರಬೇಕು.” ೭೫. ಈ ಮಾತನ್ನೆಲ್ಲ ಆ ಎಳೆಯ ಹೋತ ಕೇಳಿತು. ಅದು, ತನ್ನ ಹೆಂಡತಿಯೆನ್ನಿಸಿದ್ದವಳು ಜಾರನನ್ನು ಕೂಡಿಕೊಂಡಿದ್ದ ರೀತಿಯನ್ನು ಕಂಡಿತು. ಈ ಎರಡು ಬಗೆಯ ಕತ್ತಲು ಕವಿದು, ಸಂತಾಪದಿಂದ ಬೆಂದು, ಆ ಹೋತ ತನ್ನ ಪ್ರಾಣವನ್ನು ಕಳೆದುಕೊಂಡಿತಲ್ಲದೆ, ತನ್ನನ್ನು ಅರ್ಧ ಕಡಿದು ಮಾಂಸ ತೆಗೆದು ಉಣ್ಣುವುದರಿಂದಾಗಿ ನೊಂದು ಸತ್ತುದೇ ಅಲ್ಲ. ೭೬. ಭಯಂಕರವಾದ ಹತ್ಯೆಗೆ ಒಳಗಾಗಿ ಆ ಕೋಣವೂ ಹೋತವೂ ತಮ್ಮ ಜನ್ಮವನ್ನು
ನೀಗಿಕೊಂಡವು. ಅವೆರಡೂ ಆ ನಗರದ ಹೊರವಳಯದ ಹೊಲೆಗೇರಿಯ ಮಾದರ ಮನೆಯ ಕೋಳಿಯ ಗರ್ಭದಲ್ಲಿ ಜನ್ಮ ತಾಳಿದುವು. ಮಾದರವನಿಗೆ ಈ ಎರಡೂ ಕೋಳಿಗಳ ಬೆಳವಣಿಗೆಯನ್ನು ಕಂಡು, ಇವುಗಳನ್ನು ಅರಸನಿಗೆ ಒಪ್ಪಿಸುವುದು ವಿಹಿತವೆಂದು ತೋರಿತು. ೭೭. ಅವನು ಬಲಿತ ಆ ಎರಡನ್ನೂ ಯಶೋಮತಿಗೆ ಸಲ್ಲಿಸಿದನು. ಅರಸನು ಅವುಗಳನ್ನು ನೋಡಿ, ಚಂಡಕರ್ಮನಿಗೆ ಅವುಗಳನ್ನು ಕೊಟ್ಟು ಸಾಕುವಂತೆ ಹೇಳಿದನು. 2.05. ಹುಂಜವು ತಾವರೆಯಂತೆ ಕೇಸರವನ್ನು ಪಡೆದುಕೊಂಡಿತು. ವೀರನಂತೆ ಅದರ ಕೂಗಿಗೆ ಕೂರ್ಪುಂಟಾಯಿತು. ತ್ಯಾಗಿಯಂತೆ ಅದರ ಕೊಟ್ಟು ಶೋಭಿಸಿತು. ರಾಧೆಯಂತೆ ತಲೆ ಮುಡಿ ಎತ್ತರದಲ್ಲಿ ಕೊಂಕುಗೊಂಡಿತು. ಚಂದ್ರನಂತೆ ಅದು ಒಳ್ಳೆಯ ಪಕ್ಷಗಳಿಂದ ಸೊಗಯಿಸಿತು. ಹೇಂಟೆಯನ್ನು ಸೇರಿ