________________
ಉಪೋದ್ಘಾತ
ವಾಮಃ ಕಾಮೋ ಮನುಷ್ಯಾಣಾಂ ಯಸಿನ್ ಕಿಲ ನಿಬಧ್ಯತೇ | ಜನೇ ತಸ್ಮಿನ್ ಸೃನುಶಃ ಸ್ನೇಹಶ್ಚ ಕಿಲ ಜಾಯತೇ ||
(ವಾಲ್ಮೀಕಿರಾಮಾಯಣ : ಸುಂದರಕಾಡ, ಸರ್ಗ ೨೨, ಶ್ಲೋ ೪೨) (ಮನುಷ್ಯರಿಗೆ ಕಾಮವೆಂಬುದು ಬಹಳ ವಕ್ರವಾದುದು. ಆ ಕಾಮವು ಯಾರಲ್ಲಿ ಪ್ರವರ್ತಿಸುವುದೋ ಆ ಜನ್ಮದಲ್ಲಿ ದಯೆಯೂ ಸ್ನೇಹವೂ ಹುಟ್ಟಿಬಿಡುವುದು) ಎಂಬ ಮಾತಿನಂತೆ ಆ 'ಜಾರ'ನಿಗೆ ಅವಳಲ್ಲಿ ದಯೆಯೂ ಇರಲಿಲ್ಲ: ಸ್ನೇಹವೂ ಇರಲಿಲ್ಲ. ಇಷ್ಟರಿಂದ ಸಿದ್ಧವಾಗುವುದು ಒಂದೇ ಒಂದು : ಅಮೃತಮತಿ ಬರಿಯ ಕಾಮುಕಸ್ಲಿ; ಜಾರೆ; ಜಾರಿದವಳು; ತಾನಾಗಿಯೇ ಜಾರುವುದಕ್ಕೆ ಹೋದವಳು; ಅದನ್ನೇ ಮೆಚ್ಚಿದವಳು. ಅವಳ ವರ್ತನೆ ಸರ್ವಥಾ ನಿಂದನೀಯ; ಸರ್ವಾತ್ಮನಾ ಖಂಡನೀಯ!
ಈ ಕೃತಿಯಲ್ಲಿ ಬರುವ ಬೇರೆ ಕೆಲವು ಸಮಸ್ಯೆಗಳನ್ನು ಇನ್ನು ನೋಡಬಹುದು: ಯಶೋಧರ ಮತ್ತು ಚಂದ್ರಮತಿ ಸಂಕಲ್ಪ ಹಿಂಸೆಯಿಂದ ಆರು ಬಾರಿ ತಿರದ್ಯೋನಿಯಲ್ಲಿ ಜನ್ಮವೆತ್ತಿ ಸತ್ತು, ಕೋಳಿಯ (ಆರನೆಯ) ಜನ್ಮದಲ್ಲಿದ್ದಾಗ ವ್ರತವನ್ನು ಧರಿಸಿದ ಕಾರಣದಿಂದ ಮನುಷ್ಯಜನವನ್ನು ಪಡೆಯುತ್ತಾರೆ; ಅಭಯರುಚಿ ಅಭಯಮತಿಗಳಾಗಿ ಹುಟ್ಟುತ್ತಾರೆ. ಎಳವೆಯಲ್ಲೇ ಅವರು ಸುದತ್ತಾಚಾರ್ಯರ ಶಿಷ್ಯರಾಗಿ, ಮರಣಾನಂತರ ಈಶಾನಕಲ್ಪದಲ್ಲಿ ಜನಿಸುತ್ತಾರೆ. ಈಶಾನಕಲ್ಪವೆಂದರೆ, ಜೈನರ ಪ್ರಕಾರ, ಹದಿನಾರು ಸ್ವರ್ಗಗಳಲ್ಲಿ ಎರಡನೆಯದು. ಮೂರನೆಯ ಸ್ವರ್ಗವು ಇದಕ್ಕಿಂತ ಮೇಲಿರಬೇಕು ತಾನೆ. ಹಲವುಪ್ರಾಣಿಗಳನ್ನು ಪ್ರತಿವರ್ಷವೂ ಹಿಂಸೆ ಮಾಡುತ್ತಿದ್ದ ಮಾರಿದತ್ತನು ಅಭಯರುಚಿ ಹೇಳಿದ 'ಯಶೋಧರಚರಿತೆ'ಯನ್ನು ಕೇಳಿದ ಮೇಲೆ ಉಗ್ರತಪವನ್ನಾಚರಿಸಿ, ಸಮಾಧಿ ಮರಣದ ಬಳಿಕ ಈ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ.
ಸಂಕಲ್ಪ ಹಿಂಸೆಯಿಂದ-ಕೊಲ್ಲಬೇಕೆಂದು ಎಣಿಸಿಕೊಂಡುದರಿಂದ ಬೇರೆ ಬೇರೆ ಜನ್ಮಗಳನ್ನು ಪಡೆದು, ನವೆದು, ಕಟ್ಟಕಡೆಗೆ ದೊರೆಯುವುದು ಎರಡನೆಯ ಸ್ವರ್ಗ; ನಿರಂತರ ಹಿಂಸೆಯ ಬಳಿಕ ದೊರೆಯುವುದು ಮೂರನೆಯ ಸ್ವರ್ಗ! ಅದೂ ಹಲವು ಜನ್ಮಗಳನ್ನು ಪಡೆಯದೆ, ಎನ್ನುವಾಗ ಸಂಕಲ್ಪಹಿಂಸೆಯೇ ದೊಡ್ಡ ಪಾಪ; ನಿಜವಾದ ಹಿಂಸೆ ಅಷ್ಟು ದೊಡ್ಡ ಪಾಪವಲ್ಲ ಎಂದು ತೋರಲಾರದೆ ? ಇದಕ್ಕೆ ಸಮಾಧಾನ ಹೇಳುವುದಾದರೆ 'ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ' (ಮನುಷ್ಯರ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ) ಎಂಬ ಸೂಕ್ತಿಯನ್ನವಲಂಬಿಸಬೇಕು. ಮಾರಿದತ್ತ ಮಾಡುತ್ತಿದ್ದ ಹಿಂಸೆ ಹಿಂಸೆಯೆಂಬ ಎಣಿಕೆಯಿಂದ ಮಾಡಿದುದಲ್ಲ; ದೇವಿಯ ಅರ್ಚನೆ ಎಂಬ ಭಾವನೆಯಿಂದ. ಯಶೋಧರನಾದರೂ, ಜೀವದಯೆ,ಜೈನಧರ್ಮಂ” ಎಂಬುದನ್ನು ತಿಳಿದೂ, ಹಿಟ್ಟಿನ ಕೋಳಿಯನ್ನು ಕೊಲ್ಲುವುದಕ್ಕೆ ಮನಸು ಮಾಡಿ ಅಪರಾಧವನ್ನು ಪಾಪವನ್ನು ಮಾಡಿದನು ಎನ್ನಬೇಕು.