________________
೪೬
ಕೊಜತೆ ನಿನಗಿಲ್ಲದೇಕೆಂ ದತಿಯಂ ನೀರೋಡಿ ನಿನ್ನ ತನುವಿನ ಬಣ್ಣಂ ಬಲುಗೊಳದವೊಲಾಯ್ತಕ್ಷಿಸಿ
ಮಡುಗಿದುದು ನೀರ ಮೀಸ್ಟೋಲಿಂದೆನ್ನ ಮನಂ
ಮಂದಸ್ಮಿತ ವರ ಕೌಮುದಿ
ನಿಂದುದು ಮೃಗನಾಭಿ ತಿಲಕಲಕ್ಷ ದ ಪೊಳಪಿ ಇಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲವದನಂ
ಎಂದು ಬೆಸಗೊಂಡ ತಾಯ್ಕೆ ಮ
ನಂದೋದ ನವದಿನರಸನಿಂತುಸಿರ್ದ೦ ಸುಮ್
ಕಂದಿಸಿದಧರಕ್ಕೆ ಸುಧಾ
ಬಿಂದುಗಳಂ ತಳೆಯೆ ದಂತಕಾಂತಿಪ್ರಸರಂ
ದೇವಿಯರ ಪರಕೆಯಿಂದನ
ಗಾವುದeಳ್ ಕೊಂತೆಯಿಲ್ಲ ಪೋದಿರುಳೊಳ್ ಪೊಂ
ದಾವರೆಗಳದಂಚೆ ಕ ಲಾವರೆಗೊಳದೊಳಗೆ ನಲಿವ ಕನಸ ಕಂಡಂ
ಗೋದಾಮಗಂಡ ನವಿಲಂ
ತಾದುದು ಕಾರ್ಗಂಡ ಹಂಸನವೊಲಾದುದಲ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣೆಗೆನ್ನಯ ಚಿತ್ತು
ಯಶೋಧರ ಚರಿತೆ
೬
2
లా
€
00
೬. ನಿನಗೆ ಯಾವ ಬಗೆಯ ಕೊರತೆಯೂ ಈವರೆಗಿಲ್ಲ. ಆದರೆ ನಿನ್ನ ದೇಹಕಾಂತಿ ನೀರು ಕಳೆದುಕೊಂಡು ಒಣಕೆರೆಯಂತಾಗಿದೆ. ಇದೇಕೆಂದು ನನಗೆ ತಿಳಿಯುವುದಿಲ್ಲ. ನಿನ್ನನ್ನು ನೋಡುವಾಗ, ಇಂದು ನನ್ನ ಮನಸ್ಸು ನೀರಾರಿದ ಕೊಳದ ಮೀನಿನಂತೆ ಮರುಕಕ್ಕೊಳಗಾಗಿದೆ. ೭. ಕಂದ, ತಿಂಗಳ ಬೆಳಕಿನಂತಹ ನಿನ್ನ ಮುಗುಳುನಗೆ ಇಂದು ಇಲ್ಲವಾಗಿದೆ. ಕಸ್ತೂರಿತಿಲಕದ ಗುರುತೇ ಶೋಭಿಸುವುದಿಲ್ಲವೇಕೆ ? ನಿನ್ನ ಮಂಗಲ ಮುಖವು ಹಗಲು ಮೂಡಿದ ಚಂದ್ರನಂತಾಗಿದೆಯಲ್ಲ ! ಇದೇಕೆ, ಮಗು ?” ೮. ಹೀಗೆ ಕೇಳಿದ ತಾಯಿಗೆ ತನ್ನ ಮನಸ್ಸಿನಲ್ಲಿರುವುದನ್ನು ತೋರಿಸದೆ ಬೇರೊಂದು ನೆಪವನ್ನು ಹೀಗೆ ಹೇಳಿದನು. ನಿಟ್ಟುಸಿರಿನಿಂದ ಕಂದಿದ ತುಟಿಗಳಿಗೆ ಹಲ್ಲಿನ ಕಾಂತಿಯು ಅಮೃತದ ಬಿಂದುಗಳನ್ನು ತಳಿಯಿತು. ೯. “ಅಮ್ಮಾ ದೇವಿಯರಾದ ನಿಮ್ಮ ಆಶೀರ್ವಾದಬಲದಿಂದ ನನಗೇನೂ ಕೊರತೆಯಿಲ್ಲ ತಾಯಿ! ಆದರೆ ನಿನ್ನೆ ರಾತ್ರಿ ಒಂದು ವಿಚಿತ್ರವಾದ ಕನಸನ್ನು ಕಂಡೆನಮ್ಮ! ಅದರಲ್ಲಿ ಸ್ವರ್ಣ ವರ್ಣದ ತಾವರೆಗಳ ಕೊಳದಲ್ಲಿ ವಿಹರಿಸುತ್ತಿದ್ದ ಒಂದು ಹಂಸ ಕೊಳಕು ಕೋವಳೆಯ ಕೊಳದಲ್ಲಿ ಸಂತೋಷದಿಂದ ವಿಹರಿಸುವುದನ್ನು ಕಂಡೆ. ೧೦. ಇಂತಹ ಹೊಲಸಿನ ಘಟನೆಯನ್ನು ಕಂಡ ಬಳಿಕ ನನ್ನ ಮನಸ್ಸು ಗೋದಾಮೆಯನ್ನು ಕಂಡ ನವಿಲಿನಂತೆ ಆಯಿತು, ಮಳೆಗಾಲವನ್ನು ಕಂಡ ಹಂಸದಂತೆ ತಳಮಳಿಸಿತು. ಮಾತ್ರವಲ್ಲ, ಹೂಬಿಡದ ಲತೆಗಳನ್ನು ಕಂಡ ವಿರಹಿಯಂತೆ