________________
まと
ಮನದನ್ನಳಪ್ಪ ಕೆಳದಿಗೆ
ಮನಮಂ ಮುಂದಿಟ್ಟು ಬಟ್ಟೆಕ ಕಡೆಪಿದೊಡ್ಡವಳಾ ತನ ರೂಪುಗಂಡು ಕಣ್ಣಂ
ಮನಕ್ಕಮುದ್ದಾರವೆತ್ತು ಭೋಂಕನೆ ಮಗುಳ್ಳಳ್
ಅಮೃತಮತಿಯೆತ್ತ ರೂಪಾ ಧಮನಷ್ಟಾವಂಕನತ್ತ ಚಿತ್ರಮಪಾತ್ರೆ ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
ಎನುತುಂ ಬಂದು ವಿಷಣ್ಣಾ ನನೆಯಂ ಮಾರ್ಗಾವಲಗ್ನನೇತ್ರೆಯನುಚ್ಛಾ ಸನಿತಪ್ತಾಧರರುಚಿಯಂ ಮನುಜೇಂದ್ರಾಂಗನೆಯನೆಯೇ ಕಂಡಂತೆಂದಲ್
' ವ
ಕಂತುವಿನ ಕಯ್ಯ ಕೂರಸಿ
ಯಂತಿರೆ ಗರಗರಿಕೆವಡೆದು ಪೊಳೆವಸಯಳೆ ನೀ
ನಿಂತಪ್ಪ ಕಾಮದೇವಂ ಗೆಂತೆಂತಾಯ್ತಲ್ಲಿಸಿ ಕೂರ್ತೆಯೆಂದಾನ
ಯಂ
ಯಶೋಧರ ಚರಿತೆ
2,2
೩೪
2.9
೩೬
೩೩. ಬೆಳಗಾದ ಕೂಡಲೇ ಅವಳು ತನ್ನ ನಚ್ಚುಮೆಚ್ಚಿನ ಗೆಳತಿಯನ್ನು ಕರೆದಳು. ಅವಳೊಡನೆ ತನ್ನ ಅಂತರಂಗದ ಬಯಕೆಯನ್ನೆಲ್ಲ ಬಯಲು ಮಾಡಿದಳು. ಮಾವುತನ ಬಳಿಗೆ ಆಕೆಯನ್ನು ಕಳುಹಿಸಿಕೊಟ್ಟಳು. ಒಡತಿಯ ಅಪ್ಪಣೆಯ ಪ್ರಕಾರ ಅವಳು ಮಾವುತನ ಬಳಿಗೆ ನಡೆದಳು. ಅವನನ್ನು ದೂರದಿಂದ ಕಂಡುದೇ ತಡ, ಅವಳ ಕಣ್ಣಿಗೂ ಮನಸ್ಸಿಗೂ ಓಕರಿಕೆಯುಂಟಾಯಿತು. ಅವಳಿಗೆ ಅಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗದೆ ಕೂಡಲೆ ಹಿಂತಿರುಗಿದಳು. ೩೪. “ಅಯ್ಯೋ ದೇವರೇ ! ಅಮೃತಮತಿಯಲ್ಲಿ, ರೂಪಾಧಮನಾದ ಅಷ್ಟಾವಂಕನೆಲ್ಲಿ ? 'ಚಿತ್ರಂ ! ಆಪಾತ್ರೆ ರಮತೇ ನಾರಿ' (ಆಶ್ಚರ್ಯ! ಹೆಂಗಸು ಅಯೋಗ್ಯನೊಡನೆ ರಮಿಸುತ್ತಾಳೆ!) ಎಂಬ ಮಾತು ಸಂಭವಿಸಿತಲ್ಲ ! ಆ ಸುಟ್ಟ ವಿಧಿಗೆ ಕಣೋ ಇಲ್ಲವೋ !” ೩೫. ಎಂದೆಲ್ಲ ಯೋಚನೆ ಅವಳ ತಲೆಯಲ್ಲಿ ಸುಳಿಯಿತು. ಇದನ್ನೇ ಹೊತ್ತು ಅವಳು ಮರಳಿದಳು. ಇಲ್ಲಿ ನೋಡುವುದೇನು ? ಆ ರಾಜೇಂದ್ರನ ಪತ್ನಿ ಅಮೃತಮತಿ ಮುಖ ಬಾಡಿಸಿಕೊಂಡೇ ಇದ್ದಾಳೆ. ತನ್ನ ಗೆಳತಿ ಯಾವಾಗ ಮರಳಿಯಾಳು ಎಂದು ಅವಳು ಬರುವ ದಾರಿಯಲ್ಲೇ ಕಣ್ಣಿಟ್ಟು ಕೊಂಡಿದ್ದಾಳೆ. ಬಿಡುವ ಬಿಸಿಯುಸಿರು ತಾಗಿ ತುಟಿಯ ಸಹಜವಾದ ಕೆಂಬಣ್ಣವೆಲ್ಲ ಕಳೆದುಹೋಗಿದೆ. ಹೀಗೆ ಉತ್ಕಂಠಿತೆಯಾಗಿದ್ದ ಒಡತಿಯನ್ನು ಸಮೀಪಿಸಿ ಅವಳು ಹೇಳಿದಳು. ೩೬. ಕಾಮನ ಕೈಯ ಖಡ್ಗದಂತೆ ಬಹಳ ಚೆಲುವನ್ನು ಪಡೆದು ಶೋಭಿಸುವ ತನುಗಾತ್ರಿ ನೀನು. ಇಂತಹ ನೀನು, ಈ ಬಗೆಯ ಕಾಮದೇವನನ್ನು ಹೇಗೆ ಶೋಧನೆ ಮಾಡಿದೆ ! ಹೇಗೆ ಒಲಿದೆ ?