________________
ಎರಡನೆಯ ಅವತಾರ
ಆ ವಿಕಟಾಂಗನೋಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್ ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದದ್ದಂತೆ ಪತಿಯೊಳಿಳಿದಾಯ್ತು ಮನಂ
ನೋಡುವ ಮಾತಾಡುವ ಬಾ
ಯೂಡುವ ಪದನಮೃತಮತಿಗೆ ಪೂರ್ವಸ್ಥಿತಿಯಂ ಪಾಡಡೆಯುತ್ತಿರೆ ನೋಡಲ್
ವೇಡಿ ಯಶೋಧರನದೊರ್ಮೆ ಶಯಾತಳದೊಳ್
ಮದೋಆಗಿದನಂತೆವೊಲಿಗೆ
ಪಮೆ ಪಗಲ್ ಮುಗಿಯೇ ಸಿಲ್ಕಿ ಕೈರವದಿನಿರುಳ್ ಪೊಱಮಡುವಂತರಸನ ತೋ
ಕೈತೆಯಿಂ ನುಸುಳರಸಿ ಜಾರನಲ್ಲಿಗೆ ಪೋದಳ
ಬೆನ್ನೊಳೆ ಪೋದಂ ದೋಷದ
ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ ಚನ್ನದಿನುರ್ಚಿದ ಬಾಳ್ವೆರ ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಮುಳಿದಾಕೆ ತಂದ ಮಾಲಾ
ಮಳಯಜ ತಾಂಬೂಲಜಾಲಮಂ ಕೆದಣಿ ಕುರು
ಛಳನೆದು ಬೆನ್ನ ಮಿಳಿಯಿಂ ಕಳಹಂಸೆಗೆ ಗಿಡಗನೆ ಆಗಿದಂತಿರೆ ಬಡಿದಂ
೩೯
೪೫
೪೬
೪೭
೪೮
೪೯
ಆತನೊಡನಾಟದಲ್ಲಿಯೇ ಕಾಲ ಕಳೆಯತೊಡಗಿದಳು. ೪೫. ಸೌಂದರ್ಯದ ಅಧಿದೇವತೆಯಂತಿದ್ದ ಅಮೃತಮತಿಗೆ ಆ ವಿಕಟಾಂಗನ ಒಡನಾಟದಲ್ಲಿಯೂ ಕೂಟದಲ್ಲಿಯೂ ಬಹಳ ಸವಿಯೇ ಕಂಡಿತು. ಬೇವನ್ನು ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ ? ಅಮೃತಮತಿಗೂ ಯಶೋಧರನಲ್ಲಿ ಮನಸ್ಸು ಮುರುಟಿ ಹೋಯಿತು. ೪೬. ತನ್ನ ಪತಿಯನ್ನು ನೋಡುವ ಹೊತ್ತಿಗೆ, ಅವನೊಡನೆ ಮಾತಾಡುವ ಸಂದರ್ಭದಲ್ಲಿ, ಮುದ್ದಿಸುವ ಸನ್ನಿವೇಶದಲ್ಲಿ ಅಮೃತಮತಿ ಮೊದಲಿನಂತಿಲ್ಲವಾದಳು. ಇದನ್ನು ಗಮನಿಸಿದ ಯಶೋಧರ, ಚೆನ್ನಾಗಿ ಪರಾಂಬರಿಸಬೇಕೆಂಬೆಣಿಕೆ ಅವನ ಮನಸ್ಸಿನಲ್ಲಿ ಮೊಳೆಯಿತು. ೪೭. ಅವನು ಒಮ್ಮೆ ಹಾಸಿಗೆಯಲ್ಲಿ ಮೆಯರೆದು ನಿದ್ರಿಸಿದಂತೆ ನಟಿಸಿದನು. ಆಗ ಅಮೃತಮತಿಯು ನೈದಿಲೆಯೊಳಗೆ ಸಿಕ್ಕಿಬಿದ್ದ ಹೆಣ್ಣು ತುಂಬಿ, ಹಗಲು ಕಳೆದಾಗ ಅದರೊಳಗಿಂದ ಹೊರಹೊರಡುವಂತೆ ಪತಿಯ ಬಾಹು ಬಂಧನದಿಂದ ಬಿಡಿಸಿಕೊಂಡು ತನ್ನ ಜಾರನಲ್ಲಿಗೆ ಹೋದಳು. ೪೮. ಯಶೋಧರನೂ ಎದ್ದನು. ದೋಷವನ್ನು ಹಿಂಬಾಲಿಸಿಕೊಂಡು ಹೋಗುವ ದಂಡನೆಯಂತೆ ಕೈಯಲ್ಲಿ ಹಿರಿದ ಖಡ್ಗವನ್ನು ಹಿಡಿದುಕೊಂಡು, ಅವನು ಯಾರ ಕಣ್ಣಿಗೂ ಬೀಳದಂತೆ ಅವಳ ಹಿಂದೆಯೇ ಹೋದನು. ಅತ್ತ ಆ ಅಲ್ಪಮನುಷ್ಯನು ರಾಣಿ ಸಕಾಲಕ್ಕೆ ಅವನ ಬಳಿ ಬಾರದುದಕ್ಕೆ ಸಿಟ್ಟಿನಿಂದ ಉರಿಯುತ್ತಿದ್ದನು. ೪೯. ಆಕೆ ತಂದ ಹೂ ಗಂಧ ತಾಂಬೂಲ ಮುಂತಾದುವುಗಳನ್ನೆಲ್ಲ ಚೆಲ್ಲಿ ಕೆದರಿದನು, ಅವಳ ಕೂದಲನ್ನು ಹಿಡಿದೆಳೆದು, ಗಿಡುಗನು