________________
ಒಂದನೆಯ ಅವತಾರ
ನವ ವೈಯಾಕರಣಂ ತರ್ಕವಿನೋದಂ ಭರತ ಸುರತ ಶಾಸ್ತವಿಳಾಸಂ ಕವಿರಾಜಶೇಖರಂ ಯಾದವರಾಜಚ್ಛತ್ರನಖಿಳಬುಧಜನಮಿತ್ರಂ ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣಿನಾಗರಂ ಪೆಂಪಿನ ಸಂಪದಮಾಯದಾಯುವಾರೆಂಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ ಕನ್ನರನಾದರದಿಂ ಕುಡೆ | ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ ಮನ್ನಿಸಿ ಬಲ್ಲಾಳಂ ಕುಡೆ ಜನ್ನ ಕವಿಚಕ್ರವರ್ತಿವೆಸರು ಪಡೆದರ್ ಶ್ರೀಮತ್ಯಾಣೂರ್ಗಣ ಚಿ೦ತಾಮಣಿಗಲ್ ರಾಮಚಂದ್ರ ಗಂಡವಿಮುಕ್ತರ್ ತಾಮೆ ಗಡ ಗುರುಗಳೆನಿಪ ಮಹಾ ಮಹಿಮೆಗೆ ನೋಂತ ಭಟ್ಕಚೂಡಾರತ್ನಂ ವಾಣೀ ಪಾರ್ವತಿ ಮಾಡಿದ ಜಾಣೆಂತುಟೋ ಭಾಳಲೋಚನಂ ಕವಿಸುಮನೋಬಾಣನ ಮಗನೆಂದಖಿಳ ಕೋಣಿಗೆ ಹೆಸರಾಯ್ತು ಕೂರ್ಮಗಿದು ಕೌತುಕಮೇ
១.
೧೯. ವ್ಯಾಕರಣದಲ್ಲಿ ನಿಷ್ಣಾತನಾಗಿ ನವವೈಯಾಕರಣನೆನ್ನಿಸಿದ್ದರೆ, ತರ್ಕದಲ್ಲಿ ವಿನೋದ ಗೊಳ್ಳುವ ವಿದ್ವತ್ತೆಯನ್ನು ಪಡೆದಿದ್ದಾನೆ. ನಾಟ್ಯಶಾಸ್ತ್ರ, ಕಾಮಶಾಸ್ತ್ರಗಳಲ್ಲಿ ಚೆನ್ನಾದ ತಿಳುವಳಿಕೆ ಪಡೆದು ಬೆಡಗನ್ನು ಕಾಣಿಸಬಲ್ಲ ಜನ್ನನು ಕವಿ ರಾಜಶೇಖರನಾಗಿದ್ದಾನೆ. ಯಾದವ ರಾಜತ್ರನಾಗಿ೧೦ ಎಲ್ಲ ವಿದ್ವಾಂಸರ ಗೆಳೆಯನೆನ್ನಿಸಿದ್ದಾನೆ. ೨೦. ಚಾತುರ್ಯದ ನಿಧಿಯಾಗಿ ಛಲದ ನೆಲೆಯಾಗಿ, ತ್ಯಾಗದ ಸಾಗರವಾಗಿ, ಸಾಹಸದ ಆಗರವಾಗಿ, ಪೆಂಪಿನ ಸಂಪತ್ತು ಎನ್ನಿಸಿ ಆಯದ ಬಾಳುವೆಯುಳ್ಳವನೇ ಜನ್ನನು. ಅವನು ಕಮ್ಮೆಕುಲದ ಆಭರಣದ ರತ್ನವಾಗಿದ್ದಾನೆ. ೨೧. ಹಿಂದೆ ಪೊನ್ನನಿಗೆ ಕನ್ನರನು ಆದರದಿಂದ ಕವಿ ಚಕ್ರವರ್ತಿ ಎಂಬ ಬಿರುದನ್ನಿತ್ತನು. ಆಮೇಲೆ ತೈಲಪನು ಮನಸ್ಸು ಮೆಚ್ಚಿ ರನ್ನನಿಗೆ ಕವಿ ಚಕ್ರವರ್ತಿಯೆಂಬ ಬಿರುದನ್ನು ಕೊಟ್ಟನು. ಜನ್ನನಿಗೆ ಬಲ್ಲಾಳನು ಮನ್ನಣೆಮಾಡಿ ಈ ಕವಿ ಚಕ್ರವರ್ತಿಯೆಂಬ ಬಿರುದನ್ನು ಕೊಟ್ಟಿದ್ದಾನೆ. ೨೨. ಈತನ ಗುರುಗಳು ರಾಮಚಂದ್ರ ಗಂಡವಿಮುಕ್ತರು. ಇವರು ಕಾಣೂರ್ಗಣದ ಚಿಂತಾಮಣಿಗಳಾಗಿದ್ದವರು. ಇಂತಹ ಗುರುಗಳ ಪ್ರಭಾವದಿಂದಲೇ ಜನ್ನನು ಮಹಾಮಹಿಮೆಯನ್ನು ಪಡೆದನು ; ಎಲ್ಲ ಭವ್ಯರಲ್ಲಿ ಕಲೆಯ ರತ್ನದಂತೆ ಮೆರೆದನು. ೨೩. ವಾಣಿಯೂ ಪಾರ್ವತಿಯೂ ಸೇರಿ ಒಂದು ಪವಾಡವನ್ನೇ ಮಾಡಿದರು: ಕವಿ ಸುಮನೋಬಾಣನಿಗೆ ಮಗನಾಗಿ ಕವಿ ಭಾಳ ಲೋಚನನೆಂಬವನಿದ್ದಾನೆ ಎಂಬಂತೆ ಲೋಕಕ್ಕೆಲ್ಲ ಹೆಸರು ಹಬ್ಬಿಸಿದರು. ಅವರು ಪ್ರೀತಿಯಿಂದ ಈ ರೀತಿ ಮಾಡಿದ್ದಾರೆಂದರೆ